ETV Bharat Karnataka

ಕರ್ನಾಟಕ

karnataka

ETV Bharat / entertainment

ಸೆ.16 ರಾಷ್ಟ್ರೀಯ ಸಿನಿಮಾ ದಿನ.. ಮಲ್ಟಿಪ್ಲೆಕ್ಸ್​ಗಳಲ್ಲಿ ಚಿತ್ರ ವೀಕ್ಷಕರಿಗೆ ಬಂಪರ್​ ಆಫರ್​ - ಮಲ್ಟಿಪ್ಲೆಕ್ಸ್​ಗಳಲ್ಲಿ ಚಿತ್ರ ವೀಕ್ಷಕರಿಗೆ ಬಂಪರ್​

ಸೆ.16ಕ್ಕೆ ರಾಷ್ಟ್ರೀಯ ಸಿನಿಮಾ ದಿನ ಆಚರಣೆ ಮಾಡುವ ನಿಟ್ಟಿನಲ್ಲಿ ಅಂದು ಟಿಕೆಟ್‌ಗಳ ಬೆಲೆ ಕೇವಲ 75 ರೂಪಾಯಿ ಇರಲಿದೆ ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ತಿಳಿಸಿದೆ.

National Cinema Day
ರಾಷ್ಟ್ರೀಯ ಸಿನಿಮಾ ದಿನ
author img

By

Published : Sep 11, 2022, 2:50 PM IST

ಸೆ.16 ರಾಷ್ಟ್ರೀಯ ಸಿನಿಮಾ ದಿನ. ಈ ದಿನವನ್ನು ಆಚರಿಸಲು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (MAI) ಬಂಪರ್ ಆಫರ್ ಘೋಷಿಸಿದೆ. ಅಂದು ಚಲನಚಿತ್ರ ಟಿಕೆಟ್‌ಗಳ ಬೆಲೆ ಕೇವಲ 75 ರೂಪಾಯಿ ಇರಲಿದೆ.

ಸೆಪ್ಟೆಂಬರ್ 16 ರಂದು 'ರಾಷ್ಟ್ರೀಯ ಸಿನಿಮಾ ದಿನ'ವನ್ನು ಆಚರಿಸಲು ಕೇವಲ ರೂ.75 ಕ್ಕೆ ಚಲನಚಿತ್ರ ಟಿಕೆಟ್‌ ನೀಡಲಾಗುತ್ತಿದೆ ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಟ್ವೀಟ್‌ನಲ್ಲಿ ಈಗಾಗಲೇ ತಿಳಿಸಿದೆ.

ರಾಷ್ಟ್ರೀಯ ಸಿನಿಮಾ ದಿನವು 4,000ಕ್ಕೂ ಹೆಚ್ಚು ಪರದೆಗಳಲ್ಲಿ ನಡೆಯಲಿದೆ. ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಸ್ಟ್ರೀಮಿಂಗ್ ಸೇವೆಗಳು ನೀಡುವ ಅನುಕೂಲದೊಂದಿಗೆ ಸ್ಪರ್ಧಿಸಲು ಹೆಣಗಾಡುತ್ತಿರುವ ಚಿತ್ರಮಂದಿರಗಳಿಗೆ ಮರಳಲು ಈ ಒಂದು ದಿನದ ರಿಯಾಯಿತಿಯು ಹೆಚ್ಚಿನ ಜನರನ್ನು ಮನವೊಲಿಸುತ್ತದೆ ಎಂದು ಚಲನಚಿತ್ರ ಥಿಯೇಟರ್ ಮಾಲೀಕರು ಮತ್ತು ನಿರ್ವಾಹಕರು ನಂಬಿದ್ದಾರೆ.

ಇದನ್ನೂ ಓದಿ:ಸೈಮಾ ಅವಾರ್ಡ್ಸ್ 2022: ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ ಅತ್ಯುತ್ತಮ ನಟ ಪ್ರಶಸ್ತಿ

ಕೋವಿಡ್​ ವೇಳೆ ಚಿತ್ರಮಂದಿರಗಳು ಬಂದ್ ಆಗಿದ್ದವು. ಕೋವಿಡ್​ ನಿಯಮ, ಲಾಕ್​ಡೌನ್​ ತೆರವಿನ ಬಳಿಕ ಮಲ್ಟಿಪ್ಲೆಕ್ಸ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆ ಜನರಿಗೆ ಧನ್ಯವಾದ ತಿಳಿಸಲು ಜೊತೆಗೆ ಎಲ್ಲಾ ವರ್ಗದವರು ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ನೋಡಿ ಆನಂದಿಸಲು ಈ ಒಂದು ದಿನದ ರಿಯಾಯಿತಿ ನೀಡಲಾಗಿದೆ.

ABOUT THE AUTHOR

...view details