ಕರ್ನಾಟಕ

karnataka

ETV Bharat / entertainment

ಕಾರ್​ ಡ್ರೈವರ್​ ಮನೆ ನಿರ್ಮಾಣಕ್ಕೆ ಹಣ ಸಹಾಯ.. ಮತ್ತೊಮ್ಮೆ ಮಾನವೀಯತೆ ಮೆರೆದ ಅಲ್ಲು ಅರ್ಜುನ್ - allu arjun social work

ನಟ ಅಲ್ಲು ಅರ್ಜುನ್​​ ತನ್ನ ಕಾರ್​ ಡ್ರೈವರ್​ ಮನೆ ನಿರ್ಮಾಣಕ್ಕೆ ಹಣ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

actor allu arjun
ನಟ ಅಲ್ಲು ಅರ್ಜುನ್

By

Published : Nov 12, 2022, 2:02 PM IST

ಸೌತ್​ ಸಿನಿಮಾ ಸ್ಟಾರ್​ ಅಲ್ಲು ಅರ್ಜುನ್​​ ಮತ್ತೊಮ್ಮೆ ತಾವು ನಿಜ ಜೀವನದಲ್ಲೂ ಹೀರೋ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಪುಷ್ಪ ಸಿನಿಮಾ ಖ್ಯಾತಿಯ ನಂತರ ಕೆಲ ಸಮಾಜ ಸೇವೆ ಕಾರ್ಯಗಳ ಮೂಲಕ ಸದ್ದು ಮಾಡಿದ ಅಲ್ಲು ಇತ್ತೀಚೆಗಷ್ಟೇ ವಿದ್ಯಾರ್ಥಿನಿಯೋರ್ವಳಿಗೆ ಸಹಾಯ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ತಮ್ಮ ಕಾರ್​ ಡ್ರೈವರ್​ ಮನೆ ನಿರ್ಮಾಣಕ್ಕೆ ಹಣ ಸಹಾಯ ಮಾಡಿ ಹೃದಯವೈಶಾಲ್ಯತೆ ಮೆರೆದಿದ್ದಾರೆ.

ವಾರಂಗಲ್ ಮೂಲದ ಮಹಿಪಾಲ್ ಎಂಬ ವ್ಯಕ್ತಿ ಕಳೆದ ಹತ್ತು ವರ್ಷಗಳಿಂದ ನಟ ಅಲ್ಲು ಅರ್ಜುನ್​ ಅವರ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಹೈದರಾಬಾದ್​ನ ಬೋರಬಂಡಾದಲ್ಲಿ ಅವರು ತಮ್ಮ ಮನೆ ನಿರ್ಮಿಸಿಕೊಂಡಿದ್ದಾರೆ. ಆ ಮನೆ ನಿರ್ಮಾಣಕ್ಕೆ ಅಲ್ಲು ಅರ್ಜುನ್ 15 ಲಕ್ಷ ರೂ. ನೀಡಿದ್ದರು. ಈ ವಿಚಾರ ಇದೀಗ ಬೆಳಕಿಗೆ ಬಂದಿದೆ. ಅಲ್ಲು ಜೊತೆ ಡ್ರೈವರ್ ಕುಟುಂಬ ತೆಗೆಸಿಕೊಂಡ ಫೋಟೋವೊಂದನ್ನು ನಟನ ಅಭಿಮಾನಿಯೋರ್ವರು ಶೇರ್ ಮಾಡಿದ್ದು, ಚಿತ್ರ ವೈರಲ್ ಆಗಿದೆ. ಅಲ್ಲು ಅವರ ಚಾಲಕರ ಮೇಲಿನ ಪ್ರೀತಿ ಹಾಗೂ ಜವಾಬ್ದಾರಿ ಕಂಡು ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ನಟ ಅಲ್ಲು ಅರ್ಜುನ್

ಇದನ್ನೂ ಓದಿ:ನಿಜ ಜೀವನದಲ್ಲೂ ಹೀರೋ ಅಲ್ಲು ಅರ್ಜುನ್.. ವಿದ್ಯಾರ್ಥಿನಿ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಹೊತ್ತ ನಟ

ಇತ್ತೀಚೆಗಷ್ಟೇ ನರ್ಸಿಂಗ್ ಅಧ್ಯಯನವನ್ನು ಮುಂದುವರಿಸಲು ಸಹಾಯ ಹಸ್ತ ಕೋರಿದ್ದ ಕೇರಳ ವಿದ್ಯಾರ್ಥಿಗೆ ಸಂಪೂರ್ಣ ಶಿಕ್ಷಣ ವೆಚ್ಚ ಭರಿಸುವ ಭರವಸೆ ನೀಡುವೆ ಮೂಲಕ ಅಲ್ಲು ಅರ್ಜುನ್​​ ತಾವು ನಿಜ ಜೀವನದಲ್ಲೂ ಹೀರೋ ಎಂಬುದನ್ನು ಸಾಬೀತು ಪಡಿಸಿದ್ದರು. ಇದೀಗ ಮತ್ತೊಮ್ಮೆ ಅವರ ಸಮಾಜಮುಖಿ ಕಾರ್ಯ ಬೆಳಕಿಗೆ ಬಂದಿದ್ದು, ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಬಗ್ಗೆ ಹಾಡಿ ಕೊಂಡಾಡುತ್ತಿದ್ದಾರೆ.

ABOUT THE AUTHOR

...view details