ಕರ್ನಾಟಕ

karnataka

ETV Bharat / entertainment

ಒಂದೇ ಚಿತ್ರದಲ್ಲಿ ಕಮಲ್​ ಹಾಸನ್​, ಸೂರ್ಯ ಸೇರಿ ಏಳು ಸ್ಟಾರ್ ಹೀರೋಗಳು ! ಹಾಟ್​ ಟಾಪಿಕ್​ ಆದ ಸಿನಿ ಕಟ್ಟೆ - ಹಾಟ್​ ಟಾಪಿಕ್​

‘ವಿಕ್ರಮ್’ ಸಿನಿಮಾದಲ್ಲಿ ಡ್ರಗ್ಸ್ ಮಾಫಿಯಾ ಆಳುವ ರೋಲೆಕ್ಸ್ ಪಾತ್ರದಲ್ಲಿ ನಟ ಸೂರ್ಯ ಮಿಂಚಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ಬರುವ ಅವರ ಪಾತ್ರ ಸಂಕ್ಷಿಪ್ತವಾಗಿದ್ದರೂ ಥಿಯೇಟರ್​ನಲ್ಲಿ ಧೂಳ್​ ಎಬ್ಬಿಸಿತ್ತು. ಸದ್ಯ ಸಹೋದರರಾದ ಸೂರ್ಯ ಮತ್ತು ಕಾರ್ತಿ ಅವರನ್ನು ಬೆಳ್ಳಿತೆರೆಯಲ್ಲಿ ಒಂದೇ ಚೌಕಟ್ಟಿನಲ್ಲಿ ನೋಡಲು ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ.

7 star heroes in lokesh kanagaraj vijay 67 movie
ವಿಕ್ರಮ್ ಚಿತ್ರ ತಂಡ

By

Published : Dec 13, 2022, 4:57 PM IST

ಲೋಕೇಶ್ ಕನಕರಾಜ್ ನಿರ್ದೇಶನದ ಬಹುತಾರಾಗಣದ ಅದ್ಧೂರಿ ಚಿತ್ರವೊಂದು ಸಿದ್ಧಗೊಳ್ಳುತ್ತಿದೆ. ವಿಜಯ್ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದಾಗಿದ್ದು ಲೋಕೇಶ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಅದ್ಧೂರಿ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಏಳು ಜನ ನಟರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರಂತೆ.

ಲೋಕೇಶ್ ಕನಕರಾಜ್ ಮತ್ತು ಕಮಲ್​ ಹಾಸನ್

ಹೈಬಜೆಟ್​ನಲ್ಲಿ ಚಿತ್ರ ತಯಾರಾಗುತ್ತಿದ್ದು ಈಗಾಗಲೇ ಪ್ರೋಮೋ ಶೂಟ್ ಕೂಡ ಕಂಪ್ಲೀಟ್ ಆಗಿದೆಯಂತೆ. ಹಾಗಾಗಿ ಇವರ ಮುಂದಿನ ಚಿತ್ರ ಸಿನಿ ಕಟ್ಟೆಯಲ್ಲಿ ಹಾಟ್​ ಟಾಪಿಕ್​ ಆಗಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಲೋಕೇಶ್ ಕನಕರಾಜ್, ತಮ್ಮ ಮುಂದಿನ ಚಿತ್ರದ​ ಬಗ್ಗೆ ಬಹಿರಂಗಪಡಿಸಿದ್ದಾರೆ.

ವಿಕ್ರಮ್ ಚಿತ್ರ ತಂಡ

ಸದ್ಯ ತಾವು ವಿಜಯ್ ಅವರೊಂದಿಗೆ ಬಿಗ್​ ಬಜೆಟ್​ನ ಸಿನಿಮಾ ಮಾಡುತ್ತಿದ್ದೇವೆ. ಚಿತ್ರದಲ್ಲಿ ವಿಜಯ್ ಜೊತೆಗೆ ಕಮಲ್ ಹಾಸನ್, ಸೂರ್ಯ, ಕಾರ್ತಿ, ಸಂಜಯ್ ದತ್, ವಿಜಯ್ ಸೇತುಪತಿ ಮತ್ತು ಫಹದ್ ಫಾಜಿಲ್ ಪರದೆ ಹಂಚಿಕೊಳ್ಳಲಿದ್ದಾರೆ. 'ವಿಕ್ರಮ್' ಚಿತ್ರದ ಕೊನೆಯಲ್ಲಿ ಬರುವ ಸೂರ್ಯ ಅವರ ಅತಿಥಿ ಪಾತ್ರದಂತೆ ಈ ಚಿತ್ರದಲ್ಲಿಯೂ ಆ ಆರು ಸ್ಟಾರ್ ಹೀರೋಗಳು ಬಂದು ಹೋಗಲಿದ್ದಾರೆ. ಹಾಗಾಗಿ ಇದೊಂದು ದೊಡ್ಡ ಪ್ರಾಸಕ್ಟ್​​ ಆಗಲಿದೆ. ಚಿತ್ರರಂಗದಲ್ಲಿ ಈ ರೀತಿಯ ಸ್ಟಾರ್​ ಹೀರೋಗಳು ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಇದೇ ಮೊದಲು ಎಂದಿದ್ದಾರೆ.

