ಕರ್ನಾಟಕ

karnataka

ETV Bharat / entertainment

ಅಪ್ಪನ ಚಿತ್ರದ ಹಾಡುಗಳಿಗೆ ಭಾವಿ ಪತ್ನಿ ಅವಿವಾ ಜೊತೆ ಅಭಿಷೇಕ್ ಮಸ್ತ್ ಡ್ಯಾನ್ಸ್: ವಿಶೇಷ ವಿಡಿಯೋ - Abhishek dance with future wife Aviva

ರೆಬೆಲ್​ಸ್ಟಾರ್ ಅಂಬರೀಶ್ ಹುಟ್ಟುಹಬ್ಬ ಹಿನ್ನೆಲೆ ಪುತ್ರ ಅಭಿಷೇಕ್‌ ಅಂಬರೀಶ್‌ ವಿಶೇಷ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಭಾವಿ ಪತ್ನಿ ಅವಿವಾ ಜೊತೆ ಹೆಜ್ಜೆ ಹಾಕಿರುವ ವಿಡಿಯೋ ಇದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಭಾವಿ ಪತ್ನಿ ಅವಿವಾ ಜೊತೆ ಅಭಿಷೇಕ್ ಮಸ್ತ್ ಡ್ಯಾನ್ಸ್
ಭಾವಿ ಪತ್ನಿ ಅವಿವಾ ಜೊತೆ ಅಭಿಷೇಕ್ ಮಸ್ತ್ ಡ್ಯಾನ್ಸ್

By

Published : May 29, 2023, 2:43 PM IST

Updated : May 29, 2023, 2:53 PM IST

ಅಭಿಷೇಕ್‌ ಅಂಬರೀಶ್‌ ವಿಶೇಷ ವಿಡಿಯೋ

ಕನ್ನಡ ಚಿತ್ರರಂಗದ ಕಲಿಯುಗ ಕರ್ಣ, ರೆಬೆಲ್​ಸ್ಟಾರ್ ಅಂಬರೀಶ್ ಅವರ 71ನೇ ಹುಟ್ಟುಹಬ್ಬ. ಅವರ ಹುಟ್ಟುಹಬ್ಬವನ್ನು ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಅವರ ಅಭಿಮಾನಿಗಳು ತರಹೇವಾರಿ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಶಯ ಕೋರುತ್ತಿದ್ದಾರೆ.

ಅದೇ ರೀತಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸ್ಮಾರಕದತ್ತ ಆಗಮಿಸಿದ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ರಾಕ್​​​ಲೈನ್ ವೆಂಕಟೇಶ್ ಅವರು ಅಂಬಿ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

ಭಾವಿ ಪತ್ನಿ ಅವಿವಾ ಜೊತೆ ಅಭಿಷೇಕ್ ಮಸ್ತ್ ಡ್ಯಾನ್ಸ್

ಈ ವಿಶೇಷ ದಿನದಂದು ಅಭಿಷೇಕ್‌ ಅಂಬರೀಶ್‌ ವಿಶೇಷ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅಭಿಷೇಕ್ ಮತ್ತು ಭಾವಿ ಪತ್ನಿ ಅವಿವಾ ಬಿದ್ದಪ್ಪ, ಅಂಬರೀಶ್​ ಅವರ ಹಲವು ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಫುಲ್ ರೆಟ್ರೋ ಸ್ಟೈಲ್​ನಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಹೆಜ್ಜೆ ಹಾಕಿರುವ ಹಾಡು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗುತ್ತಿದೆ. ಈ ಸಂಭ್ರಮಕ್ಕೆ ಕೆಆರ್‌ಜಿ ಕನೆಕ್ಟ್ಸ್ ಜೊತೆಯಾಗಿ ಕೈಜೋಡಿಸಿದೆ. ಈ ವಿಡಿಯೋದಲ್ಲಿ ಅಭಿಷೇಕ್ ಮತ್ತು ಅವೀವಾ, ಅಂಬರೀಶ್​ ಅವರ ಹಲವು ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.

