ಕರ್ನಾಟಕ

karnataka

ETV Bharat / entertainment

ಆಸ್ಕರ್​ ಪ್ರವೇಶಿಸಿದ '2018': ರಜನಿಕಾಂತ್ ಕಾಲಿಗೆ ಬಿದ್ದು​ ಆಶೀರ್ವಾದ ಪಡೆದುಕೊಂಡ ನಿರ್ದೇಶಕ ಜೂಡ್​ ಆಂಥೋನಿ - ಈಟಿವಿ ಭಾರತ ಕನ್ನಡ

'2018: ಎವ್ರಿಒನ್​​ ಈಸ್ ಎ ಹೀರೋ' ಸಿನಿಮಾದ ಆಸ್ಕರ್​ ಪ್ರಚಾರಕ್ಕಾಗಿ ನಿರ್ದೇಶಕ ಜೂಡ್​ ಆಂಥೋನಿ ಜೋಸೆಫ್​, ನಟ ರಜನಿಕಾಂತ್​ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.

2018 director Jude Anthany Joseph seeks Rajinikanth's 'blessings for the Oscar journey'
'2018: ಎವ್ರಿಒನ್​​ ಈಸ್ ಎ ಹೀರೋ'

By ETV Bharat Karnataka Team

Published : Oct 9, 2023, 12:07 PM IST

ನಟ ಟೊವಿನೋ ಥಾಮಸ್​ ಮುಖ್ಯಭೂಮಿಕೆಯ ಮಲಯಾಳಂ ಸಿನಿಮಾ '2018: ಎವ್ರಿಒನ್​​ ಈಸ್ ಎ ಹೀರೋ' ಆಸ್ಕರ್ 2024 ನಾಮನಿರ್ದೇಶನ ಪ್ರಕ್ರಿಯೆಗೆ ಪ್ರವೇಶ ಪಡೆದುಕೊಂಡಿದೆ. ಈ ಸಿನಿಮಾದ ಆಸ್ಕರ್​ ಪ್ರಚಾರಕ್ಕಾಗಿ ನಿರ್ದೇಶಕ ಜೂಡ್​ ಆಂಥೋನಿ ಜೋಸೆಫ್​ ಅವರು ಕಾಲಿವುಡ್​ ಹಿರಿಯ ನಟ ರಜನಿಕಾಂತ್​ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಭಾನುವಾರ ಸೂಪರ್​ಸ್ಟಾರ್​​ ಭೇಟಿಯಾದ ಫೋಟೋಗಳನ್ನು ಜೂಡ್​ ತಮ್ಮ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಒಂದು ಫೋಟೋದಲ್ಲಿ ಜೂಡ್​ ಮತ್ತು ರಜನಿ ನಗುತ್ತಾ ನಿಂತಿದ್ದಾರೆ. ಈ ವೇಳೆ, ತಲೈವಾ ಕಪ್ಪು ಕುರ್ತಾ ಮತ್ತು ಧೋತಿ ಧರಿಸಿದ್ದರು. ಜೂಡ್ ಮುದ್ರಿತ ವೈಟ್​ ಶರ್ಟ್​ ಮತ್ತು ಡೆನಿಮ್​ನಲ್ಲಿದ್ದರು. ಜೂಡ್​ ಫೋಟೋದ ಶೀರ್ಷಿಕೆಯಲ್ಲಿ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಹೆಚ್ಚಿನ ಪೋಟೋಗಳನ್ನು ಶೇರ್​ ಮಾಡುವುದಾಗಿ ಭರವಸೆ ನೀಡಿದ್ದಾರೆ. ಮತ್ತೊಂದು ಫೋಟೋದಲ್ಲಿ ರಜನಿ ಕಾಲಿಗೆ ಬಿದ್ದು ಜೂಡ್​ ಆಶೀರ್ವಾದ ಪಡೆದುಕೊಳ್ಳುತ್ತಿರುವುದನ್ನು ಕಾಣಬಹುದು. ಮತ್ತೊಂದು ಮಾತುಕತೆಯಲ್ಲಿ ತೊಡಗಿರುವ ಗ್ರೂಪ್​ ಫೋಟೋ ಆಗಿದೆ.

