ಕರ್ನಾಟಕ

karnataka

ETV Bharat / entertainment

ನಟನೆ ಜೊತೆ ರೆಸ್ಟೋರೆಂಟ್ ಉದ್ಯಮದಲ್ಲೂ ಮಿಂಚಿದ ಬಾಲಿವುಡ್​ ತಾರೆಯರು

ಉದ್ಯಮದಲ್ಲಿ ಭವಿಷ್ಯವಿದೆ ಎಂಬುದನ್ನು ಅರಿತುಕೊಂಡಿರುವ ಈ ತಾರೆಯರು ನಟನೆಯ ಜೊತೆಗೆ ಈ ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳುತ್ತಿದ್ದಾರೆ.

By

Published : Oct 24, 2022, 6:56 PM IST

5 Bollywood celebrities who are restaurant owners
5 Bollywood celebrities who are restaurant owners

ಹಲವು ಸಿನಿಮಾ ತಾರೆಯರು ಇತ್ತೀಚೆಗೆ ನಟನೆ ಜೊತೆಗೆ ಬಗೆ ಬಗೆಯ ಉದ್ಯಮದಲ್ಲಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಯಾರು, ಯಾವ ಉದ್ಯಮ ನಡೆಸುತ್ತಿದ್ದಾರೆ ಎಂಬುದರ ಮಾಹಿತಿ ತಿಳಿಯೋಣ..

ಬಾಲಿವುಡ್​ನ ನಟಿ ಪ್ರಿಯಾಂಕಾ ಚೋಪ್ರಾ, ಜಾಕ್ವೆಲಿನ್​​ ಫರ್ನಾಂಡಿಸ್‌, ಶಿಲ್ಪಾ ಶೆಟ್ಟಿ, ಅರ್ಜುನ್​ ರಾಂಪಾಲ್​, ಡಿನೋ ಮೋರಿಯಾ ಸೇರಿದಂತೆ ಹಲವು ತಾರೆಯರು ಐಷಾರಾಮಿ ಹೋಟೆಲ್​, ರೆಸ್ಟೋರೆಂಟ್, ಪಬ್​​ ಸೇರಿದಂತೆ ಆಹಾರೋದ್ಯಮದಲ್ಲಿ ಗುರುತಿಸಿಕೊಳ್ಳುವ ಮೂಲಕ ತಮ್ಮ ಆದಾಯವನ್ನು ಸಹ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸದ್ಯ ತಮ್ಮದೇ ಆದ ಐಷಾರಾಮಿ ರೆಸ್ಟೋರೆಂಟ್‌ ಮತ್ತು ಹೋಟೆಲ್​ ಹೊಂದಿರುವ ಇವರು ಇದನ್ನು ಪ್ರಾರಂಭಿಸುವುದಕ್ಕೆ ಆಹಾರದ ಮೇಲಿನ ಪ್ರೀತಿಯೂ ಒಂದು ಮೂಲ ಕಾರಣವಂತೆ.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ:ನಟಿಯಾಗಿ, ನಿರ್ಮಾಪಕಿಯಾಗಿ, ಬರಹಗಾರ್ತಿ ಆಗಿ ಗಮನ ಸೆಳೆದಿರುವ ನಟಿ ಪಿಗ್ಗಿ ನಟಿ, ಐಷಾರಾಮಿ ರೆಸ್ಟೋರೆಂಟ್‌ ಮಾಲೀಕರೂ ಹೌದು. ಸೋನಾ ರೆಸ್ಟೊರೆಂಟ್​ ಮೂಲಕ ಆಹಾರ ಮತ್ತು ಆತಿಥ್ಯದ ಕ್ಷೇತ್ರದಲ್ಲಿ ತಮ್ಮ ರೆಕ್ಕೆಯನ್ನು ವಿಸ್ತರಿಸಿಕೊಂಡಿರುವ ಅವರು ಇನ್ನಿತರ ಮಹಿಳೆಯರಿಗೂ ಮಾದರಿಯಾಗಿದ್ದಾರೆ. ಇದನ್ನು ಅವರು 'ಮಿಮಿ' ಎಂದು ಕರೆಯುತ್ತಾರೆ.

