ETV Bharat Karnataka

ಕರ್ನಾಟಕ

karnataka

ETV Bharat / entertainment

ಚೆನ್ನೈ ಪ್ರವಾಹ: ಜಲಾವೃತ ಪ್ರದೇಶದಲ್ಲಿ ಸಿಲುಕಿದ್ದ ಅಮೀರ್​ ಖಾನ್, ವಿಷ್ಣು ವಿಶಾಲ್ ರಕ್ಷಣೆ - Vishnu Vishal

Chennai floods: ಜಲಾವೃತ ಪ್ರದೇಶದಲ್ಲಿ ಸಿಲುಕಿದ್ದ ಬಾಲಿವುಡ್​ ನಟ ಅಮೀರ್​ ಖಾನ್ ಮತ್ತು ತಮಿಳು ನಟ ವಿಷ್ಣು ವಿಶಾಲ್ ಅವರನ್ನು ರಕ್ಷಿಸಲಾಗಿದೆ. ​

Aamir Khan and Vishnu Vishal rescued after being stranded in Chennai floods
ಜಲಾವೃತ ಪ್ರದೇಶದಲ್ಲಿ ಸಿಲುಕಿದ್ದ ಅಮೀರ್​ ಖಾನ್, ವಿಷ್ಣು ವಿಶಾಲ್ ಸುರಕ್ಷಿತ
author img

By ETV Bharat Karnataka Team

Published : Dec 5, 2023, 7:02 PM IST

Updated : Dec 5, 2023, 7:52 PM IST

ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಹಿನ್ನೆಲೆ ಮಿಚೌಂಗ್​ ಚಂಡಮಾರುತ ಅಬ್ಬರಿಸಿ ಚೆನ್ನೈನ ವಾತಾವರಣ ಹದಗೆಟ್ಟಿದೆ. ವಿವಿಧ ಭಾಗಗಳಲ್ಲಿ ಎರಡಬಿಡದೇ ಮಳೆ ಸುರಿದಿದೆ. 2015ರ ಬಳಿಕ ತಮಿಳುನಾಡಿನಲ್ಲಾದ ದೊಡ್ಡ ಮಳೆ ಇದು ಎಂದು ಸರ್ಕಾರ ತಿಳಿಸಿದೆ. ಮಳೆ ಹಿನ್ನೆಲೆ ಹಲವೆಡೆ ಪ್ರವಾಹದ ವಾತಾವರಣ ಸೃಷ್ಟಿಯಾಗಿತ್ತು. ಸದ್ಯ ಚೆನ್ನೈನ ಪರಿಸ್ಥಿತಿ ಸುಧಾರಿಸುತ್ತಿದೆ. ಜಲಾವೃತ ಪ್ರದೇಶದಲ್ಲಿ ಸಿಲುಕಿದ್ದ ಬಾಲಿವುಡ್​ ಸೂಪರ್ ಸ್ಟಾರ್ ಅಮೀರ್​ ಖಾನ್ ಮತ್ತು ತಮಿಳು ನಟ ವಿಷ್ಣು ವಿಶಾಲ್ ಅವರು ಸುರಕ್ಷಿತವಾಗಿದ್ದಾರೆ.

ಭಾರಿ ಪ್ರವಾಹಕ್ಕೆ ಸಿಲುಕಿದ್ದ ಹಿಂದಿ ಚಿತ್ರರಂಗದ ಮಿಸ್ಟರ್ ಪರ್ಫೆಕ್ಷನಿಷ್ಟ್ ಖ್ಯಾತಿಯ ಅಮೀರ್ ಖಾನ್ ಅವರನ್ನು ರಕ್ಷಿಸಲಾಗಿದೆ. ಇಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿರುವ ಫೋಟೋಗಳಲ್ಲಿ ಅಮೀರ್​ ಖಾನ್ ಮತ್ತು ತಮಿಳು ನಟ ವಿಷ್ಣು ವಿಶಾಲ್ ಅವರು ಇತರೆ ಪ್ರವಾಹ ಪೀಡಿತ ಜನರೊಂದಿಗೆ ರಕ್ಷಣಾ ದೋಣಿಯಲ್ಲಿ ಕುಳಿತಿರುವುದನ್ನು ಕಾಣಬಹುದು.

ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​​ನಲ್ಲಿ ವಿಷ್ಣು ವಿಶಾಲ್ ಸಹ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ಜನರಿಗೆ ಸಹಾಯ ಮಾಡಿದ ಅಗ್ನಿಶಾಮಕ ದಳ ಮತ್ತು ರಕ್ಷಣಾ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ, ಮೂರು ರಕ್ಷಣಾ ದೋಣಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಕರಪಕ್ಕಂನಲ್ಲಿ ಈಗಾಗಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂಬುದನ್ನೂ ಉಲ್ಲೇಖಿಸಿದ್ದಾರೆ. ಇಂಥ ಕಠಿಣ ಸಮಯದಲ್ಲಿ ತಮಿಳುನಾಡು ಸರ್ಕಾರದ ಗಮನಾರ್ಹ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಜೊತೆಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ಕೆಲಸ ಮಾಡುತ್ತಿರುವ ಸಂಬಂಧಪಟ್ಟ ಆಡಳಿತ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ:ಕೆಜಿಎಫ್​ ಸ್ಟಾರ್​ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ; 'ಯಶ್​​ 19' ಅನೌನ್ಸ್​ಮೆಂಟ್​ಗೆ ಕಾತರ

ಇದಕ್ಕೂ ಮುನ್ನ, ವಿಷ್ಣು ವಿಶಾಲ್ ತಮ್ಮ ಚೆನ್ನೈನ ನಿವಾಸದಿಂದ ಫೋಟೋ ಹಂಚಿಕೊಂಡು ತಮ್ಮ ಸಮಸ್ಯೆ ಬಹಿರಂಗಪಡಿಸಿದ್ದರು. ವಿದ್ಯುತ್, ನೆಟ್‌ವರ್ಕ್ ಇಲ್ಲದೇ ಪರದಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ತಮ್ಮ ಮನೆಗೆ ನೀರು ನುಗ್ಗುತ್ತಿರುವುದಾಗಿ ಬಹಿರಂಗಪಡಿಸಿದ್ದರು. ಪ್ರವಾಹ ಸಮಸ್ಯೆಗಳನ್ನು ಚಿತ್ರಿಸುವಂತಹ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಕರಪಕ್ಕಂನಲ್ಲಿ ನೀರಿನ ಮಟ್ಟವು ಏರಿರುವುದಾಗಿ ತಿಳಿಸಿ ಸಹಾಯ ಕೋರಿದ್ದರು. ವಿದ್ಯುತ್, ವೈಫೈ ಅಥವಾ ಫೋನ್ ಸಿಗ್ನಲ್‌ ಇಲ್ಲ. ತಮ್ಮ ಟೆರೆಸ್‌ನಲ್ಲಿ ಸ್ವಲ್ಪ ಸಿಗ್ನಲ್​​ ಸಿಗುತ್ತಿದೆ ಎಂದು ತಿಳಿಸಿದ್ದರು. ಅಲ್ಲದೇ ಚೆನ್ನೈನಾದ್ಯಂತ ಅಸಂಖ್ಯಾತ ಜನರು ಎದುರಿಸುತ್ತಿರುವ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ 'ಹಾಯ್ ನಾನ್ನ' ಪ್ರಚಾರ: ಶಿವಣ್ಣನನ್ನು ಭೇಟಿಯಾದ ನ್ಯಾಚುರಲ್​​​ ಸ್ಟಾರ್ ನಾನಿ

ತಮಿಳುನಾಡಿನ ಹಲವೆಡೆ ಧಾರಾಕಾರ ಮಳೆ ಸುರಿದಿತ್ತು. ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ನಾಗಪಟ್ಟಿಣಂ, ಕಡ್ಡಲೂರು ಮತ್ತು ತಿರುವಳ್ಳೂರ್ ಜಿಲ್ಲೆಗಳ ಮೇಲೆ ಭಾರಿ ಪರಿಣಾಮ ಬೀರಿತು. ಪ್ರಸ್ತುತ, ಚೆನ್ನೈನ ಹೆಚ್ಚಿನ ಭಾಗ ಪ್ರವಾಹದ ನೀರಿನಲ್ಲಿ ಜಲಾವೃತಗೊಂಡಿದೆ. ತಗ್ಗು ಪ್ರದೇಶಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಪ್ರವಾಹ ಪರಿಸ್ಥಿತಿ ಸುಧಾರಿಸುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ತಮಿಳು ಸೂಪರ್​ ಸ್ಟಾರ್ಸ್ ಸೂರ್ಯ, ಕಾರ್ತಿ 10 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ. ಈ ಹಣವನ್ನು ಅಗತ್ಯ ಪರಿಹಾರ ಕಾರ್ಯಗಳಿಗೆ ಬಳಸಲಾಗುವುದು. ಸಹಾಯ ಹಸ್ತ ಚಾಚುವ ಕೆಲಸಗಳು ನಟರ ಅಭಿಮಾನಿಗಳ ಸಂಘಗಳ ಮೂಲಕ ನಿರ್ವಹಿಸಲ್ಪಡುತ್ತವೆ.

Last Updated : Dec 5, 2023, 7:52 PM IST

ABOUT THE AUTHOR

...view details