ಕರ್ನಾಟಕ

karnataka

ETV Bharat / entertainment

ಮಂಸೋರೆ ನಿರ್ದೇಶನದ 19.20.21 ಚಿತ್ರ ಬಿಡುಗಡೆಗೆ ಸಿದ್ಧ - Mansore Directed Cinema

ವಿಭಿನ್ನ ಶೀರ್ಷಿಕೆ ಮೂಲಕವೇ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿರುವ 19.20.21 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

19.20.21 Movie release soon
19.20.21 Movie release soon

By

Published : Oct 31, 2022, 3:55 PM IST

'ಹರಿವು', 'ನಾತಿಚರಾಮಿ', 'ಆ್ಯಕ್ಟ್ 1978' ಸಿನಿಮಾಗಳಿಗೆ ನಿರ್ದೇಶನ ಹೇಳಿದ ರಾಷ್ಟ್ರಪಶಸ್ತಿ ಪುರಸ್ಕೃತ ಮಂಸೋರೆ ಇದೀಗ '19.20.21’ ಎಂಬ ವಿಭಿನ್ನ ಕಥೆಯನ್ನು ಹೊತ್ತು ತರುತ್ತಿದ್ದಾರೆ. ವಿಶೇಷ ಮತ್ತು ಉತ್ತಮ ಸಂದೇಶವುಳ್ಳ ಕಥೆ ಇದಾಗಿದ್ದು, ಬಿಡುಗಡೆಯ ಬಾಗಿಲಿಗೆ ಬಂದು ನಿಂತಿದೆ.

19.20.21 ಚಿತ್ರದ ಪೋಸ್ಟರ್​

ಪೋಸ್ಟರ್​ಗಳ ಮೂಲಕ ಗಮನ ಸೆಳೆಯುತ್ತಿರುವ '19.20.21' ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಮಂಸೋರೆ ಅವರ ಹಿಂದಿನ ಸಿನಿಮಾಗಳಂತೆ ಈ ಚಿತ್ರ ಕೂಡ ಭಿನ್ನವಾಗಿರುತ್ತೆ ಅನ್ನೋದಕ್ಕೆ ಚಿತ್ರದ ಪೋಸ್ಟರ್​ಗಳೇ ಸಾಕ್ಷಿ. ಚಿತ್ರದ ಪ್ರತಿ ಪೋಸ್ಟರ್ ಸಮಾಜಕ್ಕೆ ಹೊಸದೊಂದು ಗಟ್ಟಿತನದ ಸಂದೇಶವನ್ನು ಹೇಳಲು ಹೊರಟಿದ್ದಾರೆ ಎನ್ನುವ ಸುಳಿವನ್ನು ನೀಡುತ್ತವೆ. ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೆಣೆದ ಕಥೆ ಇದಾಗಿದ್ದು, ಸೋಶಿಯಲ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಚಿತ್ರೀಕರಣ ಮುಗಿಸಿ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಸಿನಿಮಾ ಬಿಡುಗಡೆಗೂ ತಯಾರಿ ನಡೆಸುತ್ತಿದ್ದು ಶೀಘ್ರದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.

19.20.21 ಚಿತ್ರದ ಪೋಸ್ಟರ್​

ರಂಗಭೂಮಿ ಕಲಾವಿದರರಾದ ಶೃಂಗ ಬಿವಿ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪತ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ.

19.20.21 ಚಿತ್ರದ ಪೋಸ್ಟರ್​

ಯಲ್ಲಾಪುರ, ಧಾರವಾಡ, ಮಂಗಳೂರು, ಕುಂದಾಪುರ ಸೇರಿದಂತೆ ಹಲವು ಕಡೆ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಶಿವು ಬಿಕೆ ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಬಿಂದು ಮಾಲಿನಿ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್ ಆರ್ ನಿರ್ಮಾಣ ಮಾಡಿದ್ದು, ಶ್ರೀಘ್ರದಲ್ಲೇ ಪ್ರೇಕ್ಷರನ್ನು ರಂಜಿಸಲು ತೆರೆಗೆ ಬರಲಿದೆ.

ಇದನ್ನೂ ಓದಿ: ನಟಿ ಕೃತಿ ಕರಬಂದ ಬರ್ತಡೇ ಪಾರ್ಟಿಗೆ ಪ್ರಿಯಕರ ಪುಲ್ಕಿತ್ ಸಾಮ್ರಾಟ್.. ಜೋಡಿಹಕ್ಕಿ ಫೋಟೋ ವೈರಲ್​

ABOUT THE AUTHOR

...view details