ಕರ್ನಾಟಕ

karnataka

ETV Bharat / entertainment

ಫಾತಿಮಾ ಸನಾ ಜೊತೆ ಅಮೀರ್​ ಖಾನ್ ಪಿಕಲ್​ ಬಾಲ್​ ಆಟ: ಇವರಿಬ್ಬರ ರಿಲೇಶನ್​ಶಿಪ್​ ಬಗ್ಗೆ ನೆಟ್ಟಿಗರ ಚರ್ಚೆ - ಫಾತಿಮಾ ಸನಾ ಜೊತೆ ಅಮೀರ್​ ಖಾನ್ ಪಿಕಲ್​ ಬಾಲ್​ ಆಟ

ಅಮೀರ್ ಖಾನ್ ಮತ್ತು ಫಾತಿಮಾ ಸನಾ ಶೇಖ್ ಅವರು ರಿಲೇಶನ್​ಶಿಪ್​ನಲ್ಲಿದ್ದಾರೆ ಎನ್ನುವ ವದಂತಿಗೆ ಇಂಬು ನೀಡುವಂತಿರುವ ಇಬ್ಬರೂ ಪಿಕಲ್​​ ಬಾಲ್​ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

aamir khan and fatima sana shaikh spotted playing pickleball
ಫಾತಿಮಾ ಸನಾ ಜೊತೆ ಅಮೀರ್​ ಖಾನ್ ಪಿಕಲ್​ ಬಾಲ್​ ಆಟ

By

Published : May 24, 2023, 7:40 PM IST

ಬಾಲಿವುಡ್​ ನಟ ಅಮೀರ್​ ಖಾನ್​ ಪತ್ನಿ ಕಿರಣ್​ ರಾವ್​ಗೆ ವಿಚ್ಛೇದನ ನೀಡಿರುವ ವಿಷಯ ಗೊತ್ತೇ ಇದೆ. ಇದೀಗ ಅಮೀರ್​ ಖಾನ್​ ಹಾಗೂ ಬಾಲಿವುಡ್​ ನಟಿ ಫಾತಿಮಾ ಸನಾ ಶೇಖ್​ ಜೊತೆಯಾಗಿ ಪಿಕಲ್​​​ ಬಾಲ್​ ಆಟವಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ದಂಗಲ್​ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ನಟಿ ಫಾತಿಮಾ ಸನಾ ಶೇಖ್​ ಈಗ ಮತ್ತೆ ಅಮೀರ್​ ಖಾನ್​ ಜೊತೆ ಕಾಣಿಸಿಕೊಂಡಿರುವುದು ನೆಟ್ಟಗರಿರಲ್ಲಿ ಹಲವು ಚರ್ಚೆಗೆ ಕಾರಣವಾಗಿದೆ.

ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಸದ್ಯ ವೈರಲ್​​ ಆಗುತ್ತಿದ್ದು, ವಿಡಿಯೋದಲ್ಲಿ ಇಬ್ಬರೂ ಒಂದೇ ಟೀಂ ನಲ್ಲಿ ಪಿಕಲ್​​ ಬಾಲ್​ ಆಟವಾಡುತ್ತಿದ್ದಾರೆ. ಅಮೀರ್ ಕಪ್ಪು ಟ್ರ್ಯಾಕ್ ಪ್ಯಾಂಟ್‌ನೊಂದಿಗೆ ಕೆಂಪು ಟಿ-ಶರ್ಟ್‌ನಲ್ಲಿ ಧರಿಸಿದ್ದು, ಫಾತಿಮಾ ಕಪ್ಪು ಶಾರ್ಟ್ಸ್ ಮತ್ತು ಬೂದು ಬಣ್ಣದ ಟಿ-ಶರ್ಟ್ ಧರಿಸಿದ್ದಾರೆ. ತಿಂಗಳ ಹಿಂದೆ, ಅಮೀರ್ ಖಾನ್ ಅವರು ತಮ್ಮ ಮಗಳು ಇರಾ ಖಾನ್ ಅವರೊಂದಿಗೆ ಪಿಕಲ್​​ ಬಾಲ್​ ಆಟವನ್ನು ಆನಂದಿಸಿದ್ದರು.

ಅಮೀರ್ ಖಾನ್ ಅವರ ಮಗಳು ಇರಾ ಖಾನ್ ಸೇರಿದಂತೆ ಹಲವು ವರ್ಷಗಳಿಂದ ಫಾತಿಮಾ ಅಮೀರ್​ ಖಾನ್​ ಕುಟುಂಬಕ್ಕೆ ಹತ್ತಿರವಾಗಿದ್ದಾರೆ. ಕಳೆದ ವರ್ಷ ತನ್ನ ನಿಶ್ಚಿತ ವರ ನೂಪುರ್ ಶಿಖರೆಯೊಂದಿಗೆ ಇರಾ ಖಾನ್ ಅವರ ನಿಶ್ಚಿತಾರ್ಥವಾದ ಸಂದರ್ಭದಲ್ಲಿ ಫಾತಿಮಾ ಅವರಿಬ್ಬರಿಗೂ ಸೋಷಿಯಲ್​ ಮೀಡಿಯಾದಲ್ಲಿ ಮನತುಂಬಿ ಹರಸಿದ್ದರು. ಇರಾ ಖಾನ್​ ಅಮೀರ್​ ಖಾನ್​ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಎರಡನೇ ಮಗಳು. ಅವರಿಗೆ ಮೊದಲ ಪತ್ನಿಯಿಂದ ಜುನೈದ್ ಎಂಬ ಮಗನೂ ಇದ್ದಾನೆ. ಅಮೀರ್ ಮತ್ತು ಅವರ ಎರಡನೇ ಪತ್ನಿ ಕಿರಣ್ ರಾವ್ ಅವರಿಗೆ ಆಜಾದ್ ಎಂಬ ಮಗನಿದ್ದಾನೆ.

