ಸಿನಿಮಾ ಹಾಗು ಕಿರುತೆರೆ ಲೋಕದಲ್ಲಿ ತನ್ನದೇ ಅಭಿಮಾನಿ ಬಳಗ ಹೊಂದಿರುವ ನಟ ಚಂದನ್ ಕುಮಾರ್ ಮೇಲೆ ಹೈದರಾಬಾದ್‌ನಲ್ಲಿ ಹಲ್ಲೆ ನಡೆದಿದೆ. ತೆಲುಗಿನ 'ಶ್ರೀಮತಿ ಶ್ರೀನಿವಾಸ್' ಎಂಬ ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದರು. ಈ ಧಾರಾವಾಹಿಗೆ ಸಹಾಯಕ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬ ಏಕಾಏಕಿ ಹಲ್ಲೆ ಮಾಡಿದ್ದಾನೆ.
ಧಾರಾವಾಹಿ ಚಿತ್ರೀಕರಣದ ವೇಳೆ ನಟ ಚಂದನ್ ಮೇಲೆ ಹಲ್ಲೆ ನಡೆದ ಸಂದರ್ಭದ ವಿಡಿಯೋ ಈ ಘಟನೆ ಕುರಿತು ಚಂದನ್ ಕುಮಾರ್ ಪ್ರತಿಕ್ರಿಯೆ:
"ಇದು ಜುಲೈ 31ರ ಮಧ್ಯಾಹ್ನ ನಡೆದ ಘಟನೆ. ಇದನ್ನೂ ಮುನ್ನ ನಾನು ಸ್ವಲ್ಪ ಟೆನ್ಷನ್ನಲ್ಲಿದ್ದೆ. ನನ್ನ ತಾಯಿಗೆ ಹೃದಯ ಸಮಸ್ಯೆ ಆಗಿತ್ತು. ಅವರನ್ನು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದೆ. ಆ ಸಮಯದಲ್ಲೇ ಹೈದರಾಬಾದ್‌ಗೆ ಶೂಟಿಂಗ್‌ಗೆ ಬಂದಿದ್ದೆ. ಆದರೆ, ಇಲ್ಲಿ ಸರಿಯಾಗಿ ಶೂಟಿಂಗ್ ಕೂಡ ನಡೆದಿರಲಿಲ್ಲ. ತಲೆನೋವು ಬೇರೆ ಇತ್ತು. ಹಾಗಾಗಿ, ಸೆಟ್‌ನಲ್ಲಿದ್ದವರಿಗೆ ಹೇಳಿಯೇ ಮಲಗಿದ್ದೆ".
ನಟ ಚಂದನ್ ಕುಮಾರ್ ಫೇಸ್ ಬುಕ್ ಬರಹ "ಅಸಿಸ್ಟೆಂಟ್ ಡೈರೆಕ್ಟರ್ ಸ್ವಲ್ಪ ತರಲೆ. ಹತ್ತು ನಿಮಿಷಕ್ಕೊಮ್ಮೆ ಬಂದು ಕರೀತಿದ್ದ. ಬಂದೆ, ಬಂದೆ ಅಂತ ಹೇಳ್ತಾನೇ ಇದ್ದೆ. ಆದರೆ, ಐದು ನಿಮಿಷ ಅಂತ 30 ನಿಮಿಷ ಆಯ್ತು, ಎಬ್ಬಿಸೋ ಅವನನ್ನು ಅಂತ ಜೋರಾಗಿ ಹೇಳಿದ. ನನಗೆ ಅದು ಕೇಳಿಸಿತು. ಆಗ ಯಾಕಪ್ಪಾ ಹೀಗೆಲ್ಲ ಏಕವಚನದಲ್ಲಿ ಮಾತಾಡ್ತಿಯಾ ಅಂತ ಆತನನ್ನು ಸ್ವಲ್ಪ ತಳ್ಳಿದೆ. ಅದನ್ನೇ ಡೈರೆಕ್ಟರ್ ಬಳಿ ನಂಗೆ ಹೊಡೆದ ಅಂತ ಅವನು ಹೇಳಿದ್ದಾನೆ. ಇದಾದ ನಂತರ ಯಾರ್ ಯಾರನ್ನೋ ಕರೆಸಿ ಗಲಾಟೆ ಮಾಡಿಸಿದ. ಅದು ಏನೇನೋ ಆಯ್ತು. ನನ್ನ ಮೇಲೆಯೂ ಅವನು ಹಲ್ಲೆ ಮಾಡಿದ್ದಾನೆ. ಆತ ನನ್ನ ಜೊತೆಗೆ ತಮ್ಮನ ಥರ ಇದ್ದ. ತುಂಬ ಸಲುಗೆಯಿಂದಿದ್ದ. ಈ ರೀತಿ ಮಾಡಿದ್ದು ನನಗೂ ಬೇಜಾರಾಗಿದೆ. ಅಲ್ಲಿ ಯಾರ್ಯಾರೋ ಬಂದು ಮಾತನಾಡುತ್ತಿದ್ದರು. ಅವರು ಯಾರು ಅನ್ನೋದೇ ನಂಗೊತ್ತಿಲ್ಲ."
ಜುಲೈ 29ರಿಂದ ಶುರುವಾದ ಶೂಟಿಂಗ್‌ನಲ್ಲಿ ನಾನು ಭಾಗವಹಿಸಿದ್ದೇನೆ. ಈ ಘಟನೆಯನ್ನು ದೊಡ್ಡದು ಮಾಡೋದು ಬೇಕಿರಲಿಲ್ಲ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಇದನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ನಮ್ಮ ತಾಯಿ ಆರೋಗ್ಯದ ಬಗ್ಗೆ ನನಗೆ ಚಿಂತೆ ಆಗಿದೆ" ಎಂದು ಅವರು ಹೇಳಿದ್ದಾರೆ.