ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜೇತರಿಗೆ ಪ್ರತಿಷ್ಟಿತ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಚಿತ್ರರಂಗದ ಅನೇಕ ಕಲಾವಿದರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
- ಟಾಲಿವುಡ್ ನಟ ಅಲ್ಲು ಅರ್ಜುನ್ - 'ಪುಷ್ಪ: ದಿ ರೈಸ್' ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ
- ಹಿರಿಯ ನಟಿ ವಹೀದಾ ರೆಹಮಾನ್ - ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
- ಬಾಲಿವುಡ್ ನಟಿ ಅಲಿಯಾ ಭಟ್ - 'ಗಂಗೂಬಾಯಿ ಕಥಿವಾಡಿ' ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ
- ಬಾಲಿವುಡ್ ನಟಿ ಪಲ್ಲವಿ ಜೋಶಿ - 'ದಿ ಕಾಶ್ಮೀರಿ ಫೈಲ್ಸ್' ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
- ಬಾಲಿವುಡ್ ನಟ ಪಂಕಜ್ ತ್ರಿಪಾಠಿ - 'ಮಿಮಿ' ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ
- ನಿರ್ಮಾಪಕ ವರ್ಗೀಸ್ ಮೂಲನ್ - 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
- ನಟ ಹಾಗೂ ನಿರ್ದೇಶಕ ಆರ್.ಮಾಧವನ್ - 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
- ನಟಿ ಕೃತಿ ಸನೋನ್ - 'ಮಿಮಿ' ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ
- ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ - 'ಚಾರ್ಲಿ' ಕನ್ನಡದ ಅತ್ಯುತ್ತಮ ಚಿತ್ರ
- ನಿರ್ದೇಶಕ ಕಿರಣ್ ರಾಜ್ - 'ಚಾರ್ಲಿ' ಕನ್ನಡದ ಅತ್ಯುತ್ತಮ ಚಿತ್ರ
- ಎಂ.ಎಂ.ಕೀರವಾಣಿ - 'ಆರ್ಆರ್ಆರ್' ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ
- 'ಸರ್ದಾರ್ ಉದಾಮ್' ಚಿತ್ರಕ್ಕೆ ಅತ್ಯುತ್ತಮ ಹಿಂದಿ ಚಲನಚಿತ್ರ ಪ್ರಶಸ್ತಿ
- ನಿರ್ದೇಶಕ ವಿಷ್ಣು ವರಧನ್ - 'ಶೇರ್ಷಾ' ಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ
-
ನಿರ್ದೇಶಕ ಪ್ರೇಮ್ ರಕ್ಷಿತ್ - 'RRR' ಚಿತ್ರಕ್ಕಾಗಿ ಅತ್ಯುತ್ತಮ ನೃತ್ಯ ಸಂಯೋಜಕ ಪ್ರಶಸ್ತಿ
- ಅತ್ಯುತ್ತಮ ಮಲಯಾಳಂ ಚಲನಚಿತ್ರ ವಿಭಾಗದಲ್ಲಿ 'ಹೋಮ್' ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
- ಗಾಯಕಿ ಶ್ರೇಯಾ ಘೋಷಾಲ್ - 'ಇರವಿನ್ ನಿಜಲ್' ಚಿತ್ರದ 'ಮಾಯವ ಚಾಯವ' ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ
-
ಅತ್ಯುತ್ತಮ ಹಿನ್ನೆಲೆ ಗಾಯಕ: ಕಾಲ ಭೈರವ (RRR)
- ಆರೋಗ್ಯಕರ ಮನರಂಜನೆಯನ್ನು ನೀಡಿದ ಅತ್ಯುತ್ತಮ ಜನಪ್ರಿಯ ಚಲನಚಿತ್ರ - RRR
- ಭವಿನ್ ರಬರಿ, ಚೆಲೋ ಶೋ - ಅತ್ಯುತ್ತಮ ಬಾಲ ಕಲಾವಿದ
-
ಅತ್ಯುತ್ತಮ ಚಿತ್ರಕಥೆ (Original): ಶಾಹಿ ಕಬೀರ್, (ನಯತ್ತು)
- ಅತ್ಯುತ್ತಮ ಚಿತ್ರಕಥೆ (Adapted): ಸಂಜಯ್ ಲೀಲಾ ಬನ್ಸಾಲಿ ಮತ್ತು ಉತ್ಕರ್ಷಿಣಿ ವಶಿಷ್ಠ (ಗಂಗೂಬಾಯಿ ಕಥಿವಾಡಿ)
- ಅತ್ಯುತ್ತಮ ಸಂಭಾಷಣೆಕಾರ: ಉತ್ಕರ್ಷಿಣಿ ವಶಿಷ್ಠ ಮತ್ತು ಪ್ರಕಾಶ್ ಕಪಾಡಿಯಾ (ಗಂಗೂಬಾಯಿ ಕಥಿವಾಡಿ)
- ಅತ್ಯುತ್ತಮ ಸಂಗೀತ ನಿರ್ದೇಶಕ: ದೇವಿ ಶ್ರೀ ಪ್ರಸಾದ್ (ಪುಷ್ಪ)
- ಅತ್ಯುತ್ತಮ ಸಾಹಿತ್ಯ: ಚಂದ್ರಬೋಸ್ (ಕೊಂಡ ಪೊಲಂ ಸಿನಿಮಾದ ಧಂ ಧಂ ಧಂ ಹಾಡು)
-
ಅತ್ಯುತ್ತಮ ತಮಿಳು ಚಿತ್ರ: ಕಡೈಸಿ ವಿವಾಸಾಯಿ
- ಅತ್ಯುತ್ತಮ ತೆಲುಗು ಚಿತ್ರ: ಉಪ್ಪೇನಾ
- ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರಕ್ಕಾಗಿ ಇಂದಿರಾ ಗಾಂಧಿ ಪ್ರಶಸ್ತಿ: ಮೆಪ್ಪಾಡಿಯನ್, ವಿಷ್ಣು ಮೋಹನ್
- ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್: ವೀರ ಕಪೂರ್ ಈ (ಸರ್ದಾರ್ ಉಧಮ್)
- ಅತ್ಯುತ್ತಮ ಸಂಕಲನ: ಸಂಜಯ್ ಲೀಲಾ ಬನ್ಸಾಲಿ (ಗಂಗೂಬಾಯಿ ಕಥಿಯಾವಾಡಿ)
- ಅತ್ಯುತ್ತಮ ಸಾಹಸ ನಿರ್ದೇಶನ: ಕಿಂಗ್ ಸೊಲೊಮನ್ (RRR)
ಪ್ರತಿಷ್ಟಿತ ಸಮಾರಂಭ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿದೆ. ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಉಪಸ್ಥಿತರಿದ್ದಾರೆ.