ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ’ ಇಂದು ಬಿಡುಗಡೆಯಾಗಿದೆ. ಆಮೀರ್ ಮತ್ತು ಕರೀನಾ ಕಾಂಬಿನೇಷನ್ ಸಿನಿಮಾ ಇದಾಗಿದ್ದು, ಚಿತ್ರವನ್ನ ಬಾಯ್ ಕಾಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಆಂದೋಲನ ಶುರುವಾಗಿತ್ತು. ಆದ್ರೆ, ಈಗ ಚಿತ್ರ ರಿಲೀಸ್ ಬೆನ್ನಲ್ಲೇ ಅಮೀರ್ ಸಿನಿಮಾ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಹೌದು, "ಲಾಲ್ ಸಿಂಗ್ ಚಡ್ಡಾ" ಬಿಡುಗಡೆಗೂ ಮುನ್ನ ನಟ ಅಮೀರ್ ಖಾನ್ ನಿದ್ದೆಯಿಲ್ಲದೇ ರಾತ್ರಿಗಳನ್ನು ಕಳೆದಿದ್ದಾರಂತೆ. ಈ ಕುರಿತು ಸ್ವತಃ ಅವರೇ ಹೇಳಿಕೊಂಡಿದ್ದಾರೆ. "ನಾನು ಸಿನಿಮಾ ಬಿಡುಗಡೆಯ ಬಗ್ಗೆ ನಿಜವಾಗಿಯೂ ಆತಂಕಗೊಂಡಿದ್ದೇನೆ. 48 ಗಂಟೆಗಳ ಕಾಲ ನಿದ್ದೆ ಮಾಡಿಲ್ಲ. ನನ್ನ ಮೆದುಳು ಅತಿಯಾಗಿ ಯೋಚಿಸುತ್ತಿತ್ತು. ಹಾಗಾಗಿ, ರಾತ್ರಿ ಆನ್‌ಲೈನ್‌ನಲ್ಲಿ ಚೆಸ್ ಆಡುತ್ತಿದ್ದೆ, ಪುಸ್ತಕಗಳನ್ನು ಓದುತ್ತಿದ್ದೆ. ಆಗಸ್ಟ್ 11 ರ ನಂತರ ರಾತ್ರಿ ನಿದ್ದೆ ಮಾಡಬಹುದು ಎಂದು ಭಾವಿಸುತ್ತೇನೆ" ಎಂದು ಪಿವಿಆರ್ ಸಿನಿಮಾದ 25 ನೇ ವರ್ಷದ ಸಂಭ್ರಮಾಚರಣೆ ಸಮಾರಂಭದಲ್ಲಿ ಹೇಳಿದರು.