ಕರ್ನಾಟಕ

karnataka

ETV Bharat / entertainment

ಚೆನ್ನೈಗೆ ಶಿಫ್ಟ್​​ ಆಗಲಿದ್ದಾರಾ ಸೂಪರ್ ಸ್ಟಾರ್ ಅಮೀರ್ ಖಾನ್? - Aamir Khan next movies

ಬಾಲಿವುಡ್​ ನಟ ಅಮೀರ್ ಖಾನ್ ಚೆನ್ನೈಗೆ ಶಿಫ್ಟ್​​ ಆಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.

Aamir Khan
ಅಮೀರ್ ಖಾನ್

By ETV Bharat Karnataka Team

Published : Oct 21, 2023, 1:17 PM IST

ಬಾಲಿವುಡ್​​​ ಸೂಪರ್ ಸ್ಟಾರ್ ಅಮೀರ್ ಖಾನ್ ಅವರು ತಮ್ಮ ತಾಯಿ ಜೀನತ್ ಹುಸೈನ್ ಅವರಿಗೆ ಅನಾರೋಗ್ಯ ಹಿನ್ನೆಲೆ ಚೆನ್ನೈಗೆ ಸ್ಥಳಾಂತರಗೊಳ್ಳಲು ಸಜ್ಜಾಗುತ್ತಿದ್ದಾರೆ ಎಂದು ವರದಿಯಾಗಿದೆ. ಅಮೀರ್ ಖಾನ್​​ ಅವರಿಗೆ ತಾಯಿಯೆಂದರೆ ಪ್ರಾಣ. ಚೆನ್ನೈನಲ್ಲಿ ತಾಯಿ ಚಿಕಿತ್ಸೆ ಪಡೆಯುವ ಸಂದರ್ಭ ಅವರ ಜೊತೆಗಿರಲು ನಟ ಬಯಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಜೀನತ್ ಹುಸೈನ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ವರದಿಗಳ ಪ್ರಕಾರ, ನಟ ಅಮೀರ್ ಖಾನ್​​ ತಮ್ಮ ತಾಯಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಸಮೀಪವಿರುವ ಹೋಟೆಲ್‌ನಲ್ಲಿ ತಂಗಲು ಉದ್ದೇಶಿಸಿದ್ದಾರೆ. ಇಂತಹ ಕಠಿಣ ಸಂದರ್ಭ ತಾಯಿ ಜೊತೆ ಇರುವ ಉದ್ದೇಶದಿಂದ ನಟ ಈ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ನಟ ತಮ್ಮ ಕುಟುಂಬಕ್ಕೆ ಸಂಪೂರ್ಣ ಸಮಯ ಮೀಸಲಿಟ್ಟಿದ್ದಾರೆ. ಸಿನಿಮಾಗಳಿಂದ ಸಣ್ಣ ಬ್ರೇಕ್​ ಪಡೆದಿದ್ದಾರೆ. ನಟನೆ, ನಿರ್ಮಾಣ, ವೃತ್ತಿಜೀವನದಿಂದ ಕೊಂಚ ವಿರಾಮ ಪಡೆದಿರುವ ಬಾಲಿವುಡ್​ ಮಿಸ್ಟರ್​ ಪರ್ಫೆಕ್ಷನಿಷ್ಟ್ ಖ್ಯಾತಿಯ ಅಮೀರ್​ ಖಾನ್​​ ಕುಟುಂಬಕ್ಕೆ ಸಂಪೂರ್ಣ ಸಮಯ ಮೀಸಲಿಡುವುದಾಗಿ ಈವೆಂಟ್​ ಒಂದರಲ್ಲಿ ತಿಳಿಸಿದ್ದರು. ಅದರಂತೆ ಇದೀಗ ತಾಯಿಗೆ ಸಂಪೂರ್ಣ ಸಮಯ ಮೀಸಲಿಡಲು ಸಜ್ಜಾಗಿದ್ದಾರೆ ಎಂದು ವರದಿಗಳು ಸೂಚಿಸಿವೆ.

