ಕರ್ನಾಟಕ

karnataka

ETV Bharat / entertainment

ಅಭಿಮಾನಿಯ ಕುಟುಂಬಕ್ಕೆ ಆಸರೆಯಾದ ಆ್ಯಕ್ಷನ್ ಪ್ರಿನ್ಸ್‌ ಧ್ರುವಾ ಸರ್ಜಾ - martin teaser releasing soon

ಫೆ.14ರಂದು ಅಪಘಾತಕ್ಕೀಡಾಗಿ ಕೋಮಾಗೆ ಜಾರಿದ ಧ್ರುವಾ ಅಭಿಮಾನಿ - ಅಪಘಾತದ ಸುದ್ದಿ ಕೇಳಿ ಆಸ್ಪತ್ರೆಗೆ ಭೇಟಿ ನೀಡಿ ಕಣ್ಣೀರಿಟ್ಟ ಧ್ರುವಾ - ಅಭಿಮಾನಿ ಪೋಷಕರಿಗೆ ಐದು ಲಕ್ಷ ರೂ. ನೆರವು.

action-prince-dhruva-sarja-the-mainstay-of-a-fan-family
ಅಭಿಮಾನಿಯ ಕುಟುಂಬಕ್ಕೆ ಆಸರೆಯಾದ ಆ್ಯಕ್ಷನ್ ಪ್ರಿನ್ಸ್‌ ಧ್ರುವಾ ಸರ್ಜಾ

By

Published : Feb 18, 2023, 9:57 PM IST

ಮಾರ್ಟಿನ್ ಸಿನಿಮಾದ ಗುಂಗಿನಲ್ಲಿದ್ದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮನಸ್ಸಿಗೆ ತೀವ್ರ ನೋಚಾಗಿದೆ. ಕಣ್ಣು ಮತ್ತೆ ತೇವವಾಗಿದೆ. ಯಾಕಂದ್ರೇ ಧ್ರುವಾ ಅವರ ಅಭಿಮಾನಿಯೊಬ್ಬರು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬಾರದಲೋಕಕ್ಕೆ ತೆರಳಿರುವುದು ಬರಸಿಡಿಲು ಬಡಿದಂತಾಗಿದೆ. ಹೌದು, ಕೆಲವರ ಪಾಲಿಗೆ ಅಭಿಮಾನಿಗಳೇ ಸೆಲೆಬ್ರೆಟಿಗಳು. ಇನ್ನೂ ಕೆಲವರ ಪಾಲಿಗೆ ವಿಐಪಿ. ಆದ್ರೇ ವಾಸ್ತವದಲ್ಲಿ ಅಣ್ಣಾವ್ರು ಹೇಳಿದಂತೆ ಅಭಿಮಾನಿಯೇ ದೇವರು. ಕಾಲ ಕಾಲಕ್ಕೆ ಅಭಿಮಾನದ ವ್ಯಾಖ್ಯಾನ ಬದಲಾಗಬಹುದೇ ಹೊರತು, ಅಭಿಮಾನದ ಅರ್ಥ ಬದಲಾಗಲ್ಲ.

ಈ ಕಾಲದಲ್ಲಿ ಅಭಿಮಾನಿ ವರ್ಗವನ್ನೂ ಕ್ಲಾಸ್-ಮಾಸ್ ಇತ್ಯಾದಿ ಇತ್ಯಾದಿಯೆಂದು ವಿಂಗಡಣೆ ಮಾಡಲಾಗಿದೆ. ಕೆಲವರ ವರ್ತನೆ ಅಭಿಮಾನಕ್ಕೆ ಕಪ್ಪು ಚುಕ್ಕೆಯಂತೆ ಭಾಸವೂ ಆಗ್ತಿದೆ. ಆದ್ರೇ, ಎಲ್ಲರೂ ಒಂದೇ ಥರ ಇರುವುದಿಲ್ಲ. ಒಂದೇ ವರ್ಗಕ್ಕೆ ಸೇರುವುದು ಇಲ್ಲ. ಯಥಾ ರಾಜ ತಥಾ ಪ್ರಜೆ ಎಂಬಂತೆ ನಾಯಕನಂತೆಯೇ ಆರಾಧನೆ ಮಾಡುವ ಭಕ್ತಗಣ ಕೂಡಾ ಇರುತ್ತೆ. ಅಭಿಮಾನದ ಶ್ರೀ ರಕ್ಷೆಯಲ್ಲಿರುವ ತಾರೆಯರಲ್ಲಿ, ಅಭಿಮಾನ ಸುರಕ್ಷಿತವಾಗಿರಬೇಕೆಂಬ ಕಾಳಜಿಯೂ ಇರುತ್ತೆ. ಈ ಅಭಿಮಾನಕ್ಕೆ ಚೂರು ಪೆಟ್ಟಾದರು ನಾಯಕನ ಮನಸು ನೋಯುತ್ತೆ. ಧ್ರುವಾಗೆ ಆದ ನೋವು ಸದ್ಯಕ್ಕೆ ಇಂಥಹದ್ದೇ.

