'ಮಂಡ್ಯದ ಗಂಡು' ಎಂದೇ ಖ್ಯಾತರಾಗಿದ್ದ ದಿವಂಗತ ನಟ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಇಂದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ನಡೆಯಿತು. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರಿಗೆ ಅಭಿಷೇಕ್ ಉಂಗುರ ತೊಡಿಸಿದರು.
ನಟ ಅಭಿಷೇಕ್ ಅಂಬರೀಶ್-ಅವಿವಾ ಬಿದ್ದಪ್ಪ ನಿಶ್ಚಿತಾರ್ಥ-ವಿಡಿಯೋ - ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ
ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ನಟ ಅಭಿಷೇಕ್ ಅಂಬರೀಶ್ ಮತ್ತು ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಇಂದು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಅಭಿಷೇಕ್ ಅಂಬರೀಶ್ - ಅವಿವಾ ಬಿದ್ದಪ್ಪ ನಿಶ್ಚಿತಾರ್ಥ
ಬೆಳಗ್ಗೆ 9.30ಕ್ಕೆ ಎರಡು ಕುಟುಂಬಗಳ ಸಮ್ಮುಖದಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ನಿಶ್ಚಿತಾರ್ಥದಲ್ಲಿ ಕುಟುಂಬಸ್ಥರು, ಆಪ್ತರಿಷ್ಠರು ಮಾತ್ರ ಭಾಗಿಯಾಗಿದ್ದರು. ಸಂಕ್ರಾಂತಿ ಹಬ್ಬದ ನಂತರ 'ಅಭಿ-ಅವಿವಾ' ಮದುವೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ನಾಲ್ಕು ವರ್ಷಗಳಿಂದ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಮಾಡೆಲ್ ಅವಿವಾ ಪ್ರೀತಿಗೆ ಮನಸೋತ ಅಭಿಷೇಕ್ ಅಂಬರೀಶ್.. ನಿಶ್ಚಿತಾರ್ಥದ ಬಗ್ಗೆ ಹೇಳಿದ್ದೇನು?
Last Updated : Dec 11, 2022, 2:52 PM IST