ನವದೆಹಲಿ: ರಾಜ ಪೃಥ್ವಿರಾಜ್ ಚೌಹಾಣ್ ಕುರಿತ ಐತಿಹಾಸಿಕ ಸಿನಿಮಾ 'ಸಾಮ್ರಾಟ್ ಪೃಥ್ವಿರಾಜ್'ನಲ್ಲಿ ನಟ ಅಕ್ಷಯ್ ಕುಮಾರ್ ನಟನೆ ಮಾಡಿದ್ದು, ಹಿಂದಿ ಮಾತ್ರವಲ್ಲದೇ, ತೆಲುಗು, ತಮಿಳು ಭಾಷೆಗೂ ಡಬ್ ಆಗಿರುವ ಈ ಚಿತ್ರ ನಾಡಿದ್ದು,(ಜೂನ್ 3) ತೆರೆಗೆ ಬರುತ್ತಿದೆ. ಇದರ ಬೆನ್ನಲ್ಲೇ ನಟ ಅಕ್ಷಯ್ ಕುಮಾರ್ ಎಎನ್ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ್ದಾರೆ.
ದುರದೃಷ್ಟವಶಾತ್, ನಮ್ಮ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರ ಬಗ್ಗೆ ಕೇವಲ 2-3 ಸಾಲು ಮಾತ್ರ ಉಲ್ಲೇಖವಾಗಿವೆ. ಆದರೆ, ಆಕ್ರಮಣಕಾರರ ಬಗ್ಗೆ ಸಾಕಷ್ಟು ಉಲ್ಲೇಖಿಸಲಾಗಿದೆ. ನಮ್ಮ ಸಂಸ್ಕೃತಿ ಮತ್ತು ಮಹಾರಾಜರ ಬಗ್ಗೆ ಏನೂ ಉಲ್ಲೇಖ ಮಾಡಿಲ್ಲ ಎಂದು ಅಕ್ಷಯ್ ಕುಮಾರ್ ತಿಳಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮುಖ್ಯ ಕಾರಣ ಪ್ರಧಾನಿ. ಅವರಿಗೆ ನನ್ನ ಧನ್ಯವಾದಗಳು. ನಮ್ಮ ದೇಶ ಬದಲಾಗುತ್ತಿದ್ದು, ಭಾರತೀಯ ಚಲನಚಿತ್ರೋದ್ಯಮ ಜಾಗತಿಕ ಮಟ್ಟಕ್ಕೆ ತಲುಪಿದೆ ಎಂದರು. ಯಾವಾಗಲೂ ನಾವು ನಮ್ಮನ್ನ ಶಾಂತವಾಗಿರಿಸಿಕೊಳ್ಳಬೇಕು. ನಮ್ಮ ಜೀವನ ಶೈಲಿಯಲ್ಲಿ ಬದಲಾಯಿಸಿಕೊಳ್ಳಬೇಕು. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ನಾವು ಜೀವನದ ವಿಪರೀತ ಏರಿಳಿತ ಕಂಡಿದ್ದೇವೆ ಎಂದರು.