ಕರ್ನಾಟಕ

karnataka

ETV Bharat / entertainment

ಧ್ರುವ ಸರ್ಜಾ ಪತ್ನಿಗೆ ಈ‌ ನಟನ‌ ಸಿನಿಮಾಗಳೆಂದರೆ ಪಂಚಪ್ರಾಣವಂತೆ - avatara purusha kannada cinema

ಶರಣ್ ಅಭಿನಯದ ಅವತಾರ ಪುರುಷ ಸಿನಿಮಾದ ಟ್ರೈಲರ್ ಬಿಡುಗಡೆಗೊಳಿಸಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತನ್ನ ಹೆಂಡತಿ ಪ್ರೇರಣಾ ಬಗ್ಗೆ ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ.

action prince dhruva sarja said movie craze of his wife
ಧ್ರುವ ಸರ್ಜಾ ಮತ್ತು ಪ್ರೇರಣಾ

By

Published : May 3, 2022, 12:42 PM IST

ಸ್ಯಾಂಡಲ್‌ವುಡ್ 'ಅಧ್ಯಕ್ಷ' ನಟ ಶರಣ್. ಇವರ ಅಭಿನಯದ ಅವತಾರ ಪುರುಷ ಚಿತ್ರದ ಟ್ರೈಲರ್ ಅನ್ನು ಖಾಸಗಿ ಹೋಟೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟ್ರೈಲರ್‌ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ನಟ ಶರಣ್, ನಟಿ ಅಶಿಕಾ ರಂಗನಾಥ್, ನಿರ್ದೇಶಕ ಸಿಂಪಲ್ ಸುನಿ, ಸಾಯಿಪ್ರಕಾಶ್, ಹಿರಿಯ ನಟಿ ಭವ್ಯ, ಕ್ಯಾಮರಾಮ್ಯಾನ್ ವಿಲಿಯಂ ಡೇವಿಡ್ ಹಾಗು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತಿತರರು ಉಪಸ್ಥಿತರಿದ್ದರು.

ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ

ಟ್ರೈಲರ್ ಲಾಂಚ್ ಮಾಡಿ ಬಳಿಕ ಮಾತನಾಡಿದ ಧ್ರುವ ಸರ್ಜಾ, ಟ್ರೈಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ನಟ ಶರಣ್ ಅವರಿಂದ ಹಿಡಿದು, ಸಾಯಿಕುಮಾರ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಎಲ್ಲರ ಪಾತ್ರಗಳು ತುಂಬಾ ಚೆನ್ನಾಗಿವೆ. ನಾನು ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ ಎಂದು ಹೇಳಿದರು.

ಅವತಾರ ಪುರುಷ ಸಿನೆಮಾ ಟ್ರೈಲರ್ ಲಾಂಚ್ ಬಳಿಕ ಮಾತನಾಡಿದ ಧ್ರುವಸರ್ಜಾ

ಈ ಸಂದರ್ಭದಲ್ಲಿ ಧ್ರುವ ಸರ್ಜಾ ತನ್ನ ಪತ್ನಿ ಪ್ರೇರಣಾ ಬಗ್ಗೆ ಒಂದು ವಿಚಾರವನ್ನು ಹೇಳಿದರು. ಕಾಲೇಜು ದಿನಗಳ‌ಲ್ಲಿ ಪ್ರೇರಣಾಗೆ ಶರಣ್ ಸಿನಿಮಾಗಳು ಅಂದ್ರೆ ಪಂಚಪ್ರಾಣ. ಶರಣ್ ಅವರ ವಿಕ್ಟರಿ, ಅಧ್ಯಕ್ಷ, ಸಿನಿಮಾಗಳು ಸೇರಿದಂತೆ ಹಲವು ಚಿತ್ರಗಳನ್ನು‌ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದರಂತೆ. ನಮ್ಮ ಮದುವೆಗೂ ಮುಂಚೆ ನಾನು ಮತ್ತು ನನ್ನ ಹೆಂಡತಿ ಪ್ರೇರಣಾ ಒಟ್ಟಿಗೆ ಶರಣ್ ಸಿನಿಮಾಗಳನ್ನು ನೋಡ್ತಿದ್ವಿ ಎಂದರು.

ಇದನ್ನೂ ಓದಿ:'ಅವತಾರ ಪುರುಷ'ನಿಗೆ ಸಾಥ್ ನೀಡಿದ ಆ್ಯಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾ..

ABOUT THE AUTHOR

...view details