ಕರ್ನಾಟಕ

karnataka

ETV Bharat / entertainment

ನಟನೆಯಿಂದ ಕೊಂಚ ವಿರಾಮ.. ಕುಟುಂಬಕ್ಕೆ ಸಮಯ ಕೊಡಲು ನಿರ್ಧರಿಸಿದ ಅಮಿರ್​ ಖಾನ್​ - ಅಮಿರ್​ ಖಾನ್​ ನಿರ್ಮಾಣದ ಚಾಂಪಿಯನ್ಸ್ ಸಿನಿಮಾ

ಬಾಲಿವುಡ್ ಸೂಪರ್​​ ಸ್ಟಾರ್ ಅಮಿರ್​ ಖಾನ್​ ನಟನೆಯಿಂದ ವಿರಾಮ ಪಡೆದು, ಕುಟುಂಬಸ್ಥರೊಂದಿಗೆ ಸಮಯ ಕಳೆಯಲು ನಿರ್ಧರಿಸದ್ದಾರೆ.

Actor Aamir Khan
ನಟ ಅಮಿರ್​ ಖಾನ್​

By

Published : Nov 15, 2022, 1:11 PM IST

ತಮ್ಮ ಜೀವನದ 35 ವರ್ಷಗಳನ್ನು ಚಿತ್ರರಂಗದ ಕೆಲಸದ ಮೇಲೆ ಕೇಂದ್ರೀಕರಿಸಿದ್ದ ಬಾಲಿವುಡ್ ತಾರೆ ಅಮಿರ್ ಖಾನ್ ತಮ್ಮ ವೃತ್ತಿ ಜೀವನಕ್ಕಿಂತ ಕುಟುಂಬಕ್ಕೆ ಆದ್ಯತೆ ನೀಡಲು ಬಯಸಿದ್ದಾರೆ. ಕುಟುಂಬಸ್ಥರಿಗಾಗಿ ಒಂದೂವರೆ ವರ್ಷ ಸಮಯವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಆಗಸ್ಟ್ 11 ರಂದು "ಲಾಲ್ ಸಿಂಗ್ ಚಡ್ಡಾ" ಬಿಡುಗಡೆಯಾದ ನಂತರ "ಚಾಂಪಿಯನ್ಸ್" ಚಿತ್ರಕ್ಕಾಗಿ ಅಮಿರ್​​ ತಯಾರಿಯನ್ನು ಪ್ರಾರಂಭಿಸಬೇಕಾಗಿತ್ತು. ಹಾಲಿವುಡ್ ಚಿತ್ರ "ಫಾರೆಸ್ಟ್ ಗಂಪ್"ನ ಹಿಂದಿ ರೂಪಾಂತರ "ಲಾಲ್ ಸಿಂಗ್ ಚಡ್ಡಾ" ಮಿಶ್ರ ವಿಮರ್ಶೆ ಗಳಿಸಿತು. ಕಲೆಕ್ಷನ್​ ವಿಚಾರದಲ್ಲಿ ನಿರೀಕ್ಷೆಯನ್ನು ಹುಸಿಯಾಗಿಸಿತು. ಇದೀಗ ಬಾಲ್ಯದ ಗೆಳೆಯನ ಚಾಟ್ ಸೆಷನ್​​ನಲ್ಲಿ ವೃತ್ತಿಜೀವನದ ಬಗ್ಗೆ ಮಾತನಾಡಿದ ಅಮಿರ್​, "ನಟನಾಗಿ ಚಿತ್ರ ಮಾಡುವಾಗ ನಾನು ಅದರಲ್ಲೇ ಮಗ್ನನಾಗುತ್ತೇನೆ, ಮತ್ತು ನನ್ನ ಜೀವನದಲ್ಲಿ ಬೇರೆ ಏನೂ ಆಗುವುದಿಲ್ಲ. ಅದಕ್ಕಾಗಿಯೇ ನಾನು ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ'' ಎಂದಿದ್ದಾರೆ.

ಕುಟುಂಬಕ್ಕೆ ಸಮಯ ಕೊಡಲು ನಿರ್ಧರಿಸಿದ ಅಮಿರ್​ ಖಾನ್​

''ಲಾಲ್ ಸಿಂಗ್ ಚಡ್ಡಾ ನಂತರ ನಾನು ಚಾಂಪಿಯನ್ಸ್ ಎಂಬ ಚಿತ್ರವನ್ನು ಮಾಡಬೇಕಾಗಿತ್ತು. ಇದು ಸುಂದರ, ಅದ್ಭುತ ಚಿತ್ರಕಥೆ, ಇದು ತುಂಬಾ ಹೃದಯಸ್ಪರ್ಶಿ ಸಿನಿಮಾ. ಆದರೆ ನಾನು ಸ್ವಲ್ಪ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ. ನನ್ನ ಕುಟುಂಬದೊಂದಿಗೆ, ನನ್ನ ತಾಯಿಯೊಂದಿಗೆ, ನನ್ನ ಮಕ್ಕಳೊಂದಿಗೆ ಇರಲು ಬಯಸಿದ್ದೇನೆ" ಎಂದು ಹೇಳಿದರು.

ಇದನ್ನೂ ಓದಿ:ಹೊಸತನದಲ್ಲಿ ಹಳೇ ಹಾಡು.. 'ಮೆಲ್ಲುಸಿರೆ ಸವಿಗಾನ'ಕ್ಕೆ ಸೊಂಟ ಬಳುಕಿಸಿದ ರೀಷ್ಮಾ ನಾಣಯ್ಯ

ಇನ್ನು, "ನಾನು 'ಚಾಂಪಿಯನ್ಸ್ ಚಿತ್ರದ ನಿರ್ಮಾಪಕನಾಗಿ ಕೆಲಸ ಮಾಡುತ್ತೇನೆ, ಏಕೆಂದರೆ ನಾನು ನಿಜವಾಗಿಯೂ ಚಿತ್ರದ ಮೇಲೆ ನಂಬಿಕೆ ಹೊಂದಿದ್ದೇನೆ. ನನ್ನ ಪಾತ್ರವನ್ನು ಮಾಡಲು ಆಸಕ್ತಿ ಹೊಂದಿದ್ದಾರೆಯೇ ಎಂದು ನೋಡಲು ನಾನು ಇತರೆ ನಟರನ್ನು ಸಂಪರ್ಕಿಸುತ್ತೇನೆ. ಸದ್ಯ ನಾನು ನನ್ನ ಸಂಬಂಧಗಳನ್ನು ಆನಂದಿಸಲು ಬಯಸುತ್ತೇನೆ" ಎಂದು ಅವರು ಹೇಳಿದರು. "ಚಾಂಪಿಯನ್ಸ್" ಅನ್ನು ಅಮೀರ್ ಖಾನ್ ಪ್ರೊಡಕ್ಷನ್ಸ್ ಜೊತೆಗೆ ಸೋನಿ ಪಿಕ್ಚರ್ಸ್ ಇಂಟರ್​ನ್ಯಾಷನಲ್ ಪ್ರೊಡಕ್ಷನ್ಸ್, ಇಂಡಿಯಾ ಮತ್ತು 200ನಾಟ್ ಔಟ್ ಪ್ರೊಡಕ್ಷನ್ಸ್ ಸಹ-ನಿರ್ಮಾಣ ಮಾಡಲಿದೆ.

ABOUT THE AUTHOR

...view details