ಈ ವೇಳೆ ರಜನಿಕಾಂತ್​ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, "ಎಂತಹ ಚಿತ್ರ ಜೂಡ್​, ನೀವು ಹೇಗೆ ಶೂಟ್​ ಮಾಡಿದ್ದೀರಿ? ಅದ್ಭುತ ಕೆಲಸ" ಎಂದು ಕೊಂಡಾಡಿದ್ದಾರೆ. ಆಸ್ಕರ್​ ಪ್ರಯಾಣಕ್ಕಾಗಿ ಆಶೀರ್ವಾದ ಮಾಡಿದ್ದಾರೆ. ಜೊತೆಗೆ ಪ್ರತಿಷ್ಠಿತ ಪ್ರಶಸ್ತಿ ತರಲು ಪ್ರೋತ್ಸಾಹಿಸಿದ್ದಾರೆ. ಈ ಅವಕಾಶವನ್ನು ಸಾಧ್ಯವಾಗಿಸಿದ ದೇವರು ಹಾಗೂ ಅವರ ಸ್ನೇಹಿತೆ ಸೌಂದರ್ಯ ಅವರಿಗೆ ಜೂಡ್​ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಆಸ್ಕರ್ 2024 ಪ್ರಶಸ್ತಿ​ ಸಮಾರಂಭಕ್ಕೆ ಮುಹೂರ್ತ ನಿಗದಿ: ಪ್ರಮುಖ ದಿನಾಂಕಗಳ ಪಟ್ಟಿ ಹೀಗಿದೆ..

ಆಸ್ಕರ್​ ಪ್ರವೇಶಿಸಿದ '2018': ಮಲಯಾಳಂ ಸಿನಿಮಾ '2018: ಎವ್ರಿಒನ್​​ ಈಸ್ ಎ ಹೀರೋ' (2018-Everyone is a Hero) ಆಸ್ಕರ್ 2024 ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. ಟೊವಿನೋ ಥಾಮಸ್ ಮುಖ್ಯಭೂಮಿಕೆಯ ಈ ಸಿನಿಮಾ ಮೇ ತಿಂಗಳಿನಲ್ಲಿ ತೆರೆಕಂಡು ಅಭೂತಪೂರ್ವ ಯಶಸ್ಸು ಗಳಿಸಿದೆ. ಮಲಯಾಳಂ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ಈ ಸಿನಿಮಾವೂ ಒಂದು. ಚಿತ್ರವು ಆಸ್ಕರ್ 2024 ನಾಮನಿರ್ದೇಶನ ಪ್ರಕ್ರಿಯೆಗೆ ಪ್ರವೇಶ ಪಡೆದುಕೊಂಡಿದೆ.

ಈ ಚಿತ್ರವು ಕೇರಳದಲ್ಲಿ ಭಾರಿ ಅವಾಂತರ ಸೃಷ್ಟಿಸಿದ ಪ್ರವಾಹದ ಹಿನ್ನೆಲೆಯ ಕಥೆಯನ್ನೊಳಗೊಂಡಿದೆ. ಇದೀಗ ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಸ್ಥಾನ ಪಡೆಯುವ ಮೂಲಕ ಅಪರೂಪದ ಗೌರವಕ್ಕೆ ಪಾತ್ರವಾಗಿದೆ. 16 ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿ ಭಾರತೀಯ ಚಿತ್ರರಂಗದ ಹಲವು ಸಿನಿಮಾಗಳನ್ನು ಪರಿಶೀಲಿಸಿ ಅಂತಿಮವಾಗಿ '2018: ಎವ್ರಿಒನ್​​ ಈಸ್ ಎ ಹೀರೋ' ಚಿತ್ರವನ್ನು ಆಯ್ಕೆ ಮಾಡಿತು. 2018ರಲ್ಲಿ ಕೇರಳದ ಕೆಲ ಪ್ರದೇಶಗಳನ್ನು ಧ್ವಂಸಗೊಳಿಸಿದ್ದ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಈ ಚಿತ್ರಕಥೆ ಸುತ್ತುತ್ತದೆ.

ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂ.ಗಳನ್ನು ಅತ್ಯಂತ ವೇಗವಾಗಿ ತಲುಪಿದ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಜೂಡ್ ಆಂಥನಿ ಜೋಸೆಫ್ (Jude Anthany Joseph) ನಿರ್ದೇಶನದ ಈ ಚಿತ್ರದಲ್ಲಿ ಆಸಿಫ್ ಅಲಿ, ಕುಂಚಾಕೋ ಬೋಬನ್, ಲಾಲ್, ನರೈನ್, ವಿನೀತ್ ಶ್ರೀನಿವಾಸನ್, ಅಪರ್ಣಾ ಬಾಲಮುರಳಿ, ತನ್ವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ವಿಮರ್ಶಕರು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ.

ಇದನ್ನೂ ಓದಿ:ಕಪ್ಪೆರಾಗ ಸಾಕ್ಷ್ಯಚಿತ್ರಕ್ಕೆ ಗ್ರೀನ್​ ಆಸ್ಕರ್​ ಪ್ರಶಸ್ತಿ: ಅಭಿನಂದನೆ ತಿಳಿಸಿದ ಸಿಎಂ ಸಿದ್ದರಾಮಯ್ಯ

For All Latest Updates

ABOUT THE AUTHOR

...view details