ಕರ್ನಾಟಕ

karnataka

ETV Bharat / entertainment

ಲೇಖಕಿ ತಸ್ಲೀಮಾ ನಸ್ರೀನ್‌ಗೆ ಟ್ವೀಟ್‌ ಮೂಲಕವೇ ಖಡಕ್‌ ಉತ್ತರ ಕೊಟ್ಟ ಅಭಿಷೇಕ್ ಬಚ್ಚನ್‌! - ಲೇಖಕಿ ತಸ್ಲೀಮಾ ನಸ್ರೀನ್

ಲೇಖಕಿ ತಸ್ಲೀಮಾ ನಸ್ರೀನ್ ಅವರ ಟ್ವೀಟ್‌ವೊಂದಕ್ಕೆ ನಟ ಅಭಿಷೇಕ್ ಬಚ್ಚನ್ ಖಡಕ್‌ ಆಗಿ ಪ್ರತಿಕ್ರಿಯಿಸಿದ್ದಾರೆ.

Abhishek amitabh
ಅಭಿಷೇಕ್ ಅಮಿತಾಭ್

By

Published : Dec 23, 2022, 5:08 PM IST

ಬಾಲಿವುಡ್​ ಹಿರಿಯ ನಟ ಅಮಿತಾಭ್ ಬಚ್ಚನ್ ತಮ್ಮ ಪುತ್ರನನ್ನು ಎಷ್ಟು ಪ್ರೀತಿಸುತ್ತಾರೆ ಎಂಬ ಬಾಂಗ್ಲಾದೇಶಿ-ಸ್ವೀಡಿಷ್ ಲೇಖಕಿ ತಸ್ಲೀಮಾ ನಸ್ರೀನ್ ಅವರ ಟ್ವೀಟ್​​ಗೆ ಈಗ ನಟ ಅಭಿಷೇಕ್ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ. ತನ್ನ ಚಾಣಾಕ್ಷತನದಿಂದ ಟ್ರೋಲಿಗರನ್ನು ಮೌನಗೊಳಿಸುವಲ್ಲಿ ಹೆಸರುವಾಸಿಯಾಗಿರುವ ಅಭಿಷೇಕ್ ಈಗ ನಸ್ರೀನ್‌ ಹೇಳಿಕೆಗೆ ಗರಂ ಆಗಿ ಪ್ರತಿಕ್ರಿಯಿಸಲು ಟ್ವಿಟ್ಟರ್‌ ಬಳಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಕಾಮೆಂಟ್‌ಗಳ ವಿಭಾಗದಲ್ಲಿ ನಸ್ರೀನ್‌ ಟ್ವೀಟ್​​ಗೆ ಪ್ರತಿಕ್ರಿಯಿಸಿರುವ ಅಭಿಷೇಕ್, 'ಖಂಡಿತವಾಗಿಯೂ ನಿಮ್ಮ ಮಾತು ಸರಿಯಾಗಿದೆ ಮೇಡಮ್. ಪ್ರತಿಭೆ ಅಥವಾ ಬೇರೆ ಯಾವ ವಿಷಯದಲ್ಲಾಗಲಿ ಅವರ ಹತ್ತಿರ ಯಾರೂ ಬರಲು ಸಾಧ್ಯವಿಲ್ಲ. ಅವರು ಯಾವಾಗಲೂ ಅತ್ಯುತ್ತಮವಾಗಿಯೇ ಉಳಿಯುತ್ತಾರೆ. ನಾನು ಅತ್ಯಂತ ಹೆಮ್ಮೆಯ ಪುತ್ರ' ಎಂದು ಹೇಳಿದ್ದಾರೆ.

'ಅಮಿತಾಭ್ ಬಚ್ಚನ್‌ಜೀ ತಮ್ಮ ಮಗ ಅಭಿಷೇಕ್ ಬಚ್ಚನ್ ಅವರನ್ನು ತುಂಬಾ ಪ್ರೀತಿಸುತ್ತಾರೆ. ಅವರ ಮಗ ತನ್ನ ಎಲ್ಲಾ ಪ್ರತಿಭೆಯನ್ನು ಪಡೆದಿದ್ದಾನೆ ಮತ್ತು ಅತ್ಯುತ್ತಮ ಎಂದು ಅವರು ಭಾವಿಸುತ್ತಾರೆ. ಅಭಿಷೇಕ್ ಒಳ್ಳೆಯವರು, ಆದರೆ ಅಭಿಷೇಕ್ ಅಮಿತಾಭ್​​ ಅವರಷ್ಟು ಪ್ರತಿಭಾವಂತ ಎಂದು ನಾನು ಭಾವಿಸುವುದಿಲ್ಲ' ಎಂದು ತಸ್ಲೀಮಾ ನಸ್ರೀನ್ ಈ ಹಿಂದೆ ಟ್ವೀಟ್ ಮಾಡಿದ್ದರು.

ದಾಸ್ವಿ ಚಿತ್ರದಲ್ಲಿನ ಅಭಿನಯಕ್ಕಾಗಿ 2022ರ ಫಿಲ್ಮ್‌ಫೇರ್ ಒಟಿಟಿ ಅವಾರ್ಡ್ಸ್‌ನಲ್ಲಿ ವೆಬ್ ಮೂಲ ಚಲನಚಿತ್ರ-ಪುರುಷ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಕ್ಕಾಗಿ ಅಮಿತಾಭ್​​ ಬಚ್ಚನ್ ಅವರ ಮಗನನ್ನು ಹೊಗಳಿದ್ದ ಬೆನ್ನಲ್ಲೇ ನಸ್ರೀನ್ ಈ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ:ಸಂಸತ್​ ಸದಸ್ಯರಿಗಾಗಿ ಪ್ಯಾನ್ ಇಂಡಿಯಾ ಸಿನಿಮಾ 'ಖುದಿರಾಮ್ ಬೋಸ್' ಪ್ರದರ್ಶನ

'ನನ್ನ ಹೆಮ್ಮೆ, ನನ್ನ ಸಂತೋಷ, ನೀವು ನಿಮ್ಮ ವಿಷಯವನ್ನು, ಪ್ರತಿಭೆಯನ್ನು ಸಾಬೀತು ಪಡಿಸಿದ್ದೀರಿ. ನಿಮ್ಮನ್ನು ಅಪಹಾಸ್ಯ ಮಾಡಲಾಯಿತು. ಆದರೆ ನೀವು ಯಾವುದೇ ಸದ್ದಿಲ್ಲದೇ ಮೌನವಾಗಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದೀರಿ. ನೀವು ಇಂದು ಮತ್ತು ಎಂದೆಂದಿಗೂ ಅತ್ಯುತ್ತಮ' ಎಂದು ಅಮಿತಾಭ್​​ ಬಚ್ಚನ್ ತಮ್ಮ ಪುತ್ರ ಅಭಿಷೇಕ್‌ ಬಗ್ಗೆ ಮೆಚ್ಚುಗೆಯ ಟ್ವೀಟ್​ ಮಾಡಿದ್ದರು.

ABOUT THE AUTHOR

...view details