‘ಒಲವಿನ ಉಡುಗೊರೆ’, ಚಕ್ರವ್ಯೂಹ’, ‘ಮಂಡ್ಯದ ಗಂಡು' ಸೇರಿದಂತೆ ಮುಂತಾದ ಚಿತ್ರಗಳ ಜನಪ್ರಿಯ ಹಾಡುಗಳಿಗೆ ಇಬ್ಬರು ಜೊತೆ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಕೆಲವೇ ನಿಮಿಷಗಳಲ್ಲಿ ನೆಟಿಜನ್​ಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಭಾವಿ ಪತ್ನಿ ಅವಿವಾ ಜೊತೆ ಅಭಿಷೇಕ್ ಮಸ್ತ್ ಡ್ಯಾನ್ಸ್

ಇದೇ ಜೂನ್ 5ರಂದು ಅಭಿಷೇಕ್ ಅವರು ಪ್ರಸಾದ್ ಬಿದ್ದಪ್ಪ ಪುತ್ರಿಯಾಗಿರುವ ಅವಿವಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾಹಿತಿ ಇದೆ. ಇವರಿಬ್ಬರ ಮದುವೆಗೆ ಭರ್ಜರಿಯಾಗಿ ಸಿದ್ಧತೆಗಳು ಆರಂಭ ಆಗಿದ್ದು ಚಿತ್ರರಂಗದ ನಟ-ನಟಿಯರು ಸೇರಿದಂತೆ ರಾಜಕೀಯರ ಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಅವರ ಮದುವೆಯ ಆಮಂತ್ರಣ ಪತ್ರಿಕೆ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಶೇಷ ಅತಿಥಿಗಳಿಗಾಗಿ ಸಿದ್ಧಪಡಿಸಲಾದ ವಿಶೇಷ ಆಮಂತ್ರಣ ಪತ್ರಿಕೆ ಇದಾಗಿದ್ದು, ಇತ್ತೀಚೆಗೆ ಸಂಸದೆ ಸುಮಲತಾ ಮತ್ತು ಅಭಿಷೇಕ್​ ಇದೇ ಲಗ್ನ ಪತ್ರಿಕೆಯನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೊಟ್ಟು ಮದುವೆಗೆ ಆಹ್ವಾನಿಸಿದ್ದರು. ಇದೀಗ ಈ ವಿಶೇಷ ಆಮಂತ್ರಣ ಪತ್ರಿಕೆಯಲ್ಲಿ ಏನೇನಿದೆ ಎಂದು ಕೂಡ ದೃಶ್ಯದ ಮೂಲಕ ವೈರಲ್​ ಆಗಿದೆ.

ಭಾವಿ ಪತ್ನಿ ಅವಿವಾ ಜೊತೆ ಅಭಿಷೇಕ್ ಮಸ್ತ್ ಡ್ಯಾನ್ಸ್

ಇನ್ನು ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ಮುಗಿದಿದ್ದು ಶೀಘ್ರದಲ್ಲೆ ತೆರೆ ಕಾಣಲಿದೆ. 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ಅಭಿಷೇಕ್​ಗೆ ರಚಿತಾ ರಾಮ್ ಮತ್ತು ಪ್ರಿಯಾಂಕಾ ನಾಯಕಿಯರಾಗಿ ನಟಿಸಿದ್ದು, ದುನಿಯಾ ಸೂರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದರ ನಡುವೆ ಅವರು 'ಕಾಳಿ' ಎಂಬ ಚಿತ್ರಕ್ಕೂ ಒಪ್ಪಿಗೆ ಸೂಚಿಸಿದ್ದಾರೆ. ಈ ಚಿತ್ರವನ್ನು 'ಮುಂಗಾರು ಮಳೆ' ಖ್ಯಾತಿಯ ಕೃಷ್ಣ ನಿರ್ದೇಶನ ಮಾಡಲಿದ್ದಾರೆ. ಇದಾದ ಬಳಿಕ ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಹಾಗೂ ಮಹೇಶ್ ಕುಮಾರ್ ನಿರ್ದೇಶನದ ಮತ್ತೊಂದು ಸಿನಿಮಾ ಕೂಡ ಸೆಟ್ಟೇರಬೇಕಿದೆ.

ಇದನ್ನೂ ಓದಿ: 'ಮಂಡ್ಯದ ಗಂಡಿ'ಗೆ 71ನೇ ಹುಟ್ಟುಹಬ್ಬ: ರೆಬೆಲ್ ಸ್ಟಾರ್ ಕುರಿತು 10 ಸ್ವಾರಸ್ಯಕರ ಸಂಗತಿ!

Last Updated : May 29, 2023, 2:53 PM IST

ABOUT THE AUTHOR

...view details