ಹೈದರಾಬಾದ್:ಭಾರತೀಯ ಚಿತ್ರರಂಗದಲ್ಲಿ ಈ ಹಿಂದೆ ನಿರ್ಮಾಣವಾಗದಂತಹ ದಾಖಲೆ ಬರೆದಿರುವ ಕೆಜಿಎಫ್ ಚಾಪ್ಟರ್-2 ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಲಿವುಡ್, ಟಾಲಿವುಡ್ ಸೇರಿದಂತೆ ಅನೇಕ ನಟ-ನಟಿಯರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ 'ಪುಷ್ಪ' ಚಿತ್ರದ ನಟ ಅಲ್ಲು ಅರ್ಜುನ್ ಕೂಡ ಸಿನಿಮಾ ಮೆಚ್ಚಿ, ಟ್ವೀಟ್ ಮಾಡಿದ್ದಾರೆ.
ಕೆಜಿಎಫ್2 ಚಿತ್ರಕ್ಕೆ ದೊಡ್ಡ ಅಭಿನಂದನೆಗಳು. ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಹಾಗೂ ಇತರೆ ಕಲಾವಿದರು ಅದ್ಭುತವಾಗಿ ನಟನೆ ಮಾಡಿದ್ದಾರೆ. ಅತ್ಯುತ್ತಮವಾದ ಚಿತ್ರೀಕರಣ. ಎಲ್ಲ ತಂತ್ರಜ್ಞರಿಗೂ ಅಭಿನಂದನೆಗಳು. ಪ್ರಶಾಂತ್ ನೀಲ್ ಅವರಿಂದ ಅದ್ಭುತ ಪ್ರದರ್ಶನ ಎಂದು ಟ್ವೀಟ್ ಮಾಡಿರುವ ಅಲ್ಲು ಅರ್ಜುನ್, ಭಾರತೀಯ ಸಿನಿಮಾ ಉತ್ತುಂಗದಲ್ಲಿ ಕಾಣುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ. ಇದರ ಜೊತೆಗೆ ರವಿ ಬಸ್ರೂರ್ ಹಾಗೂ ಭುವನ್ ಗೌಡ ಅವರಿಗೂ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.