ಹೊಸಕೋಟೆ: ನಗರದ ಹೊರವಲಯದ ಕೊಳತೂರು ಬಳಿ ಕಳೆದ ಮೂರು ದಿನಗಳಿಂದ ರಾಜ್ಯ ಮಟ್ಟದ ಎತ್ತಿನಗಾಡಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವರ್ತೂರಿನ ಹಳ್ಳಿಕಾರ್ ಸಂತೋಷ್ ಈ ಎತ್ತಿನಗಾಡಿ ಹಳ್ಳಿಕಾರ್ ರೇಸ್ ಅನ್ನು ಆಯೋಜನೆ ಮಾಡಿದ್ದರು. ಈ ರೇಸ್ನಲ್ಲಿ ರಾಜ್ಯ, ಆಂಧ್ರಪ್ರದೇಶ, ತಮಿಳುನಾಡಿನ 200ಕ್ಕೂ ಹೆಚ್ಚು ಹಳ್ಳಿಕಾರ್ ತಳಿಯ ಎತ್ತಿನ ಜೋಡಿಗಳು ಭಾಗವಹಿಸಿದ್ದವು.
ಎತ್ತಿನ ಗಾಡಿ ರೇಸ್ಗೆ ಬಂದ ಆ್ಯಕ್ಷನ್ ಪ್ರಿನ್ಸ್.. ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು - Hoskote bullock cart race
ರಾಜ್ಯ ಮಟ್ಟದ ಎತ್ತಿನಗಾಡಿ ಸ್ಪರ್ಧೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಗಮಿಸಿ ಸಾಥ್ ನೀಡಿದರು.

ಹೊಸಕೋಟೆ ಎತ್ತಿನ ಗಾಡಿ ರೇಸ್ಗೆ ಬಂದ ಆ್ಯಕ್ಷನ್ ಪ್ರಿನ್ಸ್
ಎತ್ತಿನ ಗಾಡಿ ರೇಸ್ಗೆ ಬಂದ ಆ್ಯಕ್ಷನ್ ಪ್ರಿನ್ಸ್
ಇಂದು ಅಂತಿಮ ದಿನದ ಹಿನ್ನೆಲೆ ನಟ ಧ್ರುವ ಸರ್ಜಾ ಕೂಡ ಎತ್ತಿನಗಾಡಿ ರೇಸ್ಗೆ ಆಗಮಿಸಿದ್ದರು. ನಟನ ಎಂಟ್ರಿ ಅಗ್ತಿದ್ದಂತೆ ಅಭಿಮಾನಿಗಳು ಜೈಕಾರ ಕೂಗಿದರು. ಸ್ಪರ್ಧೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಎತ್ತಿನಗಾಡಿ ಸ್ಪರ್ಧಿಗಳು ಕೂಡ ಧ್ರುವ ಸರ್ಜಾ ನೋಡಿ ಖುಷಿ ಪಟ್ಟರು. ರಾಜ್ಯ ಮಟ್ಟದ ಎತ್ತಿನಗಾಡಿ ಸ್ಪರ್ಧೆಯಲ್ಲಿ ಮಂಡ್ಯ-ಬೇಲೂರಿನ ಎತ್ತುಗಳು ಮೊದಲ ಬಹುಮಾನ ಪಡೆಯಿತು.
ಇದನ್ನೂ ಓದಿ:ನ್ಯೂಜಿಲೆಂಡ್ನಲ್ಲಿ RC15 ಶೂಟಿಂಗ್.. ರಾಮ್ ಚರಣ್ ಸ್ಟೈಲಿಶ್ ಲುಕ್ಗೆ ಫ್ಯಾನ್ಸ್ ಫಿದಾ
Last Updated : Nov 27, 2022, 8:04 PM IST