ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಜುಲೈ 28ರಂದು ವಿಶ್ವಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರಕ್ಕೆ ಇದೀಗ ಬಾಲಿವುಡ್ನ ಜನಪ್ರಿಯ ಹಿರಿಯ ನಟ ಅಮಿತಾಬ್ ಬಚ್ಚನ್ ಬೆಂಬಲ ಸಿಕ್ಕಿದೆ.
ಟ್ವಿಟರ್ ಮೂಲಕ 'ವಿಕ್ರಾಂತ್ ರೋಣ'ದ ಎಲ್ಲ ಭಾಷೆಯ ಟ್ರೈಲರ್ ಶೇರ್ ಮಾಡಿರುವ ಅವರು, ಕನ್ನಡದ ಸ್ಟಾರ್ ನಟ ಸುದೀಪ್ ನಟನೆಯ ಸಿನಿಮಾ ಐದು ಭಾಷೆಗಳಲ್ಲಿ ಜುಲೈ 28ರಂದು ರಿಲೀಸ್ ಆಗಲಿದೆ. ಅಭಿಮಾನಿಗಳು ಚಿತ್ರ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ಬಚ್ಚನ್ ಟ್ವೀಟ್ಗೆ ಸುದೀಪ್ ಧನ್ಯವಾದ ತಿಳಿಸಿದ್ದಾರೆ.
ಸುದೀಪ್ ಹಾಗೂ ಅಮಿತಾಬ್ ಬಚ್ಚನ್ ಈ ಹಿಂದೆ ರಾಮ್ಗೋಪಾಲ್ ವರ್ಮಾ ನಿರ್ದೇಶನದ ಹಿಂದಿಯ 'ರಣ್' ಸಿನಿಮಾದಲ್ಲಿ ನಟಿಸಿದ್ದರು.