ಕರ್ನಾಟಕ

karnataka

ETV Bharat / entertainment

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಡೆಡ್ಲಿ ಸೋಮ‌ ಆದಿತ್ಯ.. ಸದ್ದಿಲ್ಲದೇ ಶೂಟಿಂಗ್​ ಶುರು - aditya upcoming movie

ನಟ ಆದಿತ್ಯ ಹೆಸರಿಡದ‌ ಚಿತ್ರದ ಶೂಟಿಂಗ್​​ ಆರಂಭಿಸಿದ್ದಾರೆ.

aditya new movie
ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ನಟ ಆದಿತ್ಯ

By

Published : Jun 21, 2023, 5:24 PM IST

ಕನ್ನಡ ಚಿತ್ರರಂಗದಲ್ಲಿ ಬಹು ಸಮಯದಿಂದ ಗುರುತಿಸಿಕೊಂಡಿರುವ ನಟ ಆದಿತ್ಯ. ಡೆಡ್ಲಿ ಸೋಮ ಅಂತಾನೇ ಫೇಮಸ್​​​. ಬೆಂಗಳೂರು ಅಂಡರ್ ವರ್ಲ್ಡ್ ಸಿನಿಮಾದ ನಂತರ ಇವರು ಟೆರರ್ ಎಂಬ ಸಿನಿಮಾ ಘೋಷಿಸಿ ಸುದ್ದಿಯಾಗಿದ್ದರು. ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ‌. ಚಿತ್ರದ ಶೀರ್ಷಿಕೆ ಇನ್ನೂ ಫೈನಲ್​ ಆಗಿಲ್ಲ.

ಡೆಡ್ಲಿ ಸೋಮ‌ ಹಾಗೂ ಎದೆಗಾರಿಕೆ ಚಿತ್ರಗಳ ಮೂಲಕ ಮಾಸ್ ಇಮೇಜ್ ಹೊಂದಿದ್ದಾರೆ. ತಮ್ಮ ನಟನೆ‌‌‌ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ನಟ ಆದಿತ್ಯ ಹೆಸರಿಡದ‌ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸದ್ದಿಲ್ಲದೇ ಆರಂಭವಾಗಿರೋ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿಶೋರ್ ಮೇಗಳಮನೆ ನಿರ್ದೇಶಿಸುತ್ತಿದ್ದಾರೆ‌‌. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕಿಶೋರ್ ಮೇಗಳಮನೆ ಅವರೇ ಬರದಿದ್ದಾರೆ. ಕಿಶೋರ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಚಿಕ್ಕಮಗಳೂರು ಹಾಗೂ ಬೆಂಗಳೂರು ಸುತ್ತಮುತ್ತ 17 ದಿನಗಳ ಚಿತ್ರೀಕರಣ ಮಾಡಲಾಗುತ್ತದೆ. ಆದಿತ್ಯ ಅವರಿಗೆ ಜೋಡಿಯಾಗಿ ರಂಜನಿ ರಾಘವನ್ ನಟಿಸುತ್ತಿದ್ದಾರೆ. ಶಿವಮಣಿ (ನಿರ್ದೇಶಕ), ಅಶ್ವಿನ್ ಹಾಸನ್, ಕರಿಸುಬ್ಬು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಗಾಯಕರಾಗಿ ಹೆಸರು ಮಾಡಿರುವ ಶಶಾಂಕ್ ಶೇಷಗಿರಿ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ನೂತನ ಚಿತ್ರಕ್ಕಿರಲಿದೆ. ಸದ್ಯದಲ್ಲೇ ಕನ್ನಡದ ಚಿತ್ರರಂಗದ ಖ್ಯಾತ ನಟರೊಬ್ಬರು ಚಿತ್ರದ ಶೀರ್ಷಿಕೆ ಅನಾವರಣ ಮಾಡಲಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಪೀಣ್ಯ ಫ್ಯಾಕ್ಟರಿ ಮಾಲೀಕರಾದ ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ರಾಮಚಂದ್ರಯ್ಯ ಕೆ.ಜಿ ಈ ಚಿತ್ರವನ್ನು ನಿರ್ಮಾಣ‌ ಮಾಡುತ್ತಿದ್ದಾರೆ.

ನಟ ಆದಿತ್ಯ

ಇದನ್ನೂ ಓದಿ:ಸ್ಕ್ರಿಪ್ಟ್ ರೆಡಿ, ಶೀಘ್ರವೇ ಸಿನಿಮಾ ಅನೌನ್ಸ್: ಬಾಲಿವುಡ್​ಗೆ ಹೋಗಲ್ಲ, ಎಲ್ಲರನ್ನೂ ಇಲ್ಲಿಗೆ ಕರೆಸಿಕೊಳ್ಳುತ್ತೇನೆಂದ ಯಶ್​​

ನಟ ಆದಿತ್ಯ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಮತ್ತೊಂದು ಸಿನಿಮಾ 'ಟೆರರ್'. ಪ್ಯಾನ್​ ಇಂಡಿಯಾ ಮಟ್ಟದಲ್ಲಿ 'ಟೆರರ್' ರೆಡಿ ಆಗುತ್ತಿದೆ. ಯಂಗ್ ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ಆದಿತ್ಯ ಕಾಣಿಸಿಕೊಳ್ಳಲಿದ್ದಾರೆ. ಆದಿತ್ಯ ಅಭಿನಯದ ಮೊದಲ ಪ್ಯಾನ್​​ ಇಂಡಿಯಾ ಚಿತ್ರವಿದು. ಮಾಫಿಯಾ ಸುತ್ತ ಕಥೆ ಇದ್ದು, ಹೆಚ್ಚಿನ ಭಾಗ ಬೆಂಗಳೂರಿನಲ್ಲೇ ಚಿತ್ರೀಕರಣಗೊಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ 'ಟೆರರ್' ತೆರೆ ಕಾಣಲಿದೆ. ಉಪೇಂದ್ರ ಅವರ "A" ಸೇರಿದಂತೆ ಅನೇಕ ಹಿಟ್​ ಸಿನಿಮಾಗಳನ್ನು ನಿರ್ಮಿಸಿರುವ ಸಿಲ್ಕ್ ಮಂಜು ಈ ಚಿತ್ರವನ್ನು‌ ನಿರ್ಮಾಣ ಮಾಡುತ್ತಿದ್ದು, ರಂಜನ್ ಶಿವರಾಮ ಗೌಡ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಮೇ 5ರಂದು ನಟ ಆದಿತ್ಯ ಅವರ ಹುಟ್ಟುಹಬ್ಬ ಹಿನ್ನೆಲೆ ಚಿತ್ರದ ಟೀಸರ್​ ಅನಾವರಣಗೊಂಡು, ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿತ್ತು.

ಇದನ್ನೂ ಓದಿ:'ಹನುಮಂತ ದೇವರಲ್ಲ': ಪೊಲೀಸರ ಭದ್ರತೆಯಲ್ಲಿರುವಾಗ ಆದಿಪುರುಷ್​​ ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಹೇಳಿಕೆ

ABOUT THE AUTHOR

...view details