ಕನ್ನಡ ಚಿತ್ರರಂಗದಲ್ಲಿ ಬಿಚ್ಚುಗತ್ತಿ ಸಿನಿಮಾ ಮೂಲಕ ಬೇಡಿಕೆ ಹೊಂದಿರುವ ನಟ ರಾಜವರ್ಧನ್. ಈ ಸಿನಿಮಾ ಯಶಸ್ಸಿನ ಬಳಿಕ ರಾಜವರ್ಧನ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಯಕ ನಟನಾಗಿ ಅಭಿನಯಿಸುತ್ತಿರುವ ಪ್ರಣಯಂ, ಹಿರಣ್ಯ ಸಿನಿಮಾ ಬಿಡುಗಡೆಗೆ ಮೊದಲೇ ಮಾಸ್ ಸಬ್ಜೆಕ್ಟ್ ಸಿನಿಮಾವೊಂದು ರಾಜವರ್ಧನ್ ಬತ್ತಳಿಕೆ ಸೇರಿದೆ. ಅದುವೇ ಗಜರಾಮ ಸಿನಿಮಾ. ಫಸ್ಟ್ ಲುಕ್ ಪೋಸ್ಟರ್ ಮೂಲಕ ಕಿಕ್ ಕೊಟ್ಟ ಈ ಚಿತ್ರದ ಮುಹೂರ್ತ ಇಂದು ನೆರವೇರಿದೆ.
ನಿರ್ದೇಶಕ ಸುನೀಲ್ ಕುಮಾರ್ ವಿ.ಎ ಹೆಣೆದ ಕಥೆ ಕೇಳಿ ಇಂಪ್ರೆಸ್ ಆಗಿರುವ ರಾಜವರ್ಧನ್ 'ಗಜರಾಮ'ನಾಗಿ ಅಬ್ಬರಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು ಇಂದು ಚಿತ್ರದ ಮುಹೂರ್ತ ನೇರವೇರಿದೆ. ಚಿತ್ರಕ್ಕೆ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
ಬಳಿಕ ಮಾತನಾಡಿದ ನಟ ಅಭಿಷೇಕ್ ಅಂಬರೀಶ್, ನಮ್ಮ ತಂದೆ ಗಜೇಂದ್ರ ಎನ್ನುವ ಸಿನಿಮಾ ಮಾಡಿದ್ರು. ಈಗ ನನ್ನ ಸ್ನೇಹಿತ ಗಜರಾಮ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಜವರ್ಧನ್ ಮೋಷನ್ ಪೋಸ್ಟರ್ನಲ್ಲಿ ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಒಂದೊಳ್ಳೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಹಾಗೂ ಮಾಸ್ ಕಟೆಂಟ್ ಒಳಗೊಂಡ ಒಂದೊಳ್ಳೆ ಕಥೆ ಚಿತ್ರದಲ್ಲಿದೆ. ನನ್ನ ಪಾತ್ರದ ಬಗ್ಗೆ ಕೇಳಿ ಇಷ್ಟವಾಯ್ತು. ಒಳ್ಳೆ ಪ್ರೊಡಕ್ಷನ್ ಹೌಸ್, ಒಳ್ಳೆ ನಿರ್ಮಾಪಕರು, ಒಳ್ಳೆ ಚಿತ್ರ ಸಿಕ್ಕಾಗ ಕೈ ಬಿಡಬಾರದು. ನನಗೆ ಸ್ಟೋರಿ ಲೈನ್ ಖುಷಿ ಕೊಟ್ಟಿದೆ ಎಂದರು ನಾಯಕ ನಟ ರಾಜವರ್ಧನ್.