ಕರ್ನಾಟಕ

karnataka

ETV Bharat / entertainment

ಅಂಬರೀಶ್ ಪುಣ್ಯಸ್ಮರಣೆಯಂದು ಪುತ್ರನ ಹೊಸ ಸಿನಿಮಾ ಬಿಡುಗಡೆ; ಸುಮಲತಾ, ದರ್ಶನ್​​ ಭಾವುಕ - Sumalatha Ambareesh

Actor Ambareesh death anniversary: ಹಿರಿಯ ನಟ​ ಅಂಬರೀಶ್ ಇಹಲೋಕ ತ್ಯಜಿಸಿ ಇಂದಿಗೆ ಐದು ವರ್ಷ. 5ನೇ ಪುಣ್ಯಸ್ಮರಣೆಯಂದು ಅವರ ಪುತ್ರ ನಟಿಸಿರುವ ಹೊಸ ಸಿನಿಮಾ ಬಿಡುಗಡೆಯಾಗಿದೆ.

Ambareesh death anniversary
ಅಂಬರೀಶ್ ಪುಣ್ಯಸ್ಮರಣೆ

By ETV Bharat Karnataka Team

Published : Nov 24, 2023, 12:59 PM IST

ಕನ್ನಡ ಚಿತ್ರರಂಗದ ಜನಪ್ರಿಯ ನಟ, ಮಂಡ್ಯದ ಗಂಡು ಹಿರಿಮೆಯ ಡಾ.ಅಂಬರೀಶ್​ ಕೊನೆಯುಸಿರೆಳೆದು ಇಂದಿಗೆ 5 ವರ್ಷವಾಗುತ್ತಿದೆ. ಐದನೇ ವರ್ಷದ ಪುಣ್ಯಸ್ಮರಣೆಯ ಈ ದಿನ ಪುತ್ರ ಅಭಿಷೇಕ್ ಅಂಬರೀಶ್‌​ ನಟಿಸಿರುವ 'ಬ್ಯಾಡ್​ ಮ್ಯಾನರ್ಸ್' ಸಿನಿಮಾ ತೆರೆಕಂಡಿದೆ. ಪತ್ನಿ ಸುಮಲತಾ ಅಂಬರೀಶ್​ ಸೇರಿದಂತೆ ಗಣ್ಯರು ಅಂಬಿ ಅವರನ್ನು ಸ್ಮರಿಸಿ, ಭಾವುಕ ನುಡಿಗಳನ್ನಾಡಿದರು.

ಸುಮಲತಾ ಅಂಬರೀಶ್ ಮಾತನಾಡಿ, ''ನಮ್ಮ ನೆನಪುಗಳು, ಸುಖ-ದುಃಖ, ನಗು, ಕಣ್ಣೀರು ಸೇರಿದಂತೆ ಪ್ರತಿ ಕ್ಷಣವೂ ನೀವು ನಮ್ಮೊಂದಿಗಿದ್ದೀರಿ. ನಿಮ್ಮ ಸ್ಥಾನ ಅಳೆಯಲಾಗದು. ನಾನು ಪ್ರೀತಿಯನ್ನು ಹಿಡಿದಿಟ್ಟುಕೊಳ್ಳುತ್ತೇನೆ, ನಷ್ಟವನ್ನಲ್ಲ. ಅನೇಕರನ್ನು ತಲುಪಿದ ಜೀವ ಅಥವಾ ಜೀವನವನ್ನು ಎಂದಿಗೂ ಕಳೆದುಕೊಳ್ಳಲಾಗುವುದಿಲ್ಲ. ನೀವು ಎಂದೆಂದಿಗೂ ಶಾಶ್ವತ. ಒಂದು ಜೀವನ, ಒಂದು ಪ್ರಪಂಚಕ್ಕೂ ಮೀರಿದವರು. ನೀವು ಹೆಮ್ಮೆಯಿಂದ ನಗುತ್ತಿರುವಿರಿ ಮತ್ತು ಅಲ್ಲಿಂದಲೇ ನಮ್ಮ ಪುತ್ರನ ಸಿನಿಮಾಗೆ ಆಶೀರ್ವದಿಸುತ್ತೀರಿ ಎಂದು ನನಗೆ ನಂಬಿಕೆ ಇದೆ'' ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಬ್ಯಾಡ್ ಮ್ಯಾನರ್ಸ್' ಬಿಡುಗಡೆ: 'ಬ್ಯಾಡ್ ಮ್ಯಾನರ್ಸ್' ಮೂರು ವರ್ಷಗಳ ಬ್ರೇಕ್‌ನ​ ಬಳಿಕ ಅಭಿಷೇಕ್ ಅಂಬರೀಶ್​​ ಅವರ ಮತ್ತೊಂದು ಸಿನಿಮಾ. ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್​ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ರಚಿತಾ ರಾಮ್ ನಾಯಕಿ. ಕೆ.ಎಂ.ಸುಧೀರ್ ನಿರ್ಮಾಣದ 'ಬ್ಯಾಡ್ ಮ್ಯಾನರ್ಸ್' ಪ್ರಮೋಶನ್​ ಜೋರಾಗಿಯೇ ನಡೆಯುತ್ತಿದೆ.

ನಟ ದರ್ಶನ್​ ಎಕ್ಸ್‌ ಪೋಸ್ಟ್‌:ಇನ್ನೊಂದೆಡೆ,ಅಂಬರೀಶ್​ ಫೋಟೋ ಹಂಚಿಕೊಂಂಡಿರುವ ಚಾಲೆಂಜಿಂಗ್​ ಸ್ಟಾರ್ ದರ್ಶನ್​, ''ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬಿ ಅಪ್ಪಾಜಿ ದೈಹಿಕವಾಗಿ ನಮ್ಮನ್ನಗಲಿ 5 ವರ್ಷಗಳಾಗಿವೆ. ಅವರ ನೇರ ನುಡಿ, ಪ್ರೀತಿ-ಆದರ್ಶಗಳು ಸದಾ ನಮ್ಮ ಉಸಿರಿನೊಂದಿಗೆ ಬೆರೆತು ಹೋಗಿವೆ. ಲವ್​ ಯೂ ಫಾರೆವರ್​'' ಎಂದು ಬರೆದಿದ್ದಾರೆ.

ಇದನ್ನೂ ಓದಿ:ಥಿಯೇಟರ್‌ಗಳಲ್ಲಿ ಪಟಾಕಿ ಸಿಡಿಸುವುದು ಅಪಾಯಕಾರಿ, ನಾನಿದನ್ನು ಬೆಂಬಲಿಸುವುದಿಲ್ಲ: ಸಲ್ಮಾನ್ ಖಾನ್

ಮತ್ತೊಂದು ಪೋಸ್ಟ್‌ನಲ್ಲಿ, ಸಹೋದರ ಸಮಾನವಾಗಿರುವ ಅಭಿಷೇಕ್​ ಅವರ ಹೊಸ ಸಿನಿಮಾ ಬೆಂಬಲಿಸಿದ್ದಾರೆ. ಬ್ಯಾಡ್ ಮ್ಯಾನರ್ಸ್ ಪೋಸ್ಟರ್ ಶೇರ್ ಮಾಡಿ, ''ನಮ್ಮ ಪ್ರೀತಿಯ ಅಭಿ ಅಭಿನಯದ ಹಾಗೂ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಚಿತ್ರ ಇಂದು ನಿಮ್ಮ ಮುಂದೆ ಬಂದಿದೆ. ಅಂಬಿ ಅಪ್ಪಾಜಿ ಹಾಗೂ ಎಲ್ಲಾ ಕನ್ನಡಾಭಿಮಾನಿಗಳ ಪ್ರೀತಿ-ಆಶೀರ್ವಾದ ಸದಾ ಚಿತ್ರತಂಡವನ್ನು ಹರಸಲಿ ಎಂದು ಆಶಿಸುತ್ತೇನೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಅಂಬಿ ಅಪ್ಪಾಜಿ ಸಹಾಯದ ಮುಂದೆ ನಾವೇನು ಮಾಡಿಲ್ಲ : ನಟ ದರ್ಶನ್

ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ''ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ, ಅಭಿಮಾನಿಗಳ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಶ್ ಪುಣ್ಯಸ್ಮರಣೆಯಂದು ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಕಲಾಸೇವೆಯ ಜೊತೆ ಜೊತೆಗೆ ರಾಜಕೀಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಂಬಿ ಕನ್ನಡಿಗರ ಹೃದಯದಲ್ಲಿ ಸದಾ ಅಜರಾಮರ'' ಎಂದಿದ್ದಾರೆ.

ABOUT THE AUTHOR

...view details