ಕರ್ನಾಟಕ

karnataka

ETV Bharat / entertainment

ಮೇಕಪ್ ಆರ್ಟಿಸ್ಟ್​​ ಶುರಾ ಖಾನ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅರ್ಬಾಜ್ ಖಾನ್ - Arbaaz Khan is the brother of Salman Khan

ಬಾಲಿವುಡ್​ ಸಲ್ಮಾನ್​ ಖಾನ್​ ಸಹೋದರ ಅರ್ಬಾಜ್ ಖಾನ್ ಮೇಕಪ್ ಕಲಾವಿದೆ ಶುರಾ ಖಾನ್​ ಅವರನ್ನು ಭಾನುವಾರ ಮುಂಬೈನಲ್ಲಿ ವಿವಾಹವಾಗಿದ್ದಾರೆ.

married
ಅರ್ಬಾಜ್ ಖಾನ್, ಶುರಾ ಖಾನ್

By ETV Bharat Karnataka Team

Published : Dec 25, 2023, 10:55 AM IST

ನಟ - ಚಿತ್ರ ನಿರ್ಮಾಪಕ ಅರ್ಬಾಜ್ ಖಾನ್ ಮೇಕಪ್ ಆರ್ಟಿಸ್ಟ್​​ ಶುರಾ ಖಾನ್​ ಅವರನ್ನು ಭಾನುವಾರ ಮುಂಬೈನಲ್ಲಿರುವ ತಮ್ಮ ಸಹೋದರಿ ಅರ್ಪಿತಾ ಖಾನ್ ಅವರ ನಿವಾಸದಲ್ಲಿ ವರಿಸಿದರು.

ವಿಹಾಹ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗಿಯಾಗಿದ್ದರು. ಅರ್ಬಾಜ್ ಖಾನ್ ತಮ್ಮ ಮದುವೆಯ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗೆ, 'ಪ್ರೀತಿ ಪಾತ್ರರ ಸಮ್ಮುಖದಲ್ಲಿ ನಾನು ಮತ್ತು ನನ್ನವಳು ಈ ದಿನದಿಂದ ಜೊತೆಯಾಗಿ ಪ್ರೀತಿಯ ಜೀವನವನ್ನು ಪ್ರಾರಂಭಿಸುತ್ತಿದ್ದೇವೆ', ನಮ್ಮ ವಿಶೇಷ ದಿನದಂದು ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳು ಬೇಕು! ಎಂದು ಬರೆದು ಹಾಕಿಕೊಳ್ಳುವ ಮೂಲಕ ಅವರ ಮುಂದಿನ ಭವಿಷ್ಯಕ್ಕಾಗಿ ಪ್ರೀತಿ ಮತ್ತು ಆಶೀರ್ವಾದವನ್ನು ಕೋರಿದ್ದಾರೆ.

ಅರ್ಬಾಜ್ ಖಾನ್ ಹೂವಿನ ಚಿತ್ರ ಬಿಡಿಸಿರುವ ಬೀಚ್​ ಬಣ್ಣದ ಬಂಧ್​ಗಾಲ ಉಡುಪನ್ನು ಧರಿಸಿದ್ದರೇ, ವಧು ಶುರಾ ಖಾನ್​ ಹಗುರವಾದ ಪೀಚ್ ಲೆಹೆಂಗಾದಲ್ಲಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು. ಇನ್ನು ಅರ್ಬಾಜ್ ಖಾನ್ ಅವರ ಮೊದಲ ಪತ್ನಿ ಮಲೈಕಾ ಅರೋರಾ ಮತ್ತು ಅವರ ಮಗ ಅರ್ಹಾನ್ ಖಾನ್ ಕಪ್ಪು ಸೂಟ್‌ನಲ್ಲಿ ಕಂಗೊಳಿಸುತ್ತಿದ್ದರು. ಹಾಗೇ ಅರ್ಬಾಜ್ ಖಾನ್​ ಪೋಷಕರಾದ ಸಲೀಂ ಮತ್ತು ಸಲ್ಮಾ ಖಾನ್, ಹೆಲೆನ್, ಸಹೋದರರಾದ ಸಲ್ಮಾನ್ ಖಾನ್​ ಮತ್ತು ಸೊಹೈಲ್ ಖಾನ್ ಅವರ ಪುತ್ರರಾದ ನಿರ್ವಾನ್ ಮತ್ತು ಯೋಹಾನ್ ಮತ್ತು ಸಹೋದರಿ ಅಲ್ವಿರಾ ಖಾನ್ ಮದುವೆ ಮುಂಚಿತವಾಗಿ ಅರ್ಪಿತಾ ಅವರ ಮನೆಗೆ ಆಗಮಿಸಿದ್ದರು.

