ಕರ್ನಾಟಕ

karnataka

ETV Bharat / entertainment

ಯುವ ರಾಜ್​ಕುಮಾರ್​ಗೆ ನಾಯಕಿಯಾಗ್ತಾರಾ ವಿಶ್ವ ಸುಂದರಿ ಮಾನುಷಿ ಚಿಲ್ಲರ್? - 2017 Miss World Manushi Chiller

ಕೆಲ ದಿನಗಳ ಹಿಂದೆ ಬೆಂಗಳೂರಿನ ಹೊಂಬಾಳೆ ಸಂಸ್ಥೆ ಕಚೇರಿಗೆ 2017ರ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಆಗಮಿಸಿದ್ದರು. ಈ ಫೋಟೋವನ್ನು ಹೊಂಬಾಳೆ ಸಾಮಾಜಿಕ ಜಾಲತಾಣಗಳ ಪೇಜ್‌ನಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

2017-miss-world-manushi-chiller-visits-hombale-films-office
ಯುವ ರಾಜ್​ಕುಮಾರ್​ಗೆ ನಾಯಕಿಯಾಗ್ತಾರಾ ವಿಶ್ವ ಸುಂದರಿ ಮಾನುಷಿ ಚಿಲ್ಲರ್

By

Published : Jun 25, 2022, 8:42 PM IST

ನಟ ರಾಘವೇಂದ್ರ ರಾಜ್​ಕುಮಾರ್​ ದ್ವಿತೀಯ ಪುತ್ರ ಯುವ ರಾಜ್​ಕುಮಾರ್ ಅವರ ಕನ್ನಡ ಸಿನಿಮಾ ರಂಗ ಪ್ರವೇಶಕ್ಕೆ ಭರ್ಜರಿ ಸಿದ್ಧತೆ ನಡೆದಿವೆ. 'ಕೆಜಿಎಫ್'​ ಯಶಸ್ಸಿನ ಬಳಿಕ ಅಂತಾರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸದ್ಯ ಹತ್ತಾರು ಸಿನಿಮಾ ನಿರ್ಮಾಣ ಮಾಡುತ್ತಿದೆ. ಅದರಲ್ಲಿ ಯುವರಾಜ್ ಕುಮಾರ್ ಅವರದ್ದೂ ಒಂದಾಗಿದ್ದು, ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ.

ಮಾನುಷಿ ಚಿಲ್ಲರ್ - ನಿರ್ಮಾಪಕ ವಿಜಯ್ ಕಿರಗಂದೂರು ಭೇಟಿ

ಕೆಲ ದಿನಗಳ ಹಿಂದೆ ಹೊಂಬಾಳೆ ಫಿಲ್ಮ್ಸ್ ಯುವರಾಜ್ ಕುಮಾರ್​ಗೆ ಸಿನಿಮಾ ಮಾಡುವುದಾಗಿ ಘೋಷಿಸಿತ್ತು. ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾ ಕೆಲಸಗಳು ಈಗಾಗಲೇ ಶುರುವಾಗಿವೆ. ನಿರ್ಮಾಣ ಸಂಸ್ಥೆಯು ನಾಯಕಿಯ ಹುಡುಕಾಟದಲ್ಲಿ ಬ್ಯುಸಿಯಾಗಿದೆ. ಇದಕ್ಕೆ ಪೂರಕ ಎಂಬಂತೆ 2017ರ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಹಾಗೂ ನಿರ್ಮಾಪಕ ವಿಜಯ್ ಕಿರಂಗಂದೂರು ಪರಸ್ಪರ ಭೇಟಿಯಾಗಿರುವುದು ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಮಾನುಷಿ ಚಿಲ್ಲರ್

ಕೆಲ ದಿನಗಳ ಹಿಂದೆ ಬೆಂಗಳೂರಿನ ಹೊಂಬಾಳೆ ಸಂಸ್ಥೆ ಕಚೇರಿಗೆ ಮಾನುಷಿ ಚಿಲ್ಲರ್ ಆಗಮಿಸಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರು ಮಾನುಷಿ ಚಿಲ್ಲರ್​ಗೆ ಹೂಗುಚ್ಛ ನೀಡಿ ಸ್ವಾಗತಿಸಿ, ಮಾತುಕತೆ ನಡೆಸಿದ್ದಾರೆ. ಭೇಟಿಯ ಫೋಟೋವನ್ನು ಹೊಂಬಾಳೆ ಸಾಮಾಜಿಕ ಜಾಲತಾಣಗಳ ಪೇಜ್‌ನಲ್ಲಿ ಹಂಚಿಕೊಂಡಿದ್ದು, ಅವರ ನಿರ್ಮಾಣದ ಸಿನಿಮಾದಲ್ಲಿ ಮಾನುಷಿ ಅಭಿನಯಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಯುವ ರಾಜ್​ಕುಮಾರ್ ಚಿತ್ರದ ಪೋಸ್ಟರ್​

ಸದ್ಯ ಹೊಂಬಾಳೆ ಕೈಗೆತ್ತಿಕೊಂಡಿರುವ ಚಿತ್ರಗಳಲ್ಲಿ ಹೆಚ್ಚು ಆದ್ಯತೆ ಪಡೆದ ದೊಡ್ಡ ಸಿನಿಮಾವೆಂದ್ರೆ ಯುವರಾಜ್ ಕುಮಾರ್‌ ಅವರದ್ದು. ಚಿತ್ರಕ್ಕೆ ನಾಯಕಿ ಯಾರು ಎಂಬ ಕುತೂಹಲ ಇನ್ನೂ ಇದೆ. ಆ ಪಾತ್ರಕ್ಕೆ ಮಾನುಷಿ ಚಿಲ್ಲರ್ ಆಯ್ಕೆಯಾಗ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಈಗಾಗಲೇ ಮಾನುಷಿ, ಅಕ್ಷಯ್ ಕುಮಾರ್ ಜೊತೆಗೆ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಸುದೀಪ್ ಅನೂಪ್ ಭಂಡಾರಿ ಕಾಂಬಿನೇಶನ್​ನಲ್ಲಿ ಬರಲಿದೆ 'ಬಿಲ್ಲ ರಂಗ ಭಾಷ'

ABOUT THE AUTHOR

...view details