ಸ್ಯಾಂಡಲ್ವುಡ್ನಲ್ಲಿ ಪ್ರತಿವಾರ ಬಿಡುಗಡೆ ಆಗುತ್ತಿರುವ, ಸಿನಿಮಾಗಳ ಸಂಖ್ಯೆ ನೋಡ್ತಾ ಇದ್ರೆ, ಹನುಮಂತನ ಬಾಲದಂತಿದೆ. ಇದರ ಜೊತೆಗೆ ಪರಭಾಷೆ ಚಿತ್ರಗಳ ಹಾವಳಿಯಿಂದ ಥಿಯೇಟರ್ ಸಮಸ್ಯೆ ಆಗುತ್ತಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಈ ವಾರ ಕೂಡ ಡಬ್ಬಿಂಗ್ ಸಿನಿಮಾ ಸೇರಿದಂತೆ ಒಟ್ಟು 8 ಸಿನಿಮಾಗಳು ಅದೃಷ್ಟ ಪರೀಕ್ಷೆಗೆ ಇಳಿದಿವೆ.
ಆ ಸಾಲಿನಲ್ಲಿ ಸತೀಶ್ ನೀನಾಸಂ ಅಭಿನಯದ ಪೆಟ್ರೋಮ್ಯಾಕ್ಸ್, ಅನೀಶ್ ತೇಜೇಶ್ವರ್ ಅಭಿನಯದ ಬೆಂಕಿ, ಶಶಿಕುಮಾರ್ ಪುತ್ರ ಅಕ್ಷಿತ್ ನಟನೆಯ ಓ ಮೈ ಲವ್, ಅವಿನಾಶ್ ನರಸಿಂಹರಾಜ್ ನಟನೆಯ ಚೇಜ್, ಹೊಸಬರ ಕರ್ಮಣ್ಯೇ ವಾಧಿಕಾರಸ್ತೆ, ಪದ್ಮಾವತಿ ಸೇರಿ ಆರು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಾ ಇವೆ.
ಈ ಆರು ಚಿತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವ ಸಿನಿಮಾ ಪೆಟ್ರೋಮ್ಯಾಕ್ಸ್. ಸತೀಶ್ ನೀನಾಸಂ ಹಾಗು ಹರಿಪ್ರಿಯಾ ಅಭಿನಯದ ಈ ಚಿತ್ರಕ್ಕೆ ಸಿದ್ಲಿಂಗು, ನೀರ್ದೋಸೆ ಚಿತ್ರಗಳ ನಿರ್ದೇಶಕ ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಡಬಲ್ ಮೀನಿಂಗ್ ಡೈಲಾಗ್ ಜೊತೆಗೆ ಸೀರಿಯಸ್ ಕಥೆ ಒಳಗೊಂಡಿರುವ ಪೆಟ್ರೋಮ್ಯಾಕ್ಸ್ ಚಿತ್ರಕ್ಕೆ ಪ್ರೇಕ್ಷಕರು ಎಷ್ಟು ಮಾರ್ಕ್ಸ್ ಕೊಡ್ತಾರೆ ಅನ್ನೋದು ನಾಳೆ ಗೊತ್ತಾಗಲಿದೆ.
ರಾಮಾರ್ಜುನ ಸಿನಿಮಾ ಬಳಿಕ ಅನೀಶ್ ತೇಜೇಶ್ವರ್ ಅಭಿನಯದ ಮಾಸ್ ಸಿನಿಮಾ ಬೆಂಕಿ ತೆರೆಗೆ ಬರುತ್ತಿದೆ. ನಟನೆಯ ಜೊತೆ ನಿರ್ಮಾಣಕ್ಕೂ ಕೈ ಹಾಕಿರುವ ಅನೀಶ್ ತೇಜ್ವೇಶ್ವರ್ಗೆ, ಈ ಸಿನಿಮಾ ತುಂಬಾನೇ ಇಂಪಾರ್ಟೆಂಟ್. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್. ಬಾಬು ಪುತ್ರ ಶಾನ್ ಬೆಂಕಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅನೀಶ್ಗೆ ಜೋಡಿಯಾಗಿ ರೈಡರ್ ಸಿನಿಮಾ ಖ್ಯಾತಿಯ ಸಂಪದ ನಟಿಸಿದ್ದಾರೆ. ಅಣ್ಣ-ತಂಗಿ ಸೆಂಟಿಮೆಂಟ್ ಕಥೆಯ ಜೊತೆಗೆ, ಹಳ್ಳಿ ಸೊಗಡಿನ ಕಂಪು ಚೆಲ್ಲುವ ಈ ಚಿತ್ರ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದೆ.