ಬಾಲಿವುಡ್ ನಟ ಅಮೀರ್ ಖಾನ್ ತಾವು ಆಯ್ದುಕೊಳ್ಳುವ ಕಥೆ, ಅಭಿನಯದಿಂದ ಬಾಲಿವುಡ್ ಚಿತ್ರರಂಗದಲ್ಲಿ ವಿಭಿನ್ನ ಐಡೆಂಟಿಟಿ ಹೊಂದಿದ್ದಾರೆ. ಇವರು ತಮ್ಮ ನಟನೆಗೆ ಫಲಪ್ರದವಾಗಿ ಸಾಕಷ್ಟು ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ಕಥೆಯಲ್ಲಿ ಸ್ಫೂರ್ತಿದಾಯಕ ಅಂಶವಿಲ್ಲದಿದ್ದರೆ ಆ ಚಿತ್ರದಲ್ಲಿ ನಟಿಸಲು ಮುಂದಾಗುವುದಿಲ್ಲ. ಆಯಾ ಪಾತ್ರಗಳಿಗೆ ಜೀವ ತುಂಬಲು ಪ್ರಯತ್ನಿಸುತ್ತಾರೆ. ಹಾಗಾಗಿಯೇ ಅಭಿಮಾನಿಗಳು ಅವರನ್ನು ಪ್ರೀತಿಯಿಂದ 'ಮಿಸ್ಟರ್ ಪರ್ಫೆಕ್ಟ್' ಎಂದು ಕರೆಯುತ್ತಾರೆ.
ಇತ್ತೀಚೆಗೆ ನಟನೆಯಿಂದ ಕೆಲಕಾಲ ದೂರ ಉಳಿಯಲು ನಿರ್ಧರಿಸಿರುವುದಾಗಿ ತಿಳಿಸಿದ್ದರು. ಸಿನಿಮಾದಿಂದ ವಿರಾಮ ಪಡೆದಿರುವ ಅವರು ಕುಟುಂಬಸ್ಥರಿಗೆ ಸಮಯ ಕೊಡಲು ಮುಂದಾಗಿದ್ದಾರೆ. ಇದೀಗ ತಮ್ಮ ಪ್ರೊಡಕ್ಷನ್ ಹೌಸ್‌ನಲ್ಲಿ ಪೂಜೆ ನಡೆಸಿರುವ ಫೋಟೋಗಳು ವೈರಲ್ ಆಗಿವೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಅಮೀರ್ ಖಾನ್ ಅವರು ತಮ್ಮ ಮಾಜಿ ಪತ್ನಿ ಕಿರಣ್ ರಾವ್ ಜೊತೆಗೆ ಪೂಜೆಯಲ್ಲಿ ಪಾಲ್ಗೊಂಡಿರುವುದು.