ಕರ್ನಾಟಕ

karnataka

ETV Bharat / entertainment

ಹುಟ್ಟುಹಬ್ಬದ ಸಂಭ್ರಮದಲ್ಲಿ ಜಯಾ ಬಚ್ಚನ್: ಅಮ್ಮನಿಗೆ ವಿಶೇಷವಾಗಿ ಶುಭಾಶಯ ಕೋರಿದ ಪುತ್ರ ಅಭಿಷೇಕ್ - ಅಭಿಷೇಕ್ ಬಚ್ಚನ್

ತಾಯಿ ಜಯಾ ಬಚ್ಚನ್ ಜನ್ಮದಿನಕ್ಕೆ ಪುತ್ರ ಅಭಿಷೇಕ್ ಬಚ್ಚನ್ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

Jaya Bachchan birthday
ಜಯಾ ಬಚ್ಚನ್ ಜನ್ಮದಿನ

By

Published : Apr 9, 2023, 2:17 PM IST

ನಟಿ, ರಾಜಕಾರಣಿ, ಭಾರತದ ಹೆಸರಾಂತ ಬಚ್ಚನ್​ ಕುಟುಂಬದ ಸದಸ್ಯೆ ಜಯಾ ಬಚ್ಚನ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 75ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಿಸೆಸ್​ ಬಚ್ಚನ್​ ಅವರಿಗೆ ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಯಾ ಬಚ್ಚನ್ ಅವರಿಗೆ ಶುಭಾಶಗಳ ಮಹಾಪೂರ ಹರಿದುಬಂದಿದೆ.

ನಟ, ಪುತ್ರ ಅಭಿಷೇಕ್ ಬಚ್ಚನ್ ಸಹ ಶುಭಾಶಯ ತಿಳಿಸುವುದರಿಂದ ತಪ್ಪಿಸಿಕೊಂಡಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ತಾಯಿಗೆ ವಿಶೇಷವಾಗಿ ಶುಭ ಕೋರಿದ್ದಾರೆ. ಜೂನಿಯರ್ ಬಚ್ಚನ್ ತಮ್ಮ ಚೊಚ್ಚಲ ಚಿತ್ರ ರೆಫ್ಯೂಜಿ (Refugee)ಯ ಕಾರ್ಯಕ್ರಮವೊಂದರಲ್ಲಿ ಕ್ಲಿಕ್ಕಿಸಿದ್ದ ತಮ್ಮ ತಾಯಿಯೊಂದಿಗಿನ ಹಳೇ ಚಿತ್ರವನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳು ಈ ಫೋಟೋ ಮೆಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇನ್​​​ಸ್ಟಾಗ್ರಾಮ್​ನಲ್ಲಿ ಈ ಫೋಟೋ ಹಂಚಿಕೊಂಡಿರುವ ಅಭಿಷೇಕ್ ಬಚ್ಚನ್​, "ಇದು ಅತ್ಯುತ್ತಮ ಫೋಟೋ ಅಲ್ಲ ಎಂದು ನನಗೆ ಗೊತ್ತು. ಆದರೆ ಈ ಚಿತ್ರದಲ್ಲಿನ ಭಾವನೆಗಳು ಸ್ಪಷ್ಟವಾಗಿದೆ, ಸದ್ದು ಮಾಡುತ್ತಿದೆ. ಮಗನ ಮೊದಲ ಮತ್ತು ಶಾಶ್ವತ ಪ್ರೀತಿ ಅಮ್ಮಾ! ಜನ್ಮದಿನದ ಶುಭಾಶಯಗಳು. ನಾನು ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ನಟ ಹಂಚಿಕೊಂಡ ತಮ್ಮ ತಾಯಿಯೊಂದಿಗಿನ ಚಿತ್ರದ ಬಗ್ಗೆ ಮಾತನಾಡುತ್ತ, ಇದು ರೆಫ್ಯೂಜಿಯ ಸಂಗೀತ ಬಿಡುಗಡೆಯ ಸಮಯದಲ್ಲಿ ಸೆರೆ ಹಿಡಿಯಲಾದ ಕ್ಷಣ ಎಂದು ಬಹಿರಂಗಪಡಿಸಿದರು. ನಟನಾಗಿ ತಮ್ಮ ಮೊದಲ ಚಲನಚಿತ್ರದ ಸಮಾರಂಭದಲ್ಲಿ ಕ್ಲಿಕ್ಕಿಸಲಾದ ಈ ಚಿತ್ರವು ತಮ್ಮ ಹೃದಯಕ್ಕೆ ಹತ್ತಿರವಾಗಿದೆ. ಫೋಟೋ ಬ್ಲರ್​ ಇದ್ದರೂ ಭಾವನೆಗಳು ಸದ್ದು ಮಾಡಿದೆ ಎಂದು ನಟ ಹೇಳಿದರು.

