ಕರ್ನಾಟಕ

karnataka

ETV Bharat / entertainment

ನಟ ಅಡಿವಿ ಶೇಷ್ ಅಭಿನಯದ ಗೂಢಾಚಾರಿ 2 ಫಸ್ಟ್ ಲುಕ್ ರಿಲೀಸ್ - Adivi Sesh latest news

ಬರುತ್ತಿದೆ ಸೂಪರ್​ ಹಿಟ್​ ಸಿನಿಮಾದ ಸೀಕ್ವೆಲ್ - ಗೂಢಾಚಾರಿ ಸೀಕ್ವೆಲ್​ಗೆ ರೆಡಿ ನಟ ಅಡಿವಿ ಶೇಷ್ - ಪ್ಯಾನ್ ಇಂಡಿಯಾ ಸಿನಿಮಾ ಗೂಢಾಚಾರಿ 2 ಫಸ್ಟ್ ಲುಕ್ ರಿಲೀಸ್.

Goodachari 2 first look
ಗೂಢಾಚಾರಿ 2 ಫಸ್ಟ್ ಲುಕ್

By

Published : Dec 30, 2022, 2:06 PM IST

Updated : Dec 30, 2022, 2:45 PM IST

ತೆಲುಗು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ 'ಗೂಢಾಚಾರಿ'. ಅಡಿವಿ ಶೇಷ್ ನಟನೆಯಲ್ಲಿ ಮೂಡಿ ಬಂದ ಆ್ಯಕ್ಷನ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಗಳಿಕೆ ಕಂಡಿತ್ತು. ಇದೀಗ ಈ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಬರಲು ಸಜ್ಜಾಗಿದೆ. ತೆರೆ ಮೇಲೆ ಕಮಾಲ್ ಮಾಡೋದು ಕನ್ಫರ್ಮ್ ಆಗಿದೆ. ಗೂಢಾಚಾರಿ 2 ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಜನವರಿ 9ರಂದು ಪ್ರಿ ವಿಷನ್ ವಿಡಿಯೋ ಬಿಡುಗಡೆಯಾಗುತ್ತಿದೆ.

ಗೂಢಾಚಾರಿ ಸೀಕ್ವೆಲ್​: ಪ್ರತಿ ಬಾರಿ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಮನೋರಂಜಿಸುವ ನಟ ಅಡಿವಿ ಶೇಷ್ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಮೇಜರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸೂಪರ್ ಸಕ್ಸಸ್ ಕಂಡಿದ್ದು, ಭಾರತದಾದ್ಯಂತ ಇವರ ಸಿನಿಮಾಗಳಿಗೆ ಅಭಿಮಾನಿಗಳಿದ್ದಾರೆ. ಶಶಿ ಕಿರಣ್ ಟಿಕ್ಕ ನಿರ್ದೇಶನದಲ್ಲಿ ಮೂಡಿ ಬಂದ ಗೂಢಾಚಾರಿ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿತ್ತು.

ಇವರಿಬ್ಬರ ಕಾಂಬಿನೇಶನ್​​ನಲ್ಲಿ ಬಂದ ಪ್ಯಾನ್ ಇಂಡಿಯಾ ಸಿನಿಮಾ ಮೇಜರ್ ಕೂಡ ಸೂಪರ್ ಸಕ್ಸಸ್ ಕಂಡಿದೆ. ಇತ್ತೀಚೆಗೆ ತೆರೆಕಂಡ ಹಿಟ್ 2 ಕೂಡ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದು, ಇದೀಗ ಗೂಢಾಚಾರಿ ಸೀಕ್ವೆಲ್​ಗೆ ರೆಡಿಯಾಗಿದ್ದಾರೆ ನಟ ಅಡಿವಿ ಶೇಷ್.

ಗೂಢಾಚಾರಿ 2 ಫಸ್ಟ್ ಲುಕ್

ಪ್ಯಾನ್ ಇಂಡಿಯಾ ಸಿನಿಮಾ ಗೂಢಾಚಾರಿ 2: ಗೂಢಾಚಾರಿ 2 ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಗ್ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿದೆ. ಅಡಿವಿ ಶೇಷ್ ನಟನೆಯ ಮೇಜರ್​ ಚಿತ್ರದ ಎಡಿಟರ್ ವಿನಯ್ ಕುಮಾರ್ ಸಿರಿಗಿನೀದಿ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಚಿತ್ರಕ್ಕೆ ಅಡಿವಿ ಶೇಷ್ ಕಥೆ ಬರೆದಿದ್ದು, ಕಾರ್ತೀಕೇಯ 2, ಮೇಜರ್ ಹಾಗೂ ಕಾಶ್ಮೀರಿ ಫೈಲ್ಸ್ ನಂತಹ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿರೋ ದೊಡ್ಡ ನಿರ್ಮಾಣ ಸಂಸ್ಥೆಗಳು ಗೂಢಾಚಾರಿ 2 ಚಿತ್ರಕ್ಕೆ ಬಂಡವಾಳ ಹೂಡುತ್ತಿವೆ.

ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು ಎಕೆ ಎಂಟರ್​​ಟೈನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ಅಡಿ ಟಿಜಿ ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್ ವಾಲ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ:ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಟ್ರೈಲರ್​ ಮೆಚ್ಚಿದ ಅಮೋಘ ವರ್ಷ

ಗೂಢಾಚಾರಿ 2 ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಜನವರಿ 9ರಂದು ಡೆಲ್ಲಿ ಹಾಗೂ ಮುಂಬೈನಲ್ಲಿ ಚಿತ್ರದ ಪ್ರಿ ವಿಷನ್ ವಿಡಿಯೋ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಮೊದಲ ಚಿತ್ರದಲ್ಲಿದ್ದ ಕಲಾವಿದರ ಜೊತೆಗೆ ಒಂದಿಷ್ಟು ಹೊಸ ಪಾತ್ರವರ್ಗ ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಕಥೆಗೆ ತಕ್ಕಂತೆ ಸಿನಿಮಾ ಮೇಕಿಂಗ್, ತಾಂತ್ರಿಕ ವರ್ಗ ಇರಲಿದ್ದು ಆ್ಯಕ್ಷನ್ ಸೀನ್​ಗಳು ದೊಡ್ಡ ಮಟ್ಟದಲ್ಲಿ ಮೂಡಿ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ:ಸೌತ್​ ಸಿನಿಮಾ ಬಗ್ಗೆ ರಶ್ಮಿಕಾ ಹೇಳಿಕೆ.. ಟ್ರೋಲಿಗರಿಗೆ ಮತ್ತೆ ಗುರಿಯಾದ ಮಂದಣ್ಣ

Last Updated : Dec 30, 2022, 2:45 PM IST

ABOUT THE AUTHOR

...view details