ವಿಕ್ರಮ್ ಚಿತ್ರ

ಮುಂದಿನ 10 ವರ್ಷಕ್ಕೆ ಬೇಕಾದಷ್ಟು ಸಿನಿಮಾಗಳ ಶೆಡ್ಯೂಲ್ ನನ್ನಲ್ಲಿದೆ. ಸದ್ಯ ಇಳಯದಳಪತಿ ವಿಜಯ್ ಮುಂದಿನ ನನ್ನ ನಾಯಕ ನಟ. ಇದಾದ ನಂತರ ಕಮಲ್ ಹಾಸನ್ ಸರ್ ಜೊತೆ ಕುಳಿತು ಮಾತನಾಡುವೆ. ಬಳಿಕವೇ ‘ವಿಕ್ರಮ್’ ಸಿನಿಮಾದ ಸೀಕ್ವೆಲ್ ಬರಳಿದೆ. ಇದಾದ ಬಳಿಕ 'ಖೈದಿ 2' ಶುರುವಾಗಲಿದೆ.

ಲೋಕೇಶ್ ಕನಕರಾಜ್ ಮತ್ತು ವಿಜಯ್​

ಉತ್ತಮ ಕಂಟೆಂಟ್ ಇರುವುದರಿಂದ ಸಿನಿಮಾ ಯಾವಾಗ ತೆರೆಗೆ ಬರುತ್ತೆ ಅಂತ ಈಗ ಹೇಳಲಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಈ ಚಿತ್ರಗಳು ತೆರೆಗೆ ಬರುವುದು ಬದಲಾಗಲುಬಹುದು. ಯಾವುದಕ್ಕೂ ಕಾದುನೋಡಿ ಎಂದು ಸಸ್ಪೆನ್ಸ್​ಗೆ ಅರ್ಧ ವಿರಾಮ ಇಟ್ಟಿದ್ದಾರೆ. ಸಹೋದರರನ್ನು (ಸೂರ್ಯ ಮತ್ತು ಕಾರ್ತಿ) ಒಟ್ಟಿಗೆ ತೆರೆ ಮೇಲೆ ತರುವ ಪ್ರಯತ್ನಕ್ಕೆ ಫ್ಯಾನ್ಸ್​ ಕಾದುಕುಳಿತಿದ್ದಾರೆ.

ಇನ್ನು ವಿಜಯ್ ಜೊತೆಗಿನ ಸಿನಿಮಾ ಘೋಷಣೆಯಾಗುತ್ತಿದ್ದಂತೆ ಲೋಕೇಶ್ ಅಭಿಮಾನಿಗಳ ಕ್ರೇಜ್​​ ಇನ್ನಷ್ಟು ಹೆಚ್ಚಾಗಿದೆ. ಇದು ಯೂನಿವರ್ಸ್ ಸಿನಿಮಾ ಆಗಿರುವುದರಿಂದ ವಿಜಯ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಲೋಕೇಶ್ ಕನಕರಾಜ್ ಭಾರತೀಯ ಚಿತ್ರರಂಗದ ಹಾಟೆಸ್ಟ್ ನಿರ್ದೇಶಕರಲ್ಲಿ ಒಬ್ಬರು. ಬೆರಳೆಣಿಕೆ ಸಿನಿಮಾ ಮಾಡಿದರೂ ಒಳ್ಳೆಯ ನಿರ್ದೇಶಕ ಎಂಬ ಬಿರುದು ಪಡೆದವರು. ಇತ್ತೀಚೆಗೆ ತೆರೆಕಂಡ ಇವರ ನಿರ್ದೇಶನದ 'ವಿಕ್ರಮ್' 400 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಇದನ್ನೂ ಓದಿ:ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಆರ್​ಆರ್​​ಆರ್​ ನಾಮ ನಿರ್ದೇಶನ.. ಧನ್ಯವಾದ ಅರ್ಪಿಸಿದ ರಾಜಮೌಳಿ

ABOUT THE AUTHOR

...view details