ಜತೆಗೆ ರವೀನಾ ಟಂಡನ್ ಮತ್ತು ಅವರ ಪುತ್ರಿ ರಶಾ ಥಡಾನಿ, ರಿದ್ಧಿಮಾ ಪಂಡಿತ್, ಮತ್ತು ರಿತೇಶ್ ದೇಶ್ಮುಖ್ ಮತ್ತು ಅವರ ಪತ್ನಿ ಜೆನಿಲಿಯಾ ದೇಶಮುಖ್ ಸಹ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಹರ್ಷದೀಪ್ ಕೌರ್ ಕಾರ್ಯಕ್ರಮ ನಡೆಸಿಕೊಟ್ಟರು, ನವವಿವಾಹಿತರ ಜೊತೆ ಫೋಟೋ ಸೆಷನ್​ ಸಹ ಇತ್ತು. ಅಭಿನಂದನೆಗಳು ಆತ್ಮೀಯ ಹ್ಯಾಷ್​ಟ್ಯಾಗ್​ನೊಂದಿಗೆ ಅರ್ಬಾಜ್ ಖಾನ್, ಶುರಾ ಖಾನ್ ಅವರನ್ನು ಉಲ್ಲೇಖಿಸಿ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ನಟ ಅರ್ಬಾಜ್​ಗೆ ರವೀನಾ ನಾಯಕಿಯಾಗಿರುವ ಹೊಸ ಚಿತ್ರ 'ಪಾಟ್ನಾ ಶುಕ್ಲಾ'ದ ಚಿತ್ರೀಕರಣದ ವೇಳೆ ಶುರಾ ಅವರನ್ನು ಭೇಟಿಯಾದರು ಎಂದು ಹೇಳಲಾಗುತ್ತದೆ. ಅರ್ಬಾಜ್‌ಗೆ ನಿಕಾಹ್​ಗೆ ಶುಭಾಶಯ ಕೋರಿದವರಲ್ಲಿ ರವೀನಾ ಕೂಡ ಮೊದಲಿಗರಾಗಿದ್ದರು. ಅವರು ಅರ್ಬಾಜ್ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಅರ್ಬಾಜ್ ಈ ಹಿಂದೆ ನಟಿ ಮತ್ತು ಮಾಡೆಲ್ ಮಲೈಕಾ ಅರೋರಾ ಅವರನ್ನು ಮದುವೆಯಾಗಿದ್ದರು. ಅವರು 2016 ರಲ್ಲಿ ಬೇರ್ಪಟ್ಟ ನಂತರ 2017 ರಲ್ಲಿ ವಿಚ್ಛೇದನ ಪಡೆದರು. ಅವರು ತಮ್ಮ ಮಗ ಅರ್ಹಾನ್ ಖಾನ್ ಅವರ ಪಾಲನೆಯನ್ನು ಜತೆಯಾಗಿಯೇ ನೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ರಾಷ್ಟ್ರಪತಿ ಭವನದಲ್ಲಿ 'ಡಂಕಿ' ಸಿನಿಮಾ ಪ್ರದರ್ಶನ

ABOUT THE AUTHOR

...view details