ಹಿಂದಿ ಚಿತ್ರರಂಗದಲ್ಲಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟ ಅನುಪಮ್ ಖೇರ್. ಅಮೋಘ ಅಭಿನಯದ ಮೂಲಕ ಕೋಟಿಗಟ್ಟಲೇ ವೀಕ್ಷಕರನ್ನು ಆಕರ್ಷಿಸಿರುವ ಅನುಪಮ್ ಖೇರ್ ಸಂಜೆ ಉತ್ತರಾಖಂಡ್ನ ಪೌರಿ ಗರ್ವಾಲ್ನ ಲ್ಯಾನ್ಸ್ಡೌನ್ ಪ್ರದೇಶ ತಲುಪಿದ್ದಾರೆ. ನೈಸರ್ಗಿಕ ಸೌಂದರ್ಯದಿಂದ ತುಂಬಿರುವ ಲ್ಯಾನ್ಸ್ಡೌನ್ ಪಟ್ಟಣದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಾದ ಗರ್ವಾಲ್ ರೈಫಲ್ ಫೈರಿಂಗ್ ರೇಂಜ್, ಟಿಪ್ ಆ್ಯಂಡ್ ಟಾಪ್, ಭುಲಾತಾಲ್ ಸ್ಥಳಗಳಿಗೆ ಭೇಟಿ ನೀಡಿದರು. ಸುಂದರವಾದ ಕಣಿವೆಗಳನ್ನು ಕಣ್ತುಂಬಿಕೊಂಡರು.
ಒಂದು ತಿಂಗಳ ಕಾಲ ಚಿತ್ರೀಕರಣ: ಮುಂಬರುವ ಚಲನಚಿತ್ರವನ್ನು ಲ್ಯಾನ್ಸ್ಡೌನ್ನಲ್ಲಿ ಚಿತ್ರೀಕರಿಸುವ ಯೋಜನೆಯಿದೆ. ಲ್ಯಾನ್ಸ್ಡೌನ್ ಪ್ರದೇಶ ಶೂಟಿಂಗ್ಗೆ ಸೂಕ್ತ ಸ್ಥಳ ಎಂದು ಹಿರಿಯ ನಟ ಅನುಪಮ್ ಖೇರ್ ತಿಳಿಸಿದ್ದಾರೆ. ಮುಂಬರುವ ಸಿನಿಮಾದ ಚಿತ್ರೀಕರಣಕ್ಕಾಗಿ ಅವರು ತಮ್ಮ ತಂಡದೊಂದಿಗೆ ಲ್ಯಾನ್ಸ್ಡೌನ್ನಿಂದ ಜರಿಖಲ್ ಮಾರ್ಗದವರೆಗೆ ಸ್ಥಳವನ್ನು ವೀಕ್ಷಿಸಿ, ಶೂಟಿಂಗ್ಗೆ ಸ್ಥಳ ನಿಗದಿ ಮಾಡಿದ್ದಾರೆ. ಲ್ಯಾನ್ಸ್ಡೌನ್ನಲ್ಲಿ ಒಂದು ತಿಂಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿದ್ದಾರೆ.
ಭೂಮಿ ಮೇಲಿನ ಸ್ವರ್ಗ ಖ್ಯಾತಿಯ ಉತ್ತರಾಖಂಡ್ನ ಲ್ಯಾನ್ಸ್ಡೌನ್ ಪ್ರಕೃತಿಯ ಮಡಿಲಲ್ಲಿ ನೆಲೆಗೊಂಡಿದೆ. ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಶಾಂತಿಯ ಅನುಭವವಾಗುತ್ತದೆ. ಇದೀಗ ಚಿತ್ರರಂಗದಲ್ಲಿ ಪರಿಣಿತರಾಗಿರುವ ಹಿರಿಯ ನಟ ಅನುಪಮ್ ಖೇರ್ ತಮ್ಮ ಮುಂದಿನ ಸಿನಿಮಾವನ್ನು ಇಲ್ಲಿ ಚಿತ್ರೀಕರಣ ನಡೆಸಲಿದ್ದಾರೆ.
ಮಹಾದೇವ್ ಕಾಳೇಶ್ವರಕ್ಕೆ ಅನುಪಮ್ ಖೇರ್ ಭೇಟಿ:ಪ್ರಸಿದ್ಧ ಹಿಂದಿ ಚಲನಚಿತ್ರ ಕಾಶ್ಮೀರ್ ಫೈಲ್ಸ್ ಸೇರಿದಂತೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪಾತ್ರ ವಹಿಸಿರುವ ಖ್ಯಾತ ನಟ ಅನುಪಮ್ ಖೇರ್ ಲಾನ್ಸ್ಡೌನ್ ತಲುಪಿದ ನಂತರ ಮೊದಲು ಮಹಾದೇವ್ ಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ಮಹಾದೇವನಿಗೆ ಪೂಜೆ ಸಲ್ಲಿಸಿ, ಸಂಜೆಯ ಆರತಿಯಲ್ಲಿ ಭಾಗವಹಿಸಿ, ಪ್ರಸಾದ ಸ್ವೀಕರಿಸಿದರು.