ಕನ್ನಡದ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ಕೊನೆಯ ಹಂತಕ್ಕೆ ತಲುಪಿದೆ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಕನ್ನಡದ ಬಿಗ್ ಬಾಸ್ ಸೀನಸ್ 9 ಶೋನ ಪ್ರೋಮೋ ರಿಲೀಸ್ ಮಾಡಲಾಗಿದೆ. ಓಟಿಟಿಯಿಂದ ಕೆಲವು ಸ್ಪರ್ಧಿಗಳು ಬಿಗ್ ಬಾಸ್ ಮೈನ್ ಸೀಸನ್ಗೆ (ಟಿವಿ ಶೋ) ಹೋಗಲಿದ್ದಾರೆ. ಪ್ರೋಮೋ ರಿಲೀಸ್ ಆದ ಬೆನ್ನಲ್ಲೇ ದೊಡ್ಮನೆಗೆ ಯಾರೆಲ್ಲಾ ಹೋಗಬಹುದೆಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಪ್ರತಿ ಬಾರಿಯಂತೆಯೇ ಈ ಬಾರಿಯೂ ಯಾರೆಲ್ಲ ಹೊಗ್ತಾರೆ ಎಂಬ ಲೆಕ್ಕಾಚಾರ ಶುರುವಾಗಿದೆ.
ಅದರಂತೆ ಈ ಬಾರಿಯ ಬಿಗ್ ಬಾಸ್ ದೊಡ್ಮನೆಗೆ ನಟ ಅನಿರುದ್ಧ್ ಜತ್ಕರ್ ಹೋಗ್ತಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಮೂಲಗಳ ಪ್ರಕಾರ, ಜೊತೆ ಜೊತೆಯಲಿ ಸೀರಿಯಲ್ನಿಂದ ಹೊರ ಬಂದಿರುವ ಆರ್ಯವರ್ಧನ್ ಖ್ಯಾತಿಯ ಅನಿರುದ್ಧ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರಂತೆ.