ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸ್ಯಾಂಡಲ್ವುಡ್ನಲ್ಲಿ ತನ್ನ ಮ್ಯಾನರಿಸಂಗೆ ತಕ್ಕಂತೆ ಮಾಸ್ ಆ್ಯಂಡ್ ಕ್ಲಾಸ್ ಸಿನಿಮಾಗಳನ್ನ ನೀಡುತ್ತಾ ಬಂದಿರುವ ನಟ. 'ಅರ್ಜುನ್ ಗೌಡ' ಸಿನಿಮಾ ಬಳಿಕ ಅವರು ಔಟ್ ಆ್ಯಂಡ್ ಔಟ್ ಎಂಟರ್ಟೈನ್ಮೆಂಟ್ ಸಿನಿಮಾ 'ಅಬ್ಬರ'ದಲ್ಲಿ ಕಾಣಿಸಿಕೊಳ್ಳಲಿದ್ದು ಚಿತ್ರವು ಸದ್ಯ ಪೊಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯ ಡಬ್ಬಿಂಗ್ ಮಾಡುತ್ತಿರುವ ಒಂದು ಮೇಕಿಂಗ್ ವಿಡಿಯೋ ಇದೀಗ ರಿವಿಲ್ ಆಗಿದ್ದು, ಸಖತ್ ಸೌಂಡ್ ಮಾಡುತ್ತಿದೆ. ಈ ಡಬ್ಬಿಂಗ್ ವರಸೆ ನೋಡಿದರೆ ಸಾಕು 'ಅಬ್ಬರ' ಎಷ್ಟು ಎಂಟರ್ಟೈನ್ಮೆಂಟ್ ಸಿನಿಮಾ ಅನ್ನೋದು ಗೊತ್ತಾಗುತ್ತದೆ.
ಪ್ರಜ್ವಲ್ ದೇವರಾಜ್ 'ಅಬ್ಬರ' ಶುರು... ಮೇಕಿಂಗ್ ವಿಡಿಯೋ ರಿಲೀಸ್ - Prajwal Devaraj New Movie
ಹಾಡುಗಳಿಂದಲೇ ಸಖತ್ ಸದ್ದು ಮಾಡುತ್ತಿರುವ 'ಅಬ್ಬರ' ಸಿನಿಮಾ ಸದ್ಯ ಪೊಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆಯಾಗಲಿದ್ದು, ಕೆಲವು ಸ್ಪೆಷಲ್ ಅನೌನ್ಸ್ಮೆಂಟ್ ಮಾಡುವ ಮೂಲಕ ಗಮನ ಸೆಳೆಯುತ್ತಿದೆ.
ಈ ವಿಡಿಯೋದೊಂದಿಗೆ ಅಬ್ಬರ ತಂಡ ಇದೇ 18ಕ್ಕೆ ಟೀಸರ್ ಸಹ ಲಾಂಚ್ ಮಾಡುತ್ತಿದೆ. ಜೊತೆಗೆ ಒಂದು ಸ್ಪೆಷಲ್ ಅನೌನ್ಸ್ಮೆಂಟ್ ಇದೆ ಅನ್ನೋದನ್ನ ಚಿತ್ರ ತಂಡ ಹೇಳಿ ಕುತೂಹಲ ಹುಟ್ಟಿಸಿದೆ. ಇನ್ನು ಪ್ರಜ್ವಲ್ ದೇವರಾಜ್ ಜೋಡಿಯಾಗಿ ನಟಿ ಲೇಖಾಚಂದ್ರ, ನಿಮಿಕಾ ರತ್ನಾಕರ್ ಹಾಗೂ ರಾಜಶ್ರೀ ಪೊನ್ನಪ್ಪ ಈ ಚಿತ್ರದಲ್ಲಿ ಮೂರು ಜನ ನಾಯಕಿಯರಾಗಿ ನಟಿಸಿದ್ದಾರೆ. ಇನ್ನು ಪ್ರಜ್ವಲ್ ಎದುರು ಖಡಕ್ ವಿಲನ್ ಆಗಿ ನಟ ರವಿಶಂಕರ್ ನಟಿಸಿದ್ದಾರೆ. ಸದ್ಯ ಈ ಕಾಂಬಿನೇಷನ್ ಕೆಲವೊಂದು ಫೋಟೋಗಳು ಕುತೂಹಲ ಹುಟ್ಟಿಸಿದೆ.
ಈ ಹಿಂದೆ ಟೈಸನ್ ಮತ್ತು ಕ್ರ್ಯಾಕ್ ಎಂಬ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ರಾಮ್ ನಾರಾಯಣ್ 'ಅಬ್ಬರ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಂದ್ಹಾಗೆ, ಈ ಸಿನಿಮಾದಲ್ಲಿ ಪ್ರಜ್ವಲ್ ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಸಾಕಷ್ಟು ವಿಶೇಷ ವಿಚಾರಗಳಿಂದ ತುಂಬಿರೋ 'ಅಬ್ಬರ' ಸಿನಿಮಾವನ್ನ ಬಸವರಾಜ್ ಮಂಚಯ್ಯ ನಿರ್ಮಾಣ ಮಾಡಿದ್ದಾರೆ. ಸದ್ಯ ಟೀಸರ್ ಬಿಡುವ ತವಕದಲ್ಲಿರೋ 'ಅಬ್ಬರ' ಚಿತ್ರತಂಡ ಮುಂದಿನ ತಿಂಗಳು ಬಿಡುಗಡೆ ಮಾಡುವ ಪ್ಲಾನ್ ನಲ್ಲಿದೆ.