ಈ ಸಾಲಿನ ಆರಂಭದಲ್ಲಿ, ಜೀನತ್ ಹುಸೈನ್ ಅವರ 89ನೇ ಹುಟ್ಟುಹಬ್ಬವನ್ನು ಅಮೀರ್ ಖಾನ್ ಕುಟುಂಬ, ಆಪ್ತ ಸ್ನೇಹಿತರು ಜೊತೆ ಸೇರಿ ಆಚರಿಸಿದ್ದರು. ಪಂಜಾಬಿ ಗಾಯಕಿ ಪ್ರತಿಭಾ ಸಿಂಗ್ ಬಾಘೆಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈವೆಂಟ್‌ನ ಫೋಟೋಗಳನ್ನು ಹಂಚಿಕೊಂಡಿದ್ದರು. ಈವೆಂಟ್​ನಲ್ಲಿ ಪಡೆದ ಪ್ರೀತಿಗೆ ಗಾಯಕಿ ಕೃತಘ್ಞತೆ ಸಲ್ಲಿಸಿದ್ದರು. ಅಮೀರ್ ಖಾನ್​​ ಅವರ ಸಹೋದರಿಯರಾದ ನಿಖತ್ ಮತ್ತು ಫರ್ಹತ್ ಕೂಡ ಈವೆಂಟ್​ನಲ್ಲಿ ಭಾಗಿ ಆಗಿದ್ದರು. ನಟನ ಮಾಜಿ ಪತ್ನಿ ಕಿರಣ್ ರಾವ್, ಮಗಳು ಇರಾ ಖಾನ್ ಸಹ ಗಾಯಕಿ ಹಂಚಿಕೊಂಡಿರುವ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:ಇಳಿಕೆ ಕಂಡ 'ಲಿಯೋ' ಕಲೆಕ್ಷನ್​​: ಮೊದಲ ದಿನ 64, ಎರಡನೇ ದಿನ 36 ಕೋಟಿ ರೂ.

ನಟ ಅಮೀರ್​​ ಖಾನ್​ ಮುಂದಿನ ಸಿನಿಮಾ ಗಮನಿಸುವುದಾದರೆ, 'ಸಿತಾರೆ ಜಮೀನ್ ಪರ್' ಅನ್ನು ಘೋಷಿಸಿದ್ದಾರೆ. ಇದು ನಟನ 2007ರ ಹಿಟ್ ಚಿತ್ರ 'ತಾರೆ ಜಮೀನ್ ಪರ್'ನ ಮಾದರಿಯಲ್ಲಿ ಮೂಡಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಲು ಖಾನ್​ ರೆಡಿಯಾಗಿದ್ದಾರೆ. ಕಿರಣ್ ರಾವ್ ನಿರ್ದೇಶನದ 'ಲಾಪತ ಲೇಡೀಸ್', ಪುತ್ರ ಜುನೈದ್ ಖಾನ್ ಅವರ ಸಿನಿಮಾ, ರಾಜ್​​ಕುಮಾರ ಸಂತೋಷಿ - ಸನ್ನಿ ಡಿಯೋಲ್ ಕಾಂಬಿನೇಶನ್​ನ ಲಾಹೋರ್ 1947 ಸಿನಿಮಾವನ್ನು ಅಮೀರ್​ ನಿರ್ಮಾಣ ಮಾಡಲಿದ್ದಾರೆ.

ಇದನ್ನೂ ಓದಿ:'ತೆಲುಸು ಕದಾ'.. ಶ್ರೀನಿಧಿ ಶೆಟ್ಟಿ ಜನ್ಮದಿನ: 'ಕೆಜಿಎಫ್​ ನಿಧಿ'ಗೆ ಶುಭಾಶಯಗಳ ಮಹಾಪೂರ

ಅಮೀರ್​ ಖಾನ್​ ಕೊನೆಯದಾಗಿ ಕರೀನಾ ಕಪೂರ್ ಖಾನ್​ ಜೊತೆ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತು. ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಗುರಿ ತಲುಪುವಲ್ಲಿ ಚಿತ್ರ ಹಿನ್ನೆಡೆ ಕಂಡಿತು.

ABOUT THE AUTHOR

...view details