ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಸಿನಿಮಾ ಜೊತೆ ವೈಯಕ್ತಿಕ ವಿಚಾರಗಳಲ್ಲೂ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಅವರ ಮದುವೆ ವಿಷಯಾನೇ ಟಾಕ್ ಆಫ್ ದಿ ನ್ಯೂಸ್ ಆಗಿಬಿಟ್ಟಿದೆ. ಇದೀಗ ಅಭಿಷೇಕ್ ತಮ್ಮ ಐಷಾರಾಮಿ ಕಾರು ಬಿಟ್ಟು ಮೆಟ್ರೋ ಹತ್ತಿದ್ದಾರೆ.
ಸಿಲ್ಕ್ ಇನ್ಸ್ಟಿಟ್ಯೂಟ್ನಿಂದ ಸಾರಕ್ಕಿ ಜೆ.ಪಿ ನಗರದವರೆಗೆ ಮೆಟ್ರೊದಲ್ಲಿ ಸಾಮಾನ್ಯ ಜನರಂತೆ ಟ್ರಾವೆಲ್ ಮಾಡಿದ್ದಾರೆ. ಯಾವಾಗಲೂ ತಮ್ಮ ಕಾರಿನಲ್ಲೇ ಓಡಾಡುತ್ತಿದ್ದ ರೆಬಲ್ ಸ್ಟಾರ್ ಸುಪುತ್ರ ಮೊದಲ ಬಾರಿಗೆ ಮೆಟ್ರೋ ಹತ್ತಿ ಪ್ರಯಾಣವನ್ನು ಎಂಜಾಯ್ ಮಾಡಿದ್ದಾರೆ. ತಮ್ಮ ತಂದೆಯಂತೆ ಅಭಿಮಾನಿಗಳ ಜೊತೆಯೇ ಹೆಚ್ಚು ಕಾಲ ಕಳೆಯೋದಕ್ಕೆ ಅಭಿ ಇಷ್ಟಪಡ್ತಾರಂತೆ. ಇವರ ಪಯಣಕ್ಕೆ ನಿರ್ದೇಶಕ ಮಹೇಶ್ ಕುಮಾರ್ ಸಾಥ್ ಕೊಟ್ಟಿದ್ದಾರೆ.