ಕಾಂಗ್ರೆಸ್ ನಾಯಕರ ಬಂಧನದ ನಂತರವೂ ಪೇ ಸಿಎಂ ಅಭಿಯಾನ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಕೂಡ ಪೇಸಿಎಂ ಅಭಿಯಾನವನ್ನು ಮುಂದುವರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಪೇ ಸಿಎಂ ಪೇಮೆಂಟ್ ಪೇಜ್ ಹರಿಬಿಟ್ಟಿದೆ.
ಅಲ್ಲದೇ ಕಾಂಗ್ರೆಸ್ Pay CM ಪೋಸ್ಟರ್‌ನಲ್ಲಿ ಬೆಂಗಳೂರು ಮೂಲದ ನಟ ಅಖಿಲ್ ಅಯ್ಯರ್ ಅವರ ಫೋಟೋವನ್ನು ಬಳಸಿಕೊಳ್ಳಲಾಗಿದೆ. ಅಖಿಲ್ ಅವರ ಅನುಮತಿ ಪಡೆಯದೇ ಈ ಫೋಟೋವನ್ನು ಬಳಸಿಕೊಳ್ಳಲಾಗಿದೆ. ಈ ಹಿನ್ನೆಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ನಟ ಅಖಿಲ್ ಅಯ್ಯರ್ ಕಾಂಗ್ರೆಸ್ಗೆ ಎಚ್ಚರಿಸಿದ್ದಾರೆ.
ಈ ಬಗ್ಗೆ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟ ಅಖಿಲ್ ಅಯ್ಯರ್ ಟ್ವೀಟ್ ಮಾಡಿದ್ದಾರೆ. ನನ್ನ ಫೋಟೋವನ್ನು ನನ್ನ ಸಮ್ಮತಿಯಿಲ್ಲದೇ ಕಾನೂನುಬಾಹಿರವಾಗಿ 40% ಸರ್ಕಾರದ ವಿರುದ್ಧದ ಕಾಂಗ್ರೆಸ್ ಅಭಿಯಾನಕ್ಕೆ ಬಳಸುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಇದಕ್ಕೂ ನನಗೂ ಸಂಬಂಧವಿಲ್ಲ, ಆದರೂ ನನ್ನ ಫೋಟೋ ಬಳಸಿಕೊಳ್ಳಲಾಗಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಈ ಬಗ್ಗೆ ಗಮನ ಹರಿಸಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ನೆಲಮಂಗಲ: 'PAYCM' ಪೋಸ್ಟರ್ ಅಂಟಿಸಿದ ಮೂವರು ವಿದ್ಯಾರ್ಥಿಗಳ ಬಂಧನ