ಚೆನ್ನೈ(ತಮಿಳುನಾಡು): ನಂದಂಬಾಕ್ಕಂನ ಡಿಫೆನ್ಸ್ ಕಾಲೊನಿಯಲ್ಲಿರುವ ನಟ ರಾಧಾಕೃಷ್ಣನ್ ಅವರ ಮನೆಗೆ ಮೂವರು ಅಪರಿಚಿತ ವ್ಯಕ್ತಿಗಳು ನುಗ್ಗಿ ಅವರ ಪತ್ನಿಯನ್ನು ಕಟ್ಟಿಹಾಕಿ 250 ಪವನ್ ಚಿನ್ನಾಭರಣಗಳೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.
ನಟ ರಾಧಾಕೃಷ್ಣ ಅವರ ಪತ್ನಿ ರಾಜಿ ಮನೆಯಲ್ಲಿ ಒಬ್ಬರೇ ಇದ್ದಾಗ ಏಕಾಏಕಿ ಮೂವರ ತಂಡ ಮನೆಗೆ ನುಗ್ಗಿ ಚಾಕುವಿನಿಂದ ಬೆದರಿಸಿ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿದ್ದಾರೆ. ಈ ವೇಳೆ ಮನೆಯಲ್ಲಿದ್ದ 250 ಪವನ್ ಚಿನ್ನಾಭರಣ ಹಾಗೂ 3 ಲಕ್ಷ ನಗದು ದೋಚಿ ಕಳ್ಳರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಈ ಕುರಿತು ಅಕ್ಕಪಕ್ಕದ ಜನರು ಠಾಣೆಗೆ ಮಾಹಿತಿ ನೀಡಿದ್ದಾರೆ. ನಂದಂಬಾಕ್ಕಂ ಪೊಲೀಸರು ಬೆರಳಚ್ಚು ತಜ್ಞರು ಮತ್ತು ಸ್ನಿಫರ್ ಶ್ವಾನಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.