ಕರ್ನಾಟಕ

karnataka

ETV Bharat / entertainment

ಹ್ಯಾಪಿ ಬರ್ತ್​ಡೇ ರಚಿತಾ ರಾಮ್, ಅಭಿಷೇಕ್ ಅಂಬರೀಶ್: ಫ್ಯಾನ್ಸ್​ ಜೊತೆ ಕೇಕ್ ಕತ್ತರಿಸಿದ ಯಂಗ್​ ರೆಬೆಲ್ - ಬ್ಯಾಡ್ ​ಮ್ಯಾನರ್ಸ್ ಸಿನಿಮಾ

ಸ್ಯಾಂಡಲ್​ವುಡ್ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಈ ಇಬ್ಬರಿಗೂ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

abhishek bmbareesh and rachita ram
ರಚಿತಾ ರಾಮ್, ಅಭಿಷೇಕ್ ಅಂಬರೀಶ್

By

Published : Oct 3, 2022, 10:51 AM IST

ಅಮರ್ ಸಿನಿಮಾ‌ದಿಂದ‌ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಯಂಗ್​ ರೆಬೆಲ್​ ಸ್ಟಾರ್​ ಅಭಿಷೇಕ್​ ಅಂಬರೀಶ್​​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 29ನೇ ಜನ್ಮ ದಿನಾಚರಣೆ ಸಂಭ್ರಮದಲ್ಲಿರೋ ಅಭಿಷೇಕ್, ಜೆ.ಪಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಬರ್ತ್​ಡೇ ಆಚರಿಸಿಕೊಂಡರು.

ಅಮರ್ ಸಿನಿಮಾ ಸೋಲಿನ ನಂತರ ಕಥೆ ಹಾಗೂ ನಿರ್ದೇಶಕರ ಆಯ್ಕೆಯಲ್ಲಿ ಸಾಕಷ್ಟು ಎಚ್ಚರಿಕೆ ವಹಿಸುತ್ತಿರುವ ಅಭಿಷೇಕ್​, ಸದ್ಯಕ್ಕೆ ನಿರ್ದೇಶಕ ಸುಕ್ಕಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ‌ ಬ್ಯಾಡ್ ​ಮ್ಯಾನರ್ಸ್ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಬ್ಯಾಡ್​ಮ್ಯಾನರ್ಸ್ ಚಿತ್ರತಂಡ, ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿ ಬರ್ತ್​ಡೇ ಗೆ ಉಡುಗೊರೆ ನೀಡಿದೆ.

ಇದನ್ನೂ ಓದಿ:ಜೂ. ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಅಡ್ಡದಲ್ಲಿ ಟಗರು ಶಿವ!

ಇದೊಂದು ರೊಮ್ಯಾಂಟಿಕ್​ ಲವ್​ ಸ್ಟೋರಿ ಚಿತ್ರವಾಗಿದ್ದು, ಅಭಿಷೇಕ್ ಅಂಬರೀಶ್ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ನಿರ್ದೇಶಕ ಕೃಷ್ಣ ಹಾಗೂ ಮದಗಜ ಸಿನಿಮಾ ನಿರ್ದೇಶಕ ಮಹೇಶ್ ಕುಮಾರ್ ಜೊತೆ ಹೆಸರಿಡದ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸುತ್ತಿದ್ದಾರೆ‌.

ಡಿಂಪಲ್ ಕ್ವೀನ್ ಬರ್ತ್​ಡೇ:ಸ್ಯಾಂಡಲ್​ವುಡ್​ನ ಡಿಂಪಲ್ ಕ್ವೀನ್ ಬಿಂದಿಯಾ ರಾಮ್ ಅಲಿಯಾಸ್ ರಚಿತಾ ರಾಮ್​ಗೆ ಸಹ ಇಂದು ಹುಟ್ಟುಹಬ್ಬ ಸಂಭ್ರಮ. 03 ಅಕ್ಟೋಬರ್ 1992 ರಲ್ಲಿ ಜನಿಸಿದ ರಚಿತಾ ರಾಮ್ ಈಗ ಸ್ಯಾಂಡಲ್​​ವುಡ್​​ನ ಬಹುಬೇಡಿಕೆಯ ನಟಿ. 'ಅರಸಿ' ಧಾರಾವಾಹಿ ಮೂಲಕ ಹೆಸರು ಗಳಿಸಿದ ರಚ್ಚು, ದರ್ಶನ್ ಜೊತೆ 'ಬುಲ್​ ಬುಲ್​​' ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಸದ್ಯಕ್ಕೆ ರಚಿತಾ ಕೈಯಲ್ಲಿ ಈಗ ಸಾಲು ಸಾಲು ಚಿತ್ರಗಳಿದ್ದು, ಸಖತ್ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ:ನೋಡೋಣ ಬನ್ನಿ 'ಬುಲ್​ ಬುಲ್'​​ ಹುಡುಗಿ ನಡೆದು ಬಂದ ದಾರಿ

ABOUT THE AUTHOR

...view details