ಕರ್ನಾಟಕ

karnataka

ETV Bharat / entertainment

140 ಸಿನಿಮಾಗಳಲ್ಲಿ ಅಭಿನಯ, 6 ಬಾರಿ ಸಿಎಂ ಹುದ್ದೆ!: ಜಯಲಲಿತಾ ವರ್ಣರಂಜಿತ ಬದುಕಿನ ಚಿತ್ರಣ

ಇಂದು ತಮಿಳುನಾಡಿನ 'ಅಮ್ಮ' ಮತ್ತು 'ತಮಿಳು ಸಿನಿಮಾ ರಾಣಿ' ಎಂದೇ ಪ್ರಖ್ಯಾತರಾಗಿದ್ದ ದಿವಂಗತ ಜಯರಾಂ​ ಜಯಲಲಿತಾ ಅವರ 75ನೇ ಹುಟ್ಟುಹಬ್ಬ.

jayalalithaa
ಜಯಲಲಿತಾ

By

Published : Feb 24, 2023, 4:41 PM IST

ಒಂದು ಕಾಲದಲ್ಲಿ ತಮಿಳುನಾಡಿನ ಚಲನಚಿತ್ರರಂಗ ಮತ್ತು ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದವರು ಜಯಲಲಿತಾ. 1948 ರ ಫೆಬ್ರವರಿ 24 ರಂದು ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಇವರು ಜನಿಸಿದ್ದರು. ಇವರ ಜೀವನ ಸುಖದ ಸುಪ್ಪತ್ತಿಗೆಯಿಂದ ಕೂಡಿತ್ತು ಎಂದೆನಿಸಿದರೂ, ಸಾಕಷ್ಟು ಏಳು-ಬೀಳುಗಳನ್ನೂ ಕಂಡುಂಡವರು. 43ನೇ ವಯಸ್ಸಿಗೆ ಮುಖ್ಯಮಂತ್ರಿಯಾದ ಜಯಾರನ್ನು ಅವರ ಬೆಂಬಲಿಗರು 'ಅಮ್ಮ' ಎಂದೇ ಪ್ರೀತಿಯಿಂದ ಸಂಬೋಧಿಸುತ್ತಿದ್ದರು. ಅಷ್ಟೇ ಅಲ್ಲ, ತಮಿಳುನಾಡಿನ ಐರನ್ ಲೇಡಿ ಎಂದು ಸಹ ಕರೆಯಲಾಗುತ್ತದೆ.

ಕೇವಲ 3 ವರ್ಷದವರಾಗಿದ್ದಾಗ ಜಯಲಲಿತಾ ಭರತನಾಟ್ಯ ಕಲಿತರು. 15ನೇ ವಯಸ್ಸಿನಲ್ಲಿ ಅವರ ತಾಯಿ ತಮಿಳು ಚಲನಚಿತ್ರೋದ್ಯಮಕ್ಕೆ ಸೇರಲು ಒತ್ತಾಯಿಸಿದರಂತೆ. ಆಗ ಅವರಿನ್ನೂ ವಿದ್ಯಾರ್ಥಿನಿ. 1960ರ ದಶಕದ ಮಧ್ಯಭಾಗದಲ್ಲಿ ತಾಯಿಯ ಕೋರಿಕೆಯ ಮೇರೆಗೆ ಪ್ರಮುಖ ಚಲನಚಿತ್ರ ನಟಿಯಾಗಿ ಹೊರಹೊಮ್ಮುತ್ತಾರೆ.

1961 ಮತ್ತು 1980ರ ನಡುವೆ ಜಯಲಲಿತಾ ಸುಮಾರು 140 ಚಿತ್ರಗಳಲ್ಲಿ ಕಾಣಿಸಿಕೊಂಡರು. ಹೆಚ್ಚಾಗಿ ತಮಿಳು, ತೆಲುಗು ಮತ್ತು ಕನ್ನಡದಲ್ಲಿ ನಟಿಸಿ ಸೈ ಎಸಿನಿಕೊಂಡರು. ನೃತ್ಯ ಸಾಮರ್ಥ್ಯ ಮತ್ತು ಬಹುಮುಖ ಪ್ರತಿಭೆಯನ್ನು ಗುರುತಿಸಿ ಜಯಲಲಿತಾ ಅವರನ್ನು 'ತಮಿಳು ಸಿನಿಮಾ ರಾಣಿ' ಎಂದೇ ಕರೆದು ಗೌರವಿಸಲಾಯಿತು.

ಇದನ್ನೂ ಓದಿ:ಜಯಲಲಿತಾ ಸಾವಿನ ತನಿಖೆ.. 590 ಪುಟಗಳ ವರದಿ ತಮಿಳುನಾಡು ಸರ್ಕಾರಕ್ಕೆ ಸಲ್ಲಿಕೆ

ವರ್ಣರಂಜಿತ ರಾಜಕೀಯ ಬದುಕು: 1977ರಲ್ಲಿ ಎಂ.ಜಿ.ರಾಮಚಂದ್ರನ್​ ಅವರು ತಮಿಳುನಾಡಿನ ಮುಖ್ಯಮಂತ್ರಿಯಾದಾಗ ಜಯಲಲಿತಾ ರಾಜಕೀಯ ಪ್ರವೇಶಿಸಿದರು. ನಂತರ 1982ರಲ್ಲಿ ಎಐಎಡಿಎಂಕೆ ಪಕ್ಷಕ್ಕೆ ಸೇರ್ತಾರೆ. 1983ರಲ್ಲಿ ತಿರುಚ್ಚೆಂದೂರು ವಿಧಾನಸಭೆಯ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸುತ್ತಾರೆ. 1984ರಲ್ಲಿ ತಮ್ಮ ಪಕ್ಷದ ವತಿಯಿಂದ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾಗುತ್ತಾರೆ. 1991 ರ ಚುನಾವಣೆಯಲ್ಲಿ ಗೆದ್ದ ನಂತರ ಜಯಲಲಿತಾ ತಮಿಳುನಾಡಿನ ಮೊದಲ ಮಹಿಳಾ ಮತ್ತು ಕಿರಿಯ ಮುಖ್ಯಮಂತ್ರಿಯಾದರು. ಆರು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಇದನ್ನೂ ಓದಿ:'ತಲೈವಿ' ಟೀಸರ್​​ ರಿಲೀಸ್​​: ಜಯಲಲಿತಾ ಪಾತ್ರದಲ್ಲಿ ಮಿಂಚಿದ ಕಂಗನಾ

ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಜಯಲಲಿತಾ ಸುಮಾರು 75 ದಿನಗಳ ಕಾಲ ಆಸ್ಪತ್ರೆಗೆ ದಾಖಲಾದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 5, 2016 ರಂದು ನಿಧನರಾದರು.

ಇದನ್ನೂ ಓದಿ:ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪಾತ್ರದಲ್ಲಿ ರಮ್ಯ ಕೃಷ್ಣ... ಫಸ್ಟ್​​ ಲುಕ್​​ ರಿಲೀಸ್​​​​

ABOUT THE AUTHOR

...view details