ಕರ್ನಾಟಕ

karnataka

ETV Bharat / entertainment

'ಘೂಮರ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ - ನಟ ಅಭಿಷೇಕ್ ಬಚ್ಚನ್

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಸೈಯಾಮಿ ಖೇರ್ ಅಭಿನಯದ 'ಘೂಮರ್' ಸಿನಿಮಾದ ಫಸ್ಟ್ ಲುಕ್ ಅನಾವರಣಗೊಂಡಿದ್ದು, ಸಾಕಷ್ಟು ಕುತೂಹಲ ಮೂಡಿಸುವಂತಿದೆ.

ಘೂಮರ್' ಚಿತ್ರದ  ಫಸ್ಟ್ ಲುಕ್ ಬಿಡುಗಡೆ
ಘೂಮರ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ

By

Published : Jun 16, 2022, 10:11 AM IST

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರ ಮುಂಬರುವ ಚಿತ್ರ 'ಘೂಮರ್' ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಕಾತರದಿಂದ ಕಾಯುತ್ತಿದ್ದಾರೆ. ಈ ಬೆನ್ನಲ್ಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ನಟಿ ಸೈಯಾಮಿ ಖೇರ್ ಬುಧವಾರ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ 'ಘೂಮರ್' ಸಿನಿಮಾದ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ.

ಪೋಸ್ಟರ್ ಹಂಚಿಕೊಂಡ ಸೈಯಾಮಿ ಸಿನಿಮಾ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ನಾನು ನಿರ್ವಹಿಸಿದ ಅತ್ಯಂತ ಸವಾಲಿನ ಪಾತ್ರಗಳಲ್ಲಿ ಒಂದು, ನಾನು ಒಳ್ಳೆಯ ವ್ಯಕ್ತಿಗಳೊಂದಿಗೆ ಸೇರಿ ಸಿನಿಮಾ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಂತಹ ಉತ್ತಮ ಪಾತ್ರಗಳನ್ನು ಮಾಡುವುದನ್ನು ಮುಂದುವರಿಸುತ್ತೇನೆ. ಜನ ನನ್ನ ನಟನೆಯನ್ನ ಇಷ್ಟಪಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪೋಸ್ಟರ್​ ನೋಡಿದ ಅಭಿಮಾನಿಗಳು ಸಹ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

ಘೂಮರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ

'ಘೂಮರ್'ನಲ್ಲಿ ಸೈಯಾಮಿ ಕ್ರಿಕೆಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಕೋಚ್ ಪಾತ್ರ ನಿರ್ವಹಿಸಿದ್ದು, ಶಬಾನಾ ಅಜ್ಮಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ತ್ರಿಪ್ತಿ ಡಿಮ್ರಿ ಜೊತೆ ನಟ ವಿಕ್ಕಿ ಕೌಶಲ್ ರೊಮ್ಯಾನ್ಸ್; ಜಾಲತಾಣದಲ್ಲಿ ವೈರಲ್​ ಆದ ಫೋಟೋಗಳು

ABOUT THE AUTHOR

...view details