ಜಾಕ್ವೆಲಿನ್ ಫರ್ನಾಂಡಿಸ್

ಜಾಕ್ವೆಲಿನ್ ಫರ್ನಾಂಡಿಸ್: 2017 ರಲ್ಲಿ ಕೊಲಂಬೊದಲ್ಲಿ ಈ ನಟಿ ತಮ್ಮ ಮೊದಲ ರೆಸ್ಟೋರೆಂಟ್ ಅನ್ನು ಸ್ಥಾಪಿಸುವ ಮೂಲಕ ಉದ್ಯಮಕ್ಕೆ ಕಾಲಿಟ್ಟರು. ಕೇಮಾ ಸೂತ್ರ ಎಂದು ಕರೆಯಲಾಗುವ ರೆಸ್ಟೋರೆಂಟ್‌ 5-ಸ್ಟಾರ್ ಹೋಟೆಲ್‌ ಆಗಿದ್ದು ಶಾಂಗ್ರಿ-ಲಾ ಎಂಬ ಪ್ರದೇಶದಲ್ಲಿದೆ. ಪ್ರಸಿದ್ಧ ಬಾಣಸಿಗ ದರ್ಶನ್ ಮುನಿದಾಸ ಸಹಭಾಗಿತ್ವದಲ್ಲಿ ಹೋಟೆಲ್‌ ತೆರೆಯಲಾಗಿದೆಯಂತೆ.

ಅರ್ಜುನ್ ರಾಂಪಾಲ್

ಅರ್ಜುನ್ ರಾಂಪಾಲ್: ಅರ್ಜುನ್ 2009 ರಲ್ಲಿ ಆತಿಥ್ಯ ಉದ್ಯಮಕ್ಕೆ ಪ್ರವೇಶಿಸಿದರು. ಲ್ಯಾಪ್​ (LAP) ಎಂಬ ಪ್ರೀಮಿಯಂ ನೈಟ್‌ಕ್ಲಬ್ ತೆರೆಯುವ ಮೂಲಕ ತಾವೂ ಕೂಡ ಓರ್ವ ಉದ್ಯಮಿ ಎಂಬುದನ್ನು ಸಾಬೀತು ಮಾಡಿದರು. ಸಾಮ್ರಾಟ್‌ನ ಭಾಗವಾಗಿ ಈ ಹೋಟೆಲ್​ ಅನ್ನು ತೆರೆಯಲಾಗಿದ್ದು, ಅದ್ಧೂರಿಯುತ ಪಾರ್ಟಿ ಮಾಡುವವರಿಗೆ ಇದು ಸೂಕ್ತವಾದ ವಾತಾವರಣವನ್ನು ಹೊಂದಿದೆ.

ಶಿಲ್ಪಾ ಶೆಟ್ಟಿ ಕುಂದ್ರಾ

ಶಿಲ್ಪಾ ಶೆಟ್ಟಿ ಕುಂದ್ರಾ: ಇವರು ಮುಂಬೈನ ಬಾಸ್ಟಿಯನ್ ರೆಸ್ಟೋರೆಂಟ್ ಫ್ರಾಂಚೈಸಿಯ ಸಹ-ಮಾಲೀಕರಾಗಿದ್ದಾರೆ. 2019 ರಲ್ಲಿ ಬಾಸ್ಟಿಯನ್ ಹಾಸ್ಪಿಟಾಲಿಟಿಯಲ್ಲಿ ಶೇ. 50 ಪಾಲನ್ನು ಖರೀದಿಸುವ ಮೂಲಕ ಉದ್ಯಮಕ್ಕೆ ಧುಮುಕಿದರು. ಇದು ಸುಂದರ ಮೇಲ್ಛಾವಣಿ ಮತ್ತು ಬಣ್ಣ ಬಣ್ಣದ ಪೀಠೋಪಕರಣಗಳನ್ನು ಹೊಂದಿರುವ ಶ್ರೀಮಂತ ರೆಸ್ಟೋರೆಂಟ್ ಆಗಿದೆ.

ಡಿನೋ ಮೋರಿಯಾ

ಡಿನೋ ಮೋರಿಯಾ:ಸಹೋದರನ ಸಹಕಾರಿಂದ ಡಿನೋ ಮೋರಿಯಾ ಕ್ರೇಪ್ ಸ್ಟೇಷನ್ ಕೆಫೆ ಎಂಬ ಐಷಾರಾಮಿ ರೆಸ್ಟೋರೆಂಟ್​ ತೆರೆಯುವ ಮೂಲಕ ಉದ್ಯಮಿ ಕೂಡ ಆದರು. ರುಚಿಕರ ಮತ್ತು ಸಂತೋಷಕರವಾದ ಯುರೋಪಿಯನ್ ಭಕ್ಷ್ಯಗಳನ್ನು ಒದಗಿಸುವ ರೆಸ್ಟೋರೆಂಟ್ ಆಗಿದ್ದು, ಬಾಯಲ್ಲಿ ನೀರೂರಿಸುವ ದೋಸೆಯಿಂದ ಫೇಮಸ್.

ABOUT THE AUTHOR

...view details