ಬಾಲಿವುಡ್ನ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ನಿರ್ಮಾಪಕಿ ರೀನಾ ದತ್ತಾ ಅವರ ಪುತ್ರಿ ರಂಗಭೂಮಿ ನಿರ್ದೇಶಕಿ ಇರಾ ಖಾನ್ ಶುಕ್ರವಾರ ತಮ್ಮ ಬಹುಕಾಲದ ಗೆಳೆಯ ನೂಪುರ್ ಶಿಖರೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಗಳ ಎಂಗೇಜ್ಮೆಂಟ್ ಸಮಾರಂಭದಲ್ಲಿ ತಂದೆ ಅಮೀರ್ ಖಾನ್ ಸಖತ್ ಡ್ಯಾನ್ಸ್ ಮಾಡಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.
ಮಗಳ ನಿಶ್ಚಿತಾರ್ಥ ಸಮಾರಂಭದಲ್ಲಿ ಸೂಪರ್ ಸ್ಟಾರ್ ಅಮೀರ್ ಖಾನ್ ಡ್ಯಾನ್ಸ್
ಮಗಳ ನಿಶ್ಚಿತಾರ್ಥ ಸಮಾರಂಭದಲ್ಲಿ ನಟ ಅಮೀರ್ ಖಾನ್ ಡ್ಯಾನ್ಸ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
ಶುಕ್ರವಾರ ತಾರಾ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಮಾರಂಭದಲ್ಲಿ ಅಮೀರ್ ಖಾನ್, ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಮತ್ತು ಇಮ್ರಾನ್ ಖಾನ್ ಮತ್ತು ಮನ್ಸೂರ್ ಖಾನ್ ಸೇರಿದಂತೆ ಅವರ ಕುಟುಂಬ ಸದಸ್ಯರು ಭಾಗವಹಿಸಿದ್ದರು. ಆತ್ಮೀಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಿತು. ಅಮೀರ್ ಖಾನ್ ಬಿಳಿ ಬಣ್ಣದ ಉಡುಗೆ ಧರಿಸಿದ್ದರು. ಕಾರ್ಯಕ್ರಮದಲ್ಲಿ ಪಾಪ ಕೆಹ್ತೆ ಹೈನ್ ಸಾಂಗ್ಗೆ (Papa Kahte Hain) ಅಮೀರ್ ಖಾನ್ ಡ್ಯಾನ್ಸ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಗೆಳೆಯ ನೂಪುರ್ ಶಿಖರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಅಮೀರ್ ಖಾನ್ ಪುತ್ರಿ ಇರಾ ಖಾನ್