ನವದೆಹಲಿ: ಭಾರತೀಯ ಚಿತ್ರರಂಗದ ಹಿರಿಯ ನಟಿ ಆಶಾ ಪಾರೇಖ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶಾ ಪಾರೇಖ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಆಶಾ ಪಾರೇಖ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಆಶಾ ಪಾರೇಖ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಆಶಾ ಪಾರೇಖ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ 2020ನೇ ಸಾಲಿನ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ನಟಿ ಆಶಾ ಪರೇಖ್, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಸಂದ ದೊಡ್ಡ ಗೌರವವಾಗಿದೆ. ನನ್ನ 80ನೇ ಹುಟ್ಟುಹಬ್ಬದ ಒಂದು ದಿನದ ಮೊದಲೇ ನನಗೆ ಈ ಮನ್ನಣೆ ಸಿಕ್ಕಿರುವುದು ತುಂಬಾ ಕೃತಜ್ಞರಾಗಿರುವಂತೆ ಮಾಡಿದೆ ಎಂದು ಹೇಳಿದರು.
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರಮುಖ ವಿಜೇತರು
- ಅತ್ಯುತ್ತಮ ಚಲನಚಿತ್ರ - ಸೂರರೈ ಪೊಟ್ರು
- ಅತ್ಯುತ್ತಮ ನಿರ್ದೇಶಕ - ಸಚ್ಚಿದಾನಂದನ್ ಕೆಆರ್ (ಅಯ್ಯಪ್ಪನಂ ಕೊಶಿಯುಮ್)
- ಅತ್ಯುತ್ತಮ ಜನಪ್ರಿಯ ಮನರಂಜನೆ ಚಲನಚಿತ್ರ - ತಾನ್ಹಾಜಿ
- ಅತ್ಯುತ್ತಮ ನಟ - ಸೂರ್ಯ (ಸೂರರೈ ಪೊಟ್ರು), ಅಜಯ್ ದೇವಗನ್ (ತಾನ್ಹಾಜಿ)
- ಅತ್ಯುತ್ತಮ ನಟಿ - ಅಪರ್ಣಾ ಬಾಲಮುರಳಿ (ಸೂರರೈ ಪೊಟ್ರು)
- ಅತ್ಯುತ್ತಮ ಪೋಷಕ ನಟ - ಬಿಜು ಮೆನನ್ (ಅಯ್ಯಪ್ಪನಂ ಕೊಶಿಯುಮ್)
- ಅತ್ಯುತ್ತಮ ಪೋಷಕ ನಟಿ - ಲಕ್ಷ್ಮಿ ಪ್ರಿಯಾ ಚಂದ್ರಮೌಳಿ (ಶಿವರಂಜನಿಯುಂ ಇನ್ನಂ ಸಿಲಾ ಪೆಂಗಲ್ಲುಮ್)
Last Updated : Sep 30, 2022, 8:10 PM IST