ದಂಗಲ್ ಮತ್ತು ಥಗ್ಸ್ ಆಫ್ ಹಿಂದೂಸ್ತಾನ್‌ನಂತಹ ಚಿತ್ರಗಳಲ್ಲಿ ಅಮೀರ್ ಜೊತೆಗೆ ಕಾಣಿಸಿಕೊಂಡಿರುವ ಫಾತಿಮಾ ಸನಾ ಶೇಖ್, ತಮ್ಮ ಲಿಂಕ್-ಅಪ್ ವದಂತಿಗಳಿಂದ ಈ ಹಿಂದೆಯೇ ಸುದ್ದಿಯಲ್ಲಿದ್ದಾರೆ. ಇವರಿಬ್ಬರ ಮದುವೆಯ ಊಹಾಪೋಹಗಳು ಹಲವು ವರ್ಷಗಳಿಂದಲೂ ಕೇಳಿ ಬರುತ್ತಲೇ ಇವೆ. ಪ್ರಾರಂಭದಲ್ಲಿ ಈ ವರದಿಗಳಿಂದ ತಾನು 'ವಿಚಲಿತನಾಗಿದ್ದೇನೆ' ಎಂದು ಹಿಂದೆ ಸರಿಯುತ್ತಿದ್ದರು.

2018ರ ಸಂದರ್ಶನವೊಂದರಲ್ಲಿ, ಫಾತಿಮಾ ಅವರು "ನಾನು ಈ ಬಗ್ಗೆ ವಿವರಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನೀವು ಏನು ಮಾಡಿದರೂ ಜನರು ನಿಮ್ಮ ಬಗ್ಗೆ ಮಾತನಾಡುತ್ತಾರೆ. ಯಾರಾದರೂ ನಿಮ್ಮನ್ನು ಏನಾದರೂ ಆರೋಪಿಸಿದರೆ, ಮೊದಲು ಹೊರಗೆ ಬಂದು ಅದರ ಬಗ್ಗೆ ವಿವರಿಸಬೇಕಾಗಿರುವುದು ಮತ್ತು 'ಹೀಗೇಕೆ ಯೋಚಿಸುತ್ತೀಯಾ?' ಕೇಳಬೇಕಾಗಿರುವುದು ಪ್ರವೃತ್ತಿ. ನೀವು ಆಕ್ರಮಣಕಾರಿ ವ್ಯಕ್ತಿಯಾಗಿದ್ದರೆ, ನೀವು ಆಕ್ರಮಣ ಮಾಡುತ್ತೀರಿ, ನೀವು ವಿಧೇಯ ವ್ಯಕ್ತಿಯಾಗಿದ್ದರೆ, ನೀವು ಅದರ ಬಗ್ಗೆ ಮಾತನಾಡುತ್ತೀರಿ. ಎಂದು ಹೇಳಿದ್ದರು.

ಸಿನಿಮಾಗಳ ಬಗ್ಗೆ ನೋಡುವುದಾದರೆ ಫಾತಿಮಾ ಕೊನೆಯದಾಗಿ ಅನಿಲ್ ಕಪೂರ್ ಮತ್ತು ಹರ್ಷವರ್ಧನ್ ಕಪೂರ್ ನಾಯಕತ್ವದ 'ಥಾರ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ದಿಯಾ ಮಿರ್ಜಾ, ರತ್ನ ಪಾಠಕ್ ಶಾ ಮತ್ತು ಸಂಜನಾ ಸಂಘಿ ಜೊತೆಗೆ 'ಧಕ್ ಧಕ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ ಮೇಘನಾ ಗುಲ್ಜಾರ್ ನಿರ್ದೇಶನದ 'ಸ್ಯಾಮ್ ಬಹದ್ದೂರ್' ನಲ್ಲಿ ವಿಕ್ಕಿ ಕೌಶಲ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. 'ಸ್ಯಾಮ್ ಬಹದ್ದೂರ್' ಚಿತ್ರದಲ್ಲಿ ವಿಕ್ಕಿ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಫಾತಿಮಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮೀರ್ ಖಾನ್ ಕೊನೆಯದಾಗಿ ಕರೀನಾ ಕಪೂರ್ ಖಾನ್ ಜೊತೆಗೆ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:ಬಾಲಿವುಡ್​ನಲ್ಲಿ ತಮಗಾದ ಮತ್ತೊಂದು ಕಹಿ ಘಟನೆ ಬಹಿರಂಗಪಡಿಸಿದ ನಟಿ ಪ್ರಿಯಾಂಕಾ ಚೋಪ್ರಾ

ABOUT THE AUTHOR

...view details