ಬೆಂಗಳೂರು: 'ದಿ ಟ್ರಯಲ್' ಎಂಬ ಹೊಸ ಸೀರಿಸ್ ಮೂಲಕ ಒಟಿಟಿಯಲ್ಲಿ ಇದೇ ಮೊದಲ ಬಾರಿಗೆ ನಟಿ ಕಾಜೋಲ್ ಕಾಲಿಟ್ಟಿದ್ದು, ಪ್ರೀಮಿಯರ್ನಲ್ಲಿ ಅವರು ಯಶಸ್ಸು ಕಂಡಿದ್ದಾರೆ. ಇದೇ ಯಶಸ್ಸಿನ ಬೆನ್ನಲ್ಲೇ ಇದೀಗ ಅವರು ಅದರ ಸಂಭ್ರಮಾಚರಣೆ ನಡೆಸಿದ್ದಾರೆ. ಈ ಸಂತೋಷವನ್ನು ಕುಟುಂಬ ಸದಸ್ಯರೊಂದಿಗೆ ಆಚರಣೆ ನಡೆಸಲು ವಿದೇಶಕ್ಕೆ ಹಾರಿದ್ದಾರೆ. ಗಂಡ ಅಜಯ್ ದೇವಗನ್ ಮತ್ತು ಮಕ್ಕಳಾದ ನವ್ಯಾ ಮತ್ತು ಯುಗ್ ಜೊತೆ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ, ಈ ಮೂಲಕ ಅಜಯ್ ಮತ್ತು ಕಾಜೋಲ್ ದೂರಾಗುತ್ತಿದ್ದಾರೆ ಎಂಬ ವಿಚ್ಛೇದನದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಈ ಫೋಟೋವನ್ನು ನಟ ಅಜಯ್ ದೇವಗನ್ ಕೂಡ ರಿಶೇರ್ ಮಾಡಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ತಮ್ಮ ಮುದ್ದು ಕುಟುಂಬದ ಫೋಟೋವನ್ನು ಹಂಚಿಕೊಂಡಿರುವ ನಟ ಅಜಯ್ ದೇವಗನ್, "ನಿಮ್ಮ ಗುಂಪಿನ ಜೊತೆ ಸಮಯ ಕಳೆಯುವುದಕ್ಕಿಂತ ಹೆಚ್ಚು ಉತ್ತಮವಾದ ಸಮಯ ಮತ್ತೊಂದಿಲ್ಲ" ಎಂದು ಭಾವನಾತ್ಮಕವಾಗಿ ಅವರು ಅಡಿಬರಹ ಬರೆದಿದ್ದಾರೆ. ಫೋಟೋದಲ್ಲಿ ನಟಿ ಅಜಯ್ ದೇವಗನ್ ಮೇಲೆ ನಟಿ ಕಾಜೋಲ್ ಕೈ ಹಾಕಿರುವುದು ಕಾಣಬಹುದಾಗಿದೆ. ಚಿತ್ರದಲ್ಲಿ ಇವರ ಮಕ್ಕಳಾದ ಯುಗ್ (12), ನ್ಯಸಾ (20) ಮತ್ತು ಅಜಯ್ ದೇವಗನ್ ಅವರ ಲಂಡನ್ನಲ್ಲಿರುವ ಅಳಿಯ ದಾನಿಶ್ ಗಾಂಧಿಯನ್ನು ಕಾಣಬಹುದಾಗಿದೆ
ಇನ್ನು ನಟಿ ಕಾಜೋಲ್ ಕೂಡ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಫೋಟೋವನ್ನು ಹಾಕಿದ್ದು, 'ನಾನು ಒಪ್ಪುತ್ತೇನೆ... ನೆನಪುಗಳನ್ನು ದಾಖಲಿಸಬೇಕು' ಎಂದು ಅಡಿ ಬರಹ ಬರೆದಿದ್ದಾರೆ. ಇದಕ್ಕಿಂತ ಮೊದಲು ನಟಿ ಕಾಜೋಲ್ ಲಂಡನ್ ಪ್ರವಾಸಕ್ಕೆ ಹೊರಡುವ ಮುನ್ನ ನಟಿ ದಿ ಟ್ರಯಲ್ ತಂಡದ ಜೊತೆಗಿನ ಫೋಟೋ ಹಂಚಿಕೊಂಡಿದ್ದರು. ತಮ್ಮ ಮೊದಲ ಒಟಿಟಿ ವೆಬ್ ಸಿರೀಸ್ ದಿ ಟ್ರಯಲ್ ಅನ್ನು ನೋಡಿ, ಪ್ರೀತಿ ವಿಶ್ವಾಸದ ಸಂದೇಶ ಕಳುಹಿಸುವ ಮೂಲಕ ತಮ್ಮ ಹೊಸ ದಾರಿಗೆ ಬೆಳಕು ನೀಡಿದ ಎಲ್ಲರಿಗೂ ಧನ್ಯವಾದ. ಅದರಲ್ಲೂ ಅದ್ಬುತ ದಿ ಟ್ರಯಲ್ನ ಅದ್ಬುತ ತಂಡ ಮತ್ತು ಸಿಬ್ಬಂದಿಗೆ ದೊಡ್ಡ ಕೃತಜ್ಞತೆ.. ಎಂದು ತಿಳಿಸಿದ್ದರು.