ಬೆಂಗಳೂರು:ನಾಗೇಂದ್ರ ಗಾಣಿಗ ನಿರ್ದೇಶಿಸಿರುವಅಭಿರಾಮಚಂದ್ರ ಚಿತ್ರದ ಟೀಸರ್ ಅನ್ನು ನಟ ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ತುಂಬಾ ಬ್ಯೂಟಿಫುಲ್ ವಿಷ್ಯೂವಲ್ಸ್ ಇತ್ತು. ಮಕ್ಕಳ ಕಥೆ ಇದೆ. ಸ್ಟೋರಿ ಬೇರೆ ಬೇರೆ ತಿರುವು ಕಾಣುತ್ತಿದೆ. ಟೀಸರ್ ನೋಡುವಾಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆನಪಾಯ್ತು. ಆ ಸಿನಿಮಾ ರೀತಿ ಹಿಟ್ ಆಗಲಿ. ಟೈಟಲ್ ತುಂಬಾ ಪಾಸಿಟಿವ್ ಆಗಿದೆ. ಸಿನಿಮಾ ಮೇ ನಲ್ಲಿ ರಿಲೀಸ್ ಆಗಲಿದ್ದು, ನಾನೂ ಚಿತ್ರ ನೋಡುತ್ತೇನೆ, ನೀವು ನೋಡಿ. ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಶಾಲಾ ದಿನಗಳ ಪ್ರೀತಿ, ತುಂಟಾಟ, ಮುಗ್ದ ಸ್ನೇಹವನ್ನು ಅಭಿರಾಮಚಂದ್ರ ಚಿತ್ರದಲ್ಲಿ ಕಟ್ಟಿ ಕೊಡಲಾಗಿದೆ. ಕಿರಿಕ್ ಪಾರ್ಟಿ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ನಾಗೇಂದ್ರ ಗಾಣಿಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ. ರಥ ಕಿರಣ ಸಿದ್ದು ಮೂಲಿಮನಿ, ನಾಟ್ಯರಂಗ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಿವಾನಿ ರೈ ನಾಯಕಿ ಆಗಿ ಅಭಿನಯಿಸಿದ್ದಾರೆ.