ಸ್ಯಾಂಡ್ವುಡ್ನ ಯುವ ನಟ ಅನೀಶ್ ತೇಜೇಶ್ವರ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅನೀಶ್ಗೆ 'ಆರಾಮ್ ಅರವಿಂದ ಸ್ವಾಮಿ' ಚಿತ್ರ ತಂಡ ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಸ್ಪೆಷಲ್ ಗಿಫ್ಟ್ ನೀಡಿದೆ. ಸಿನಿಮಾದ ಮೊದಲ ಹಾಡನ್ನು ವಿಂಕ್ ವಿಶಲ್ ಪ್ರೊಡಕ್ಷನ್ ಯೂಟ್ಯೂಬ್ನಲ್ಲಿ ಅನಾವರಣ ಮಾಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ‘ನಮ್ ಏರಿಯಾಲಿ ಒಂದ್ ದಿನ’, ‘ಪೊಲೀಸ್ ಕ್ವಾಟ್ರಸ್’, ‘ಅಕಿರ’, ‘ವಾಸು ನಾನ್ ಪಕ್ಕಾ ಕಮರ್ಷಿಯಲ್’, ‘ರಾಮಾರ್ಜುನ’ ಹೀಗೆ.. ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥಾಹಂದರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ಅನೀಶ್ ತೇಜೇಶ್ವರ್. ಸದ್ಯ 'ಆರಾಮ್ ಅರವಿಂದ ಸ್ವಾಮಿ' ಚಿತ್ರದಲ್ಲಿ ಬ್ಯುಸಿಯಾಗಿದ್ದು, ಅವರ ಬರ್ತಡೇ ಸ್ಪೆಷಲ್ ಆಗಿ ಸಿನಿಮಾದ ಮೊದಲ ಹಾಡನ್ನು ಅನಾವರಣ ಮಾಡಲಾಗಿದೆ.
'ಆರಾಮ್ ಅರವಿಂದ ಸ್ವಾಮಿ' ಟೈಟಲ್ ಟ್ರ್ಯಾಕ್ಗೆ ನಾಗಾರ್ಜುನ್ ಶರ್ಮಾ ಪದಪುಂಜ ಪೊಣಿಸಿದ್ದು, ನಿಶಾನ್ ರೈ ಕಂಠ ದಾನ ನೀಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಹಾಡಿನ ಕಿಕ್ ಏರಿಸಿದೆ. ನಾಯಕನ ಗುಣವನ್ನು ವರ್ಣಿಸುವ ಈ ಟೈಟಲ್ ಟ್ರ್ಯಾಕ್ಗೆ ಅನೀಶ್ ಜಬರ್ದಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಬಾಬಾ ಭಾಸ್ಕರ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಈ ಹಾಡು ಮೂಡಿಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್ಗಳ ಗಮನ ಸೆಳೆಯುತ್ತಿದೆ.