ಅಭಿಮಾನಿಯ ಕುಟುಂಬಕ್ಕೆ ಆಸರೆಯಾದ ಆ್ಯಕ್ಷನ್ ಪ್ರಿನ್ಸ್‌ ಧ್ರುವಾ ಸರ್ಜಾ

ಪೃಥ್ವಿರಾಜ್ ಎಂಬ ಧ್ರುವ ಸರ್ಜಾ ಅಭಿಮಾನಿ. ಧ್ರುವ ಅಂದ್ರೇ ಪೃಥ್ವಿರಾಜ್​ಗೆ ಪಂಚ ಪ್ರಾಣ. ವಾರಕ್ಕೆ ಒಮ್ಮೆಯಾದರು ಧ್ರುವಾ ಅವರನ್ನ ಪೃಥ್ವಿರಾಜ್ ಭೇಟಿಯಾಗುತ್ತಿದ್ದರು. ಧ್ರುವಾ ಮನೆಗೆ ತೆರಳಿ ಕುಶಲೋಪರಿ ವಿಚಾರಿಸಿಕೊಂಡು ಬರುತ್ತಿದ್ದರು. ಮಾರ್ಟಿನ್ ಟೀಸರ್ ನೋಡಲು ಕಾತರದಿಂದ ಕಾಯುತ್ತಿದ್ದರು ಕೂಡಾ.

ಆದರೆ ಫೆಬ್ರುವರಿ 14ಕ್ಕೆ ಪೃಥ್ವಿರಾಜ್ ಬೈಕ್ ಅಪಘಾತಕ್ಕೀಡಾಗಿ ಕೋಮಾಗೆ ಜಾರಿದ್ದಾರೆ. ಮತ್ತೆ ಸಹಜ ಸ್ಥಿತಿಗೆ ಮರಳುವುದು ಅನುಮಾನ ಎಂದು ವೈದ್ಯರು ಹೇಳಿದ್ದಾರೆ. ಎದೆ ಎತ್ತರಕ್ಕೆ ಬೆಳದು ನಿಂತ ಮಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವದನ್ನ ಕಣ್ಣಾರೆ ಕಂಡು, ಹೈರಾಣಾದ ಹೆತ್ತವರ ಮೇಲೆ ಆಕಾಶ ಕಳಚಿ ಬಿದ್ದಂತಾಗಿತ್ತು. ಆದರು ನೋವಲ್ಲಿಯೂ ಮಗನ ಅಂಗಾಗ ದಾನ ಮಾಡಿದರು. ಧ್ರುವ ಸರ್ಜಾ ಅವರಿಗೆ ವಿಷಯವನ್ನು ತಲುಪಿಸಿದರು.

