ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಪಿಆರ್ಕೆ ಪ್ರೊಡಕ್ಷನ್ಸ್ನಿಂದ ಸದಭಿರುಚಿಯ ಸಿನಿಮಾಗಳ ಜೊತೆಗೆ ಹೊಸ ಟ್ಯಾಲೆಂಟ್ ಇರುವ ನಿರ್ದೇಶಕರು ಹಾಗೂ ನಟ, ನಟಿಯರಿಗೆ ಅವಕಾಶ ನೀಡುತ್ತಿದೆ. ಆದರೆ ಅಪ್ಪು ನಿಧನದ ಬಳಿಕ ಪಿಆರ್ಕೆ ಬ್ಯಾನರ್ನಿಂದ ಹೊಸ ಸಿನಿಮಾ ಅನೌನ್ಸ್ ಮಾಡಿ, ಸೈಲೆಂಟ್ ಆಗಿ ಮುಹೂರ್ತ ಕೂಡ ಮಾಡಲಾಗಿದೆ.
ಇದು ಪುನೀತ್ ರಾಜ್‍ಕುಮಾರ್ ಬ್ಯಾನರ್ 10ನೇ ಸಿನಿಮಾ ಆಗಿದ್ದು, ಈ ಚಿತ್ರಕ್ಕೆ 'ಆಚಾರ್ & ಕೋ' ಎಂದು ವಿಭಿನ್ನ ಟೈಟಲ್ ಇಡಲಾಗಿದೆ. ಇದೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿ, ಸಿಂಧು ಶ್ರೀನಿವಾಸ ಮೂರ್ತಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು 60ರ ದಶಕದ ಬೆಂಗಳೂರಿನಲ್ಲಿ ನಡೆಯುವ ಕಥೆಯಾಗಿದೆ. ಸೈಲೆಂಟ್ ಆಗಿ ಈ ಸಿನಿಮಾಗೆ ಮುಹೂರ್ತ ಮಾಡಿ, ಈಗಾಗಲೇ ಮೈಸೂರಿನಲ್ಲಿ ಬಹುತೇಕ ಚಿತ್ರೀಕರಣ ಮಾಡುವ ಮೂಲಕ, ಆಚಾರ್ & ಕೋ ಚಿತ್ರದ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿದೆ.
ಹಿರಿಯ ನಟ ಅಶೋಕ್ ಹಾಗೂ ಸುಧಾ ಬೆಳವಾಡಿ ಹೊರತುಪಡಿಸಿ, ಉಳಿದ ಹೊಸ ಪ್ರತಿಭೆಗಳು, ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮೈಸೂರಿನಲ್ಲಿ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ಶೂಟಿಂಗ್ ಸ್ಪಾಟ್ಗೆ ಭೇಟಿ ನೀಡಿ ಚಿತ್ರತಂಡದ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ಕಳೆದಿದ್ದಾರೆ.