ತಿರುವನಂತಪುರಂ: ನಟ ಟೋವಿನೋ ಥಾಮಸ್ ಅಭಿನಯದ ಮಲಯಾಳಂ ಚಿತ್ರ '2018 ಎವೆರಿವನ್ ಈಸ್ ಎ ಹೀರೋ' ವಿಶ್ವಾದ್ಯಂತ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಎಲ್ಲೆಡೆಯಿಂದ ಬರುತ್ತಿರುವ ಅಪಾರ ಮೆಚ್ಚುಗೆ ಚಿತ್ರದ ಬಲ ಹೆಚ್ಚಿಸಿದೆ. ಸಿನಿಮಾ ಪ್ರದರ್ಶನಗೊಂಡ 9 ದಿನದಲ್ಲೇ ಕೇರಳವೊಂದರಲ್ಲೇ ಸುಮಾರು 5.18 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಮಾಲಿವುಡ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ವಿಶ್ವಾದ್ಯಂತ ಮೊದಲ 9 ದಿನದಲ್ಲಿ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ₹100 ಕೋಟಿಯತ್ತ ದಾಪುಗಾಲಿಡುತ್ತಿದೆ.
ಮಾಲಿವುಡ್ ಇತಿಹಾಸದಲ್ಲಿ ಸಿನಿಮಾವೊಂದು ಬಿಡುಗಡೆಯಾದ ದಿನದಿಂದಲೇ ಇಷ್ಟೊಂದು ಗಳಿಕೆ ಮಾಡಿರುವುದು ಇದೇ ಮೊದಲು. ಅಲ್ಲದೇ, ಹೊರ ರಾಜ್ಯ, ದೇಶಗಳಿಂದ ಸಹ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಇದು 2018 ರಲ್ಲಿ ನಡೆದ ನಿಜವಾದ "ದಿ ಕೇರಳ ಸ್ಟೋರಿ" ಎನ್ನುತ್ತಾರೆ ಅಭಿಮಾನಿಗಳು.
ಇದನ್ನೂ ಓದಿ :ಸುದೀಪ್ , ಯಶ್ ದಿವ್ಯಮೌನ... ಶಿವಣ್ಣ, ಧ್ರುವ, ವಿಜಿ ಕೈಯಲ್ಲಿ ಕನ್ನಡ ಚಿತ್ರರಂಗದ ತೇರು
ಜೂಡ್ ಆಂಥೋನಿ ಜೋಸೆಫ್ ನಿರ್ದೇಶನದಲ್ಲಿ ಮೇ 5 ರಂದು ಬಿಡುಗಡೆಯಾದ ಮಾಲಿವುಡ್ನ ಅತಿ ದೊಡ್ಡ ಬಜೆಟ್ನ ಚಿತ್ರ '2018 ಎವ್ರಿವನ್ ಈಸ್ ಎ ಹೀರೋ'ದಲ್ಲಿ ಟೋವಿನೋ ಥಾಮಸ್, ಆಸಿಫ್ ಅಲಿ, ಗುಂಜಾಕೊ ಬೋಬನ್, ಲಾಲ್, ನರೇನ್, ವಿನೀತ್ ಶ್ರೀನಿವಾಸನ್, ಅಪರ್ಣಾ ಬಾಲಮುರಳಿ, ತನ್ವಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.