ಅಭಿಮಾನಿಯ ಅಪಘಾತದ ಸುದ್ದಿ ಕೇಳಿ, ದಿಗ್ಭ್ರಾಂತಗೊಂಡ ಧ್ರುವಾ ಆಸ್ಪತ್ರೆಗೆ ಶುಕ್ರವಾರ ಆಗಮಿಸಿದ್ದರು. ಅಭಿಮಾನಿಯನ್ನ ಕಂಡು ಕಣ್ಣೀರಿಟ್ಟರು, ಪೃಥ್ವಿರಾಜ್ ಹೆತ್ತವರ ಕಣ್ಣೀರನ್ನು ಒರೆಸುವ ಪ್ರಯತ್ನವನ್ನು ಮಾಡಿದರು. ಆದ್ರೇ, ಕಣ್ಮುಂದೆ ಇನ್ನು ಎತ್ತರಕ್ಕೆ ಬೆಳದು ಆಸರೆಯಾಗಬೇಕಿದ್ದ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

ಮಗನ ಚಿಕಿತ್ಸೆಗೆ ಸಾಲ ಮಾಡಿದ್ದ ತಂದೆಯ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಆದರು ಸಮಾಧಾನ ಪಡಿಸುವ ಪ್ರಯತ್ನವನ್ನ ಮಾಡಿದ ಧ್ರುವಾ ಅವರು ಪೃಥ್ವಿರಾಜ್ ಹೆತ್ತವರಿಗೆ ಐದು ಲಕ್ಷದ ನೆರವನ್ನ ನೀಡಿದ್ದಾರೆ. ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿಯೆಂದು ಕೈ ಮುಗಿದು ಎಲ್ಲರಲ್ಲಿ ಮನವಿಯನ್ನೂ ಮಾಡಿಕೊಂಡು ಭಾವುಕರಾದರು ಧ್ರುವ ಸರ್ಜಾ. ಇನ್ನು ಧ್ರುವಾ ಇನ್ಯಾವತ್ತು ಆಸ್ಪತ್ರೆಯ ಮೆಟ್ಟಿಲು ಹತ್ತಬಾರದೆನ್ನುವ ತೀರ್ಮಾನವನ್ನ ಹಿಂದೆ ಮಾಡಿದ್ದರು. ಅಣ್ಣ ಮತ್ತು ಅಜ್ಜಿಯ ನಿಧನದಿಂದ ಇಂತಹದ್ದೊಂದು ನಿರ್ಧಾರವನ್ನ ಧ್ರುವ ಮಾಡಿದ್ದರು. ಆದ್ರೇ, ಅಭಿಮಾನ ನಿರ್ಧಾರವನ್ನು ಬದಲಿಸುವಂತೆ ಮಾಡಿತು.

ಒಟ್ಟಿನಲ್ಲಿ, ಮಾರ್ಟಿನ್ ಚಿತ್ರದ ಟೀಸರ್ ಬಿಡುಗಡೆಯ ಕೆಲಸದ ಒತ್ತಡ ಇದ್ದರು, ಅಭಿಮಾನಿಯ ಅಭಿಮಾನಕ್ಕೆ ಶರಣಾಗಿ ಧ್ರುವ ಆಸ್ಪತ್ರೆಗೆ ಬಂದು ಅಭಿಮಾನಿಯ ದರ್ಶನವನ್ನ ಪಡೆದರು. ಕುಟುಂಬಕ್ಕೆ ಧೈರ್ಯವನ್ನ ಹೇಳಿ, ಕೈಲಾದ ಸಹಾಯವನ್ನೂ ಮಾಡಿದರು. ಧ್ರುವ ಅವರ ಈ ನಡೆ, ನಿಜಕ್ಕೂ ಪ್ರಶಂಸನೀಯ. ತನ್ನ ವಿಐಪಿ ಫ್ಯಾನ್ಸ್ ಮೇಲೆ ಧ್ರುವಾಗೆ ಇರುವ ಈ ಅಭಿಮಾನ ನಿಜಕ್ಕೂ ಶ್ಲಾಘನೀಯ. ಇನ್ನಾದರು, ಧ್ರುವ ಹೇಳಿದಂತೆ.. ಪೊಲೀಸರು ಮನವಿ ಮಾಡಿಕೊಳ್ಳುವಂತೆ ಬೈಕ್​ ಸವಾರರು ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮವನ್ನ ಪಾಲಿಸಲಿ ಎಂಬುದು ಚಂದನವನದ ತಾರೆಯರ ಕಳಕಳಿ ಆಗಿದೆ.

ಇದನ್ನೂ ಓದಿ:ರಾಜಮೌಳಿ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್​​

ABOUT THE AUTHOR

...view details