ಕರ್ನಾಟಕ

karnataka

By

Published : Jun 4, 2023, 11:05 PM IST

ETV Bharat / entertainment

ಸಂಜಯ್ ಪುರಣ್ ಸಿಂಗ್ ನಿರ್ದೇಶನದ 72 ಹುರೇನ್ ಚಿತ್ರದ ಟೀಸರ್ ಬಿಡುಗಡೆ

ಸಂಜಯ್ ಪುರಣ್ ಸಿಂಗ್ ಚೌಹಾಣ್ ನಿರ್ದೇಶನದ 72 ಹುರೇನ್ ಚಿತ್ರವು ಜುಲೈ 7ರಂದು ತೆರೆಗೆ ಬರಲು ಸಜ್ಜಾಗಿದೆ.

72-hoorain-teaser-out-watch-video
72 ಹುರೇನ್ ಚಿತ್ರದ ಟೀಸರ್ ಬಿಡುಗಡೆ

ಮುಂಬೈ (ಮಹಾರಾಷ್ಟ್ರ):ಸಂಜಯ್ ಪುರಣ್ ಸಿಂಗ್ ಚೌಹಾಣ್ ನಿರ್ದೇಶನದ 72 ಹುರೇನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಭಾನುವಾರ ಟೀಸರ್ ರಿಲೀಸ್ ಮಾಡುವ ಮೂಲಕ ನಿರ್ಮಾಪಕರು ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದು, ಜುಲೈ 7ರಂದು ಥಿಯೇಟರ್‌ಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ಭಯೋತ್ಪಾದನೆಯನ್ನು ಆಧರಿಸಿದ ಅದಾ ಶರ್ಮಾ ಅಭಿನಯದ 'ದಿ ಕೇರಳ ಸ್ಟೋರಿ' ಚಿತ್ರದ ನಂತರ 72 ಹುರೇನ್ ಎರಡನೇ ಚಿತ್ರವಾಗಿದೆ. ಸಂಜಯ್ ಪುರಣ್ ಸಿಂಗ್ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್​ ಅನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾನುವಾರ ಹಂಚಿಕೊಂಡಿದ್ದಾರೆ. ''72 ಕನ್ಯೆಯರನ್ನು ಕೆಟ್ಟ ಭ್ರಮೆಯಲ್ಲಿ ಸಿಲುಕಿಸಿ ಅವರು ವಿನಾಶದ ಹಾದಿಯಲ್ಲಿ ಸಾಗುತ್ತಾರೆ. ಅಂತಿಮವಾಗಿ ಭಯಾನಕ ಅಂತ್ಯವನ್ನು ಎದುರಿಸಬೇಕಾಗುತ್ತದೆ'' ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ, 51 ಸೆಕೆಂಡುಗಳ ಈ ಟೀಸರ್‌ನಲ್ಲಿ ಒಸಾಮಾ ಬಿನ್ ಲಾಡೆನ್, ಅಜ್ಮಲ್ ಕಸಬ್, ಯಾಕೂಬ್ ಮೆನನ್, ಮಸೂದ್ ಅಜರ್, ಹಫೀಜ್ ಸಯೀದ್ ಹಾಗೂ ಸಾದಿಕ್ ಸಯೀದ್​ನಂತಹ ಭಯೋತ್ಪಾದಕರು ಮತ್ತು ಉಗ್ರಗಾಮಿ ನಾಯಕರನ್ನು ಉಲ್ಲೇಖಿಸಲಾಗಿದೆ. ಇದೇ ಚಿತ್ರಕ್ಕಾಗಿ ಸಂಜಯ್ 2021ರಲ್ಲಿ ಅತ್ಯುತ್ತಮ ನಿರ್ದೇಶಕ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು.

ಅಶೋಕ್ ಪಂಡಿತ್ ನಿರ್ಮಾಣದ ಚಿತ್ರ 72 ಹುರೇನ್ ಚಿತ್ರವು ಗೋವಾದಲ್ಲಿ ನಡೆದ 2019ರ ಇಂಟರ್​ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI) ನಲ್ಲಿ ಭಾರತೀಯ ಪನೋರಮಾ ವಿಭಾಗದ ಅಡಿಯಲ್ಲಿ 72 ಹುರೇನ್ ಪ್ರಥಮ ಪ್ರದರ್ಶನಗೊಂಡಿತು. ಅಲ್ಲಿ ಚಿತ್ರವು ಐಸಿಎಫ್​ಟಿ - ಯುನೆಸ್ಕೋ ಗಾಂಧಿ ಪದಕವನ್ನು ಪಡೆದಿತ್ತು. 2021ರಲ್ಲಿ ಚೌಹಾಣ್ ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು. ಸಾರಥಿ ಎಂಟರ್‌ಟೈನ್‌ಮೆಂಟ್ ಮತ್ತು ಏಲಿಯನ್ಸ್ ಪಿಕ್ಚರ್ಸ್ ನಿರ್ಮಿಸಿರುವ 72 ಹುರೇನ್ ಚಿತ್ರದ ಕತೆಯನ್ನು ಅನಿಲ್ ಪಾಂಡೆ ಮತ್ತು ಜುನೈದ್ ವಾಸಿ ಬರೆದಿದ್ದಾರೆ. ಇದೀಗ ನಾಲ್ಕು ವರ್ಷಗಳ ನಂತರ ಜುಲೈ 7ರಂದು ಚಿತ್ರಮಂದಿರದಲ್ಲಿ ತೆರೆಗೆ ಬರಲು ಸಜ್ಜಾಗಿದೆ.

ನಿರ್ದೇಶಕ ಸುದೀಪ್ತೋ ಸೇನ್ ಆ್ಯಕ್ಷನ್​ ಕಟ್​​ ಕೇಳಿರುವ 'ದಿ ಕೇರಳ ಸ್ಟೋರಿ' ಮೇ 5ರಂದು ಬಿಡುಗಡೆಯಾಗಿದೆ. ಇದುವರೆಗೆ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಒಟ್ಟು 234 ಕೋಟಿ ರೂಪಾಯಿ ಗಳಿಸಿದೆ. ಚಿತ್ರ ತೆರೆಕಂಡ 30ನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ 1.60 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಇದನ್ನೂ ಓದಿ:2023ರಲ್ಲಿ ಅತಿ ಹೆಚ್ಚು ಕಲೆಕ್ಷನ್​​ ಮಾಡಿದ 2ನೇ ಹಿಂದಿ ಸಿನಿಮಾ 'ದಿ ಕೇರಳ ಸ್ಟೋರಿ'

ABOUT THE AUTHOR

...view details