ಸಿನಿಮಾ ಹಾಗೂ ಕಿರುತೆರೆಯಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಅನಿರುದ್ಧ್ ಜತ್ಕರ್ ಅವರಿಗೆ ಜೊತೆ ಜೊತೆಯಲಿ ಸೀರಿಯಲ್ನಿಂದ ಗೇಟ್ಪಾಸ್ ನೀಡಲಾಗಿದೆ.
ಜೊತೆ ಜೊತೆಯಲಿಗೆ ಎಂಟ್ರಿ: ಖ್ಯಾತ ನಟ ಸಾಹಸಸಿಂಹ ವಿಷ್ಣು ವರ್ಧನ್ ಅವರ ಅಳಿಯ ಅನಿರುದ್ಧ್ ಜತ್ಕರ್ ಅವರು ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ತಮ್ಮ ಸೆಕೆಂಡ್ ಇನ್ಸಿಂಗ್ ಶುರುಮಾಡಿದ್ದರು. ತಮ್ಮ ಅದ್ಭುತ ನಟನೆಯಿಂದ ಮನೆ ಮನಗಳಿಗೆ ತಲುಪಿದರು. ಈ ಸೀರಿಯಲ್ ಬಹಳ ಕಾಲ ಟಿಆರ್‌ಪಿಯಲ್ಲಿ ನಂಬರ್ ಒನ್ ಸ್ಥಾನದಲ್ಲೇ ಇತ್ತು. ಇದು ನಟ ಅನಿರುದ್ಧ್ಗೆ ಹೊಸ ಜೀವನ ನೀಡಿತ್ತು.
ಸೀರಿಯಲ್ ಮೂಲಕ ಹೊಸ ಜೀವನ: ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿ ಭಾರೀ ಜನಪ್ರಿಯತೆ ತಂದು ಕೊಟ್ಟಿತ್ತು.
ನಿರ್ದೇಶಕ ಆರೂರು ಜಗದೀಶ್ ಸ್ಪಷ್ಟನೆ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್: ಹೌದು, ಆರ್ಯವರ್ಧನ್ ಎಂಬ ಪ್ರಬುದ್ಧ ಪಾತ್ರದಲ್ಲಿ ನಟ ಅನಿರುದ್ಧ್ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದರು. ಬಿಳಿ ಗಡ್ಡ, ಪ್ರಬುದ್ಧತೆ ಸೂಸುವ ಕಣ್ಣು, ಅದಕ್ಕೆ ತಕ್ಕನಾದ ಹಾವಭಾವಗಳಿಂದ ಅನಿರುದ್ಧ್ ಆರ್ಯವರ್ಧನ್ ಪಾತ್ರಕ್ಕೆ ಜೀವ ತುಂಬಿದ್ದರು. ಧಾರಾವಾಹಿ ಜೊತೆಗೆ ಅವರ ಪಾತ್ರವೂ ಸೂಪರ್ ಹಿಟ್ ಆಗಿತ್ತು.
ನಿರ್ದೇಶಕ ಆರೂರು ಜಗದೀಶ್ ಸ್ಪಷ್ಟನೆ:ಅಂತಿಮವಾಗಿ ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಗೇಟ್ ಪಾಸ್ ನೀಡಲಾಗಿದೆ. ಕಳೆದ ದಿನಗಳಿಂದ ಜೊತೆ ಜೊತೆಯಲಿ ಧಾರಾವಾಹಿ ಬಗ್ಗೆ, ಅನಿರುದ್ಧ್ ಬದಲಾವಣೆ ಬಗ್ಗೆ ಹುಟ್ಟಿಕೊಂಡಿದ್ದ ಊಹಾಪೋಹಗಳಿಗೆ ಅಂತಿಮ ತೆರೆ ಬಿದ್ದಂತಾಗಿದೆ. ಜೊತೆ ಜೊತೆಯಲಿ ನಿರ್ದೇಶಕ ಆರೂರು ಜಗದೀಶ್ ಅನಿರುದ್ಧ್ ಅವರನ್ನು ಸೀರಿಯಲ್ನಿಂದ ಹೊರಗಡೆ ಕಳಿಸಿರೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಜೊತೆ ಜೊತೆಯಲಿ ಸೀರಿಯಲ್ ನಟ ಅನಿರುದ್ಧ್ ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ ಎನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಜನಪ್ರಿಯತೆ ಜಾಸ್ತಿ ಆಗುತ್ತಿದ್ದಂತೆ ಅವರು ಕೂಡ ಬದಲಾದರು. ಇದರ ಎಫೆಕ್ಟ್ ಸೀರಿಯಲ್, ಕಥೆ, ಡೈಲಾಗ್ ಮೇಲೆ ಪರಿಣಾಮ ಬೀರುತ್ತಾ ಹೋಯಿತು. ಮೊದಲು ಗಾಂಧಿಬಜಾರ್, ಆರ್ಆರ್ ನಗರದ ಬೀದಿಗಳಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಈಗ ಕ್ಯಾರವ್ಯಾನ್ ಇಲ್ಲದೇ ಶೂಟಿಂಗ್ ಬರೋಲ್ಲ ಅಂದರು.
ಮೊದಲಿಗೆ ಕಿರಿಕ್ ಶುರುವಾಗಿದ್ದು ಒಂದು ಫ್ಯಾಕ್ಟರಿಯಲ್ಲಿ. ಅಲ್ಲಿ ಶೂಟಿಂಗ್ ಮಾಡುವಾಗ ನನಗೆ ಡೈಲಾಗ್ ಪೇಪರ್ ಕೊಟ್ಟಿಲ್ಲ ಅಂತಾ ಕಿರಿಕ್ ಶುರು ಮಾಡಿದರು. ಇಲ್ಲಿಂದ ಕಿರಿಕ್ ಶುರುವಾಗಿ ಪ್ರತಿದಿನ ಅವರಿಂದ ತೊಂದರೆ ಆಗಿದೆ. ನಾವು ನೋಡಿದ ಅನಿರುದ್ಧ್ ಬೇರೆ, ರಿಯಲ್ ಅನಿರುದ್ಧ್ ಬೇರೆ ಅಂತಾ ಆರೋಪಿಸಿರುವ ನಿರ್ದೇಶಕ ಆರೂರು ಜಗದೀಶ್ ಧಾರಾವಾಹಿ ಹಾಗೂ ಚಾನಲ್ನಿಂದ ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದೇವೆ ಅಂತಾ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗೆ ಬಂದಾಗ ಪುನೀತ್ ಅಣ್ಣನನ್ನು ಭೇಟಿ ಮಾಡುತ್ತಿದ್ದೆ: ವಿಜಯ್ ದೇವರಕೊಂಡ