ಜಯಾ ಬಚ್ಚನ್​​ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಅಜ್ಜಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಜಯಾ ಅವರೊಂದಿಗಿನ ಚಿತ್ರ ಹಂಚಿಕೊಂಡ ನವ್ಯಾ, "ಹುಟ್ಟುಹಬ್ಬದ ಶುಭಾಶಯಗಳು ನಾನಿ. ನಿಜವಾದ ಶಕ್ತಿ. ನಾನು ನಿಮ್ಮನ್ನು ಪ್ರೀತಿಸುತ್ತೇನೆ'' ಎಂದು ಬರೆದಿದ್ದಾರೆ.

ಇದನ್ನೂ ಓದಿ:ವೀಕೆಂಡ್​ ವಿತ್​ ರಮೇಶ್..​​ ಸಾಧಕರ ಸೀಟ್​ಗೆ ಮತ್ತಷ್ಟು ಮೆರುಗು ತಂದುಕೊಟ್ಟ ಡಾ. ಮಂಜುನಾಥ್​

ಕರೀನಾ ಕಪೂರ್ ಮತ್ತು ಅರ್ಜುನ್ ಕಪೂರ್ ಅಭಿನಯದ ಕಿ & ಕಾ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಜಯಾ ಬಚ್ಚನ್ ಮುಂದೆ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಲಿಯಾ ಭಟ್ ಮತ್ತು ರಣ್​​ವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಜುಲೈ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಬಾಕ್ಸ್​ ಆಫೀಸ್​ನಲ್ಲಿ ಓಟ ಮುಂದುವರಿಸಿದ 'ಭೋಲಾ'.. ಯಶಸ್ಸಿನಲೆಯಲ್ಲಿ ಅಜಯ್ ದೇವ್​​ಗನ್ ತಂಡ

ಅಮಿತಾಭ್​ ಬಚ್ಚನ್​​ ಹಿಂದಿ ಚಿತ್ರರಂಗದ ಜನಪ್ರಿಯ ನಟ. 80ರ ಈ ವಯಸ್ಸಿನಲ್ಲೂ ಸಿನಿ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಜಯಾ ಕೂಡ ಬಾಲಿವುಡ್​ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 1973ರಲ್ಲಿ ಇವರಿಬ್ಬರು ದಾಂಪತ್ಯ ಜೀವನ ಆರಂಭಿಸಿರುವ ಇವರಿಗೆ ಇಬ್ಬರು ಮಕ್ಕಳು, ಮೊಮ್ಮಕ್ಕಳು ಇದ್ದಾರೆ. ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್​​ ಕುಟುಂಬದ ಸೊಸೆ. ಅಭಿಮಾನ್, ಚುಪ್ಕೆ ಚುಪ್ಕೆ, ಮಿಲಿ ಮತ್ತು ಶೋಲೆಯಂತಹ ಚಿತ್ರಗಳಲ್ಲಿ ಅಮಿತಾಭ್​​ ಮತ್ತು ಜಯಾ ತೆರೆ ಹಂಚಿಕೊಂಡಿದ್ದರು. ಪ್ಯಾನ್​ ಇಂಡಿಯಾ ಸಿನಿಮಾ 'ಪ್ರೊಜೆಕ್ಟ್​ ಕೆ' ಅಮಿತಾಭ್ ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ.

ABOUT THE AUTHOR

...view details