ಕರ್ನಾಟಕ

karnataka

ETV Bharat / entertainment

ಸಾಂಸ್ಕೃತಿಕ ನಗರಿಯಲ್ಲಿ ಹೊಯ್ಸಳ ಚಿತ್ರೀಕರಣ.. ಆ್ಯಕ್ಷನ್ ಮೂಡ್​ನಲ್ಲಿ ಡಾಲಿ - ಹೊಯ್ಸಳ ಸಿನಿಮಾದಲ್ಲಿ ಡಾಲಿ ಧನಂಜಯ್ ಬ್ಯುಸಿ

ಕೆಲವು ದಿನಗಳ ಹಿಂದೆ ಸೈಲೆಂಟ್ ಆಗಿ ಸೆಟ್ಟೇರಿದ ಹೊಯ್ಸಳ ಸಿನಿಮಾ, ಡಾಲಿ ಧನಂಜಯ್ ಅಭಿನಯಿಸುತ್ತಿರುವ 25ನೇ ಸಿನಿಮಾವಾಗಿದೆ. ಪವರ್ ಫುಲ್ ಟೈಟಲ್ ಹೊಂದಿರುವ ಡಾಲಿ ಧನಂಜಯ ಈ ಚಿತ್ರದಲ್ಲಿ ಗುರುದೇವ ಹೊಯ್ಸಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಡಾಲಿ ಧನಂಜಯ್
ಡಾಲಿ ಧನಂಜಯ್

By

Published : Jul 4, 2022, 5:53 PM IST

ಡಾಲಿ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನ ಮಾಡ್ತಾ ಇರೋ ನಟ. ಸದ್ಯ ಬೈರಾಗಿ ಸಿನಿಮಾದ ಸಕ್ಸಸ್ ಖುಷಿಯಲ್ಲಿರೋ ಧನಂಜಯ್ ಹೆಡ್ ಬುಷ್, Once upon a time in ಜಮಾಲಿಗುಡ್ಡ ಅಂತಾ ಬ್ಯುಸಿಯಾಗಿದ್ದರೂ ಹೊಯ್ಸಳ ಎಂಬ ಸಿನಿಮಾ ಮಾಡ್ತಾ ಇರೋದು ಗೊತ್ತಿರುವ ವಿಚಾರ.

ಡಾಲಿ ಧನಂಜಯ್

ಕೆಲವು ದಿನಗಳ ಹಿಂದೆ ಸೈಲೆಂಟ್ ಆಗಿ ಸೆಟ್ಟೇರಿದ ಹೊಯ್ಸಳ ಸಿನಿಮಾ, ಡಾಲಿ ಧನಂಜಯ್ ಅಭಿನಯಿಸುತ್ತಿರುವ 25ನೇ ಸಿನಿಮಾ ಆಗಿದೆ. ಪವರ್ ಫುಲ್ ಟೈಟಲ್ ಹೊಂದಿರುವ ಡಾಲಿ ಧನಂಜಯ ಈ ಚಿತ್ರದಲ್ಲಿ ಗುರುದೇವ ಹೊಯ್ಸಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಸಿನಿಮಾದ ಚಿತ್ರೀಕರಣ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶುರುವಾಗಿದೆ. ಈ ಹಿಂದೆ ಗಣೇಶ್ ಅಭಿನಯದ ಗೀತಾ ಚಿತ್ರವನ್ನ ನಿರ್ದೇಶನ ಮಾಡಿದ್ದ ವಿಜಯ್ ನಾಗೇಂದ್ರ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಸಾಹಸ ಸನ್ನಿವೇಶಗಳ ಚಿತ್ರೀಕರಣ: ನಟ ಹಾಗೂ ನಿರ್ಮಾಪಕನಾಗಿ ಸಕ್ಸಸ್ ಕಂಡಿರುವ ನಟ ಡಾಲಿ ಧನಂಜಯ್. ಸದ್ಯ ಚಿತ್ರತಂಡ ಆ್ಯಕ್ಷನ್ ಸೀಕ್ವೆನ್ಸ್ ಅನ್ನು ಚಿತ್ರೀಕರಣ ಮಾಡುತ್ತಿದ್ದು, ಸಾಹಸ ನಿರ್ದೇಶಕರಾದ ದಿಲೀಪ್ ಸುಬ್ರಹ್ಮಣ್ಯ ಹಾಗೂ ಅರ್ಜುನ್ ಮಾಸ್ಟರ್ ಸಾಹಸ ಸಂಯೋಜನೆಯಲ್ಲಿ ಸಾಹಸ ಸನ್ನಿವೇಶಗಳನ್ನ ಚಿತ್ರೀಕರಣ ಮಾಡುತ್ತಿದೆ.

ಅದ್ದೂರಿ ವೆಚ್ಚದಲ್ಲಿ ಚಿತ್ರ ನಿರ್ಮಾಣ:ಈ ಸೀಕ್ವೆನ್ಸ್​ನಲ್ಲಿ ಧನಂಜಯ್, ನಾಯಕಿ ಅಮೃತ ಅಯ್ಯಂಗಾರ್, ಅಚ್ಯುತ್ ಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಮುಂತಾದ ಕಲಾವಿದರು ಭಾಗಿಯಾಗಲಿದ್ದಾರೆ. ಈ ಚಿತ್ರಕ್ಕೆ ಮಾಸ್ತಿ ಮಂಜು ಸಂಭಾಷಣೆ ಬರೆಯುತ್ತಿದ್ದು, ವಿಶ್ವಾಸ್ ಕಶ್ಯಪ್ ಅವರು ಕಲಾ ನಿರ್ದೇಶನವಿದ್ದು, ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ. ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ಅದ್ಧೂರಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ.

ಓದಿ:ಪ್ರಜ್ವಲ್ ದೇವರಾಜ್ ಬರ್ತ್​ಡೇಗೆ 'ಮಾಫಿಯಾ' ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್

ABOUT THE